ಮಂಗಳವಾರ, ನವೆಂಬರ್ 19, 2019
23 °C

ಹಾಕಿ: ನಾಮಧಾರಿ ತಂಡಕ್ಕೆ ಗೆಲುವು

Published:
Updated:

ಬೆಂಗಳೂರು: ನಾಮಧಾರಿ ತಂಡವು ಕೆಎಸ್‌ಎಚ್‌ಎ ಆಶ್ರಯದಲ್ಲಿ ನಡೆಯುತ್ತಿರುವ `ಓಜೋನ್ ಗ್ರೂಪ್' ರಾಷ್ಟ್ರೀಯ ಹಾಕಿ ಲೀಗ್ ಚಾಂಪಿಯನ್‌ಷಿಪ್‌ನ ಸೋಮವಾರದ ಪಂದ್ಯದಲ್ಲಿ 2-1 ಗೋಲುಗಳಿಂದ ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್‌ಬಿ) ಎದುರು ಗೆಲುವು ಸಾಧಿಸಿತು.ಅಕ್ಕಿ ತಿಮ್ಮನಹಳ್ಳಿ ರಾಜ್ಯ ಹಾಕಿ ಸಂಸ್ಥೆಯ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಪಿಎನ್‌ಬಿ ತಂಡದ ಯದುವೀರ್ ಸಿಂಗ್ 31ನೇ ನಿಮಿಷದಲ್ಲಿ ಗೋಲು ಗಳಿಸಿ ಆರಂಭಿಕ ಮುನ್ನಡೆ ತಂದುಕೊಟ್ಟರು. ಆದರೆ, ನಾಮಧಾರಿ ತಂಡದ ಗುರ್ವಿಂದರ್ ಸಿಂಗ್ 46ನೇ ನಿಮಿಷದಲ್ಲಿ ಗೋಲು ಗಳಿಸಿ 1-1ರಲ್ಲಿ ಸಮಬಲ ಸಾಧಿಸಿದರು. ಸಂತಸಿಂಗ್ 53ನೇ ನಿಮಿಷದಲ್ಲಿ ಎರಡನೇ ಗೋಲು ಗಳಿಸಿ ನಾಮಧಾರಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.ಭಾರತ ಕ್ರೀಡಾ ಪ್ರಾಧಿಕಾರ ಹಾಗೂ ಏರ್ ಇಂಡಿಯಾ ತಂಡಗಳ ನಡುವಿನ ದಿನದ ಇನ್ನೊಂದು ಪಂದ್ಯ 2-2ಗೋಲುಗಳಿಂದ ಡ್ರಾದಲ್ಲಿ ಅಂತ್ಯಕಂಡಿತು.ಮಂಗಳವಾರದ ಪಂದ್ಯಗಳು: ಎಂಇಜಿ-ಬಿಪಿಸಿಎಲ್ (ಮಧ್ಯಾಹ್ನ 3ಕ್ಕೆ), ಫೋರ್ಟಿಸ್-ಐಒಸಿಎಲ್ (ಸಂಜೆ 4.30ಕ್ಕೆ) ಹಾಗೂ ಏರ್ ಇಂಡಿಯಾ-ನಾಮಧಾರಿ (ಸಂಜೆ 6ಕ್ಕೆ).

ಪ್ರತಿಕ್ರಿಯಿಸಿ (+)