ಹಾಕಿ: ಧ್ಯಾನ್‌ಚಂದ್‌ ಕ್ಲಬ್‌ಗೆ ಜಯ

7

ಹಾಕಿ: ಧ್ಯಾನ್‌ಚಂದ್‌ ಕ್ಲಬ್‌ಗೆ ಜಯ

Published:
Updated:

ಬೆಂಗಳೂರು: ಧನಂಜಯ್‌ ತಂದಿತ್ತ ಮೂರು ಗೋಲುಗಳ ನೆರವಿನಿಂದ ಧ್ಯಾನ್‌ಚಂದ್‌ ಹಾಕಿ ಕ್ಲಬ್‌ ತಂಡ ಕೆಎಸ್‌ಎಚ್‌ಎ ಆಶ್ರಯದ ರಾಜ್ಯ ‘ಸಿ’ ಡಿವಿಷನ್‌ ಹಾಕಿ ಲೀಗ್‌ ಚಾಂಪಿಯನ್‌­ಷಿಪ್‌ನಲ್ಲಿ ಜಯ ಸಾಧಿಸಿತು.ಅಕ್ಕಿತಿಮ್ಮನಹಳ್ಳಿ ರಾಜ್ಯ ಹಾಕಿ ಸಂಸ್ಥೆ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಧ್ಯಾನ್‌ಚಂದ್‌ ಕ್ಲಬ್‌ 5–3 ರಲ್ಲಿ ಚಿತ್ರದುರ್ಗ ಹಾಕಿ ಕ್ಲಬ್‌ ತಂಡವನ್ನು ಮಣಿಸಿತು.ಧನಂಜಯ್‌ ಪಂದ್ಯದ 12, 30 ಹಾಗೂ 39ನೇ ನಿಮಿಷದಲ್ಲಿ ಚೆಂಡನ್ನು ಗುರಿ ಸೇರಿಸಿದರು. ಇತರ ಗೋಲುಗಳನ್ನು ಭರತ್‌ (17) ಮತ್ತು ಮೋಹನ್‌ (33) ತಂದಿತ್ತರು. ಚಿತ್ರದುರ್ಗ ತಂಡದ ಪರ ಅಭಿಷೇಕ್‌ (5 ಮತ್ತು 10ನೇ ನಿ.) ಹಾಗೂ ಚೇತನ್‌ ರಾಮ್‌ (8) ಚೆಂಡನ್ನು ಗುರಿ ಸೇರಿಸುವಲ್ಲಿ ಯಶ ಕಂಡರು.ಅಯ್ಯಪ್ಪ ಹಾಕಿ ಅಕಾಡೆಮಿ ‘ಬಿ’ ತಂಡ 3–1 ರಲ್ಲಿ ಐಟಿಸಿ ಸ್ಪೋರ್ಟ್ಸ್‌ ಕ್ಲಬ್‌ ತಂಡವನ್ನು ಸೋಲಿಸಿತು. ವಿಜಯಿ ತಂಡದ ಪರ ಹರ್ಷ (36), ಸುಂದರ್‌ (41), ಜೊಜಿನ್‌ (50) ಹಾಗೂ ಎದುರಾಳಿ ತಂಡದ ಪರ ರಾಹುಲ್‌ (34) ಗೋಲು ಗಳಿಸಿದರು.ಗುರುವಾರ ನಡೆಯುವ ಪಂದ್ಯಗಳಲ್ಲಿ ಬಾಪೂಜಿ ಹಾಕಿ ಕ್ಲಬ್‌– ಡಿ.ಎ. ಅಸೋಸಿಯೇಷನ್‌, ಬಾಂಬರ್ಸ್‌ ಹಾಕಿ ಕ್ಲಬ್‌– ಧ್ಯಾನ್‌ಚಂದ್‌ ಕ್ಲಬ್‌ ಹಾಗೂ ಫಾಲ್ಕನ್‌ ಹಾಕಿ ಕ್ಲಬ್‌– ಬಾಷ್‌ ತಂಡಗಳು ಎದುರಾಗಲಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry