ಸೋಮವಾರ, ಮೇ 10, 2021
21 °C

ಹಾಕಿ: ಪೋಸ್ಟಲ್‌ಗೆ ಸುಲಭ ಜಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಪೋಸ್ಟಲ್ ತಂಡದವರು ಇಲ್ಲಿ ನಡೆಯುತ್ತಿರುವ ಕರ್ನಾಟಕ ರಾಜ್ಯ ಹಾಕಿ ಸಂಸ್ಥೆ ಆಶ್ರಯದ `ಎ~ ಡಿವಿಷನ್ ಹಾಕಿ ಲೀಗ್ ಚಾಂಪಿಯನ್‌ಷಿಪ್ ಪಂದ್ಯದಲ್ಲಿ ಸುಲಭ ಗೆಲುವು ಸಾಧಿಸಿ ಪೂರ್ಣ ಪಾಯಿಂಟ್ಸ್ ಸಂಗ್ರಹಿಸಿದರು.ಅಕ್ಕಿತಿಮ್ಮನಹಳ್ಳಿ ರಾಜ್ಯ ಹಾಕಿ ಸಂಸ್ಥೆ  ಕ್ರೀಡಾಂಗಣದಲ್ಲಿ  ಶುಕ್ರವಾರ ನಡೆದ ಪಂದ್ಯದಲ್ಲಿ ಪೋಸ್ಟಲ್ ತಂಡ 6-1 ಗೋಲುಗಳಿಂದ ಬಿಇಎಲ್ ತಂಡವನ್ನು ಸುಲಭವಾಗಿ ಮಣಿಸಿತು. ವಿರಾಮದ ವೇಳೆಗೆ 3-0 ಗೋಲುಗಳಿಂದ ಮುಂದಿದ್ದ ವಿಜಯಿ ತಂಡದ ಸ್ಯಾಮ್ಯುಯಲ್ ನಿರಂಜನ್ (2), ಕಮಲಾ ಕಣ್ಣನ್ (2), ತಾರಾನಾಥ್, ಪ್ರಕಾಶ್ ಚಲ್ಕೆ ಹಾಗೂ ಎದುರಾಳಿ ತಂಡದ ಪುನೀತ್ ಗೋಲು ತಂದಿತ್ತರು.

ಪಂದ್ಯ ಡ್ರಾ: ಇದಕ್ಕೆ ಮೊದಲು ನಡೆದ ಆರ್‌ಬಿಐ ಮತ್ತು ಬಿಎಸ್‌ಎನ್‌ಎಲ್ ನಡುವಣ ಇದೇ ಲೀಗ್ ಪಂದ