ಹಾಕಿ ನೋಡಿ ಮುದ್ರೆ

ಬುಧವಾರ, ಜೂಲೈ 17, 2019
26 °C
ಭಾಗ 2

ಹಾಕಿ ನೋಡಿ ಮುದ್ರೆ

Published:
Updated:

ಸೂರ್ಯ ಮುದ್ರೆ

ಉಂಗುರದ ಬೆರಳಿನ ತುದಿಯನ್ನು ಹೆಬ್ಬೆರಳಿನ ಬುಡದಲ್ಲಿ ಇರಿಸಿ. ಹೆಬ್ಬೆರಳನ್ನು ಉಂಗುರ ಬೆರಳಿನ ಮೇಲೆ ಹಗುರವಾಗಿ ಒತ್ತಿ ಇಡಬೇಕು.  ಉಳಿದ ಬೆರಳುಗಳು ನೇರವಾಗಿ ಇರಲಿ.ಪ್ರಯೋಜನ

ಈ ಮುದ್ರೆಯಿಂದ ಶರೀರದ ಬೊಜ್ಜನ್ನು ಕರಗಿಸಬಹುದು. ದೇಹದ ಅತಿಯಾದ ಕೊಬ್ಬನ್ನು ಕರಗಿಸಿ ತೂಕವನ್ನು ಕಡಿಮೆ ಮಾಡುತ್ತದೆ. ದೇಹದಲ್ಲಿ ಉಷ್ಣತೆಯನ್ನು ಉಂಟುಮಾಡಿ ಜೀರ್ಣ ಕ್ರಿಯೆಯನ್ನು ಸುಗಮವಾಗಿಸುತ್ತದೆ. ಮಧುಮೇಹ ಮತ್ತು ಪಿತ್ತಜನಕಾಂಗದ ಕಾಯಿಲೆಗಳಿಗೆ ಇದು ಔಷಧದಂತೆ ಕೆಲಸ ಮಾಡುತ್ತದೆ.ರಕ್ತದಲ್ಲಿನ ಕೊಲೆಸ್ಟ್ರಾಲ್ ಮಟ್ಟ ಸಹ ಇಳಿಯುತ್ತದೆ. ಕಫ, ಶೀತ, ಗಂಟಲು ಸಂಬಂಧಿ ಸಮಸ್ಯೆಗಳಿರುವಾಗ ಸೂರ್ಯ ಮುದ್ರೆ ಮಾಡಿದರೆ ಉತ್ತಮ ಫಲ ಕಾಣಬಹುದು. ಇದನ್ನು ಸುಮಾರು 10- 40 ನಿಮಿಷಗಳವರೆಗೂ ಮಾಡಬಹುದು. ದೇಹದ ಉಷ್ಣತೆಯನ್ನು ಹೆಚ್ಚಿಸಿ, ಚಳಿಯ ಅನುಭವವನ್ನು ಕಡಿಮೆ ಮಾಡಿ ಉತ್ಸಾಹ, ಚೈತನ್ಯ ತುಂಬುತ್ತದೆ. ಶರೀರದ ತೊಂದರೆಗಳು ಕಡಿಮೆಯಾದಾಗ ಸೂರ್ಯ ಮುದ್ರೆ ಮಾಡುವುದನ್ನು ನಿಲ್ಲಿಸಬೇಕು.

ಅಪಾನ ಮುದ್ರೆ

ಮಧ್ಯದ ಬೆರಳು ಮತ್ತು ಉಂಗುರ ಬೆರಳಿನ ತುದಿಯನ್ನು ಹೆಬ್ಬೆರಳಿನ ತುದಿಗೆ ಸೇರಿಸಬೇಕು. ಉಳಿದ ಎರಡು ಬೆರಳುಗಳು ನೇರವಾಗಿ ಇರಲಿ. ಪ್ರಯೋಜನ

