ಹಾಕಿ: ಪಾಕ್‌ ಮಣಿಸಿದ ಭಾರತ

7

ಹಾಕಿ: ಪಾಕ್‌ ಮಣಿಸಿದ ಭಾರತ

Published:
Updated:

ಜೋಹರ್‌ ಬಹ್ರು, ಮಲೇಷ್ಯಾ (ಪಿಟಿಐ): ಭಾರತ ತಂಡದವರು ಇಲ್ಲಿ ನಡೆಯುತ್ತಿರುವ ಸುಲ್ತಾನ್‌ ಆಫ್‌ ಜೋಹರ್‌ ಕಪ್‌ 21 ವರ್ಷದೊಳಗಿನವರ ಹಾಕಿ ಟೂರ್ನಿಯಲ್ಲಿ ಭರ್ಜರಿ ಗೆಲುವು ಸಾಧಿಸಿದ್ದಾರೆ.ಬುಧವಾರ ನಡೆದ ಪಂದ್ಯದಲ್ಲಿ ಭಾರತ 4–0 ಗೋಲುಗಳಿಂದ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡವನ್ನು ಮಣಿಸಿತು. ಈ ಮೂಲಕ ಗುಂಪಿನಲ್ಲಿ ಅಗ್ರಸ್ಥಾನ ಪಡೆದಿದ್ದು ಫೈನಲ್‌ ತಲುಪುವ ಹಾದಿಯಲ್ಲಿದೆ. ಈ ತಂಡದ ಬಳಿ ಒಟ್ಟು 9 ಪಾಯಿಂಟ್‌ಗಳಿವೆ.ಈ ಪಂದ್ಯದ ಮೊದಲಾರ್ಧದಲ್ಲಿ ಯಾವುದೇ ಗೋಲು ಬರಲಿಲ್ಲ. ಆದರೆ ದ್ವಿತೀಯಾರ್ಧದಲ್ಲಿ ಭಾರತ ತಂಡದವರು ಅಮೋಘ ಪ್ರದರ್ಶನ ತೋರಿದರು. 11 ನಿಮಿಷಗಳ ಅಂತರದಲ್ಲಿ  ಮೂರು ಗೋಲು ದಾಖಲಿಸಿದರು.ಸುಖ್‌ಮಂಜಿತ್‌ (38ನೇ ಹಾಗೂ 46ನೇ ನಿಮಿಷ), ಇಮ್ರಾನ್‌ ಖಾನ್‌ (45ನೇ ನಿ.) ಮತ್ತು ರಮಣದೀಪ್‌ ಸಿಂಗ್‌ (61ನೇ ನಿ.) ಚೆಂಡನ್ನು ಗುರಿ ಸೇರಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry