ಶನಿವಾರ, ನವೆಂಬರ್ 16, 2019
24 °C

ಹಾಕಿ: ಪಿಎನ್‌ಬಿಗೆ ಮತ್ತೊಂದು ಗೆಲುವು

Published:
Updated:

ಬೆಂಗಳೂರು: ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್‌ಬಿ) ತಂಡ ಕೆಎಸ್‌ಎಚ್‌ಎ ಆಶ್ರಯದಲ್ಲಿ ನಡೆಯುತ್ತಿರುವ `ಓಜೋನ್ ಗ್ರೂಪ್' ರಾಷ್ಟ್ರೀಯ ಹಾಕಿ ಲೀಗ್ ಚಾಂಪಿಯನ್‌ಷಿಪ್‌ನ ಶುಕ್ರವಾರದ ಪಂದ್ಯದಲ್ಲಿ 1-0 ಗೋಲುಗಳಿಂದ ಮದ್ರಾಸ್ ಎಂಜಿನಿಯರಿಂಗ್ ಗ್ರೂಪ್ (ಎಂಇಜಿ) ಎದುರು ಗೆಲುವು ಸಾಧಿಸಿತು.ಅಕ್ಕಿ ತಿಮ್ಮನಹಳ್ಳಿ ರಾಜ್ಯ ಹಾಕಿ ಸಂಸ್ಥೆಯ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ 36ನೇ ನಿಮಿಷದಲ್ಲಿ ಅಜಿತೇಶ್ ರಾಯ್ ಗೋಲು ಗಳಿಸಿ ಪಿಎನ್‌ಬಿ ತಂಡದ ಗೆಲುವಿನ ರೂವಾರಿ ಎನಿಸಿದರು. ಪಿಎನ್‌ಬಿ ಹಿಂದಿನ ಪಂದ್ಯದಲ್ಲಿ ಫೋರ್ಟಿಸ್ ತಂಡವನ್ನು ಮಣಿಸಿತ್ತು.ಗುರುವಾರ ನಡೆದ ಪಂದ್ಯದಲ್ಲಿ ಐಒಸಿಎಲ್ 4-1ರಲ್ಲಿ ಎಎಸ್‌ಸಿ ಮೇಲೆ ಗೆಲುವು ಪಡೆದಿತ್ತು. ಬಿಪಿಸಿಎಲ್ ಹಾಗೂ ನಾಮಧಾರಿ ತಂಡಗಳ ನಡುವಿನ ದಿನದ ಇನ್ನೊಂದು ಪಂದ್ಯವು 2-2ಗೋಲುಗಳಿಂದ ಡ್ರಾದಲ್ಲಿ ಅಂತ್ಯ ಕಂಡಿತ್ತು.

ಪ್ರತಿಕ್ರಿಯಿಸಿ (+)