ಈ ಮುದ್ರೆ ಮಧುಮೇಹ ಕಾಯಿಲೆಯನ್ನು ನಿಯಂತ್ರಿಸುತ್ತದೆ. ಮಲಬದ್ಧತೆ, ಮೂಲವ್ಯಾಧಿ ಸಮಸ್ಯೆಯನ್ನು ನಿವಾರಿಸುವಲ್ಲಿ ಸಹಾಯ ಮಾಡುತ್ತದೆ. ಜೀರ್ಣ ಶಕ್ತಿಯನ್ನು ಹೆಚ್ಚಿಸುತ್ತದೆ.ಶರೀರ ಅಧಿಕವಾಗಿ ಬೆವರುವುದನ್ನು ತಡೆಯುತ್ತದೆ. ಹಲ್ಲು ನೋವು ಹಾಗೂ ವಸಡು ಸಂಬಂಧಿ ನೋವನ್ನು ಕಡಿಮೆ ಮಾಡುತ್ತದೆ.ದೇಹದ ಜಡತ್ವವನ್ನು ಹೋಗಲಾಡಿಸುತ್ತದೆ. ವಾಂತಿಯ ನಿಯಂತ್ರಣಕ್ಕೂ ಸಹಕಾರಿ.ವಿಸರ್ಜನಾ ಕಾರ್ಯ ಸಮರ್ಪಕವಾಗಿ ಆಗುತ್ತದೆ.ಸುಮಾರು 30- 45 ನಿಮಿಷ ಈ ಮುದ್ರೆಯನ್ನು ಮಾಡಿದರೆ ಉತ್ತಮ ಆರೋಗ್ಯ ಪಡೆಯಬಹುದು. ಇದರೊಂದಿಗೆ 10- 30 ನಿಮಿಷ ಪ್ರಾಣ ಮುದ್ರೆಯನ್ನು ಸಹ ಮಾಡಬೇಕು.

ಪೃಥ್ವಿ ಮುದ್ರೆ

ಹೆಬ್ಬೆರಳು ಮತ್ತು ಉಂಗುರ ಬೆರಳುಗಳ ತುದಿಯನ್ನು ಜೋಡಿಸಬೇಕು. ಉಳಿದ ಬೆರಳುಗಳು ನೇರವಾಗಿ ಇರಲಿ. ಕೈಗಳು ಮೇಲ್ಮುಖವಾಗಿರಲಿ. ಪ್ರಯೋಜನ

ಶರೀರದ ಸರ್ವಾಂಗೀಣ ಬೆಳವಣಿಗೆಗೆ, ಅಂದರೆ ದೃಢಕಾಯ ಹಾಗೂ ಜೀವನೋತ್ಸಾಹ ವೃದ್ಧಿಗೆ ಈ ಮುದ್ರೆ ಕಾರಣವಾಗುತ್ತದೆ.ದೇಹ ಮತ್ತು ಮನಸ್ಸಿನ ದೌರ್ಬಲ್ಯವನ್ನು ಗುಣಪಡಿಸುತ್ತದೆ. ಜ್ವರ ಇಳಿಸುತ್ತದೆ.ಶರೀರಕ್ಕೆ ಹೊಸ ಚೈತನ್ಯ, ದೃಢತೆಯನ್ನು ನೀಡುವುದರೊಂದಿಗೆ ಮನಸ್ಸಿಗೆ ಶಾಂತಿ, ನೆಮ್ಮದಿ ತರುತ್ತದೆ. ದೇಹವು ಚುರುಕಾಗಿ ಮುಖಕ್ಕೆ ಒಂದು ಬಗೆಯ ಹೊಳಪು ಬರಲು ಸಹಾಯವಾಗುತ್ತದೆ. ಕೂದಲು ಉದುರುವ ಸಮಸ್ಯೆಯೂ ಶಮನವಾಗುತ್ತದೆ.ಪಿತ್ತ ದೋಷ ನಿವಾರಣೆಗೆ, ಬಾವು ಕಡಿಮೆಯಾಗಲು, ಸ್ನಾಯುಗಳ ಬಲವರ್ಧನೆಗೆ ಅಲ್ಲದೆ ಶರೀರದ ತೂಕ ಹೆಚ್ಚಾಗಲು ಸಹ ಈ ಮುದ್ರೆ ನೆರವಾಗುತ್ತದೆ.ಶರೀರದಲ್ಲಿರುವ ಕಲ್ಮಶಗಳನ್ನು ವಿಸರ್ಜಿಸುವ ಕಾರ್ಯವನ್ನು ಸಮರ್ಥವಾಗಿ ನಡೆಸುತ್ತದೆ.10- 20 ನಿಮಿಷ ಈ ಮುದ್ರೆಯನ್ನು ಮಾಡಬಹುದು.

 

ಭಾಗ 1- ಅನಾರೋಗ್ಯಕ್ಕೆ ಬೀಗ ಮುದ್ರೆ

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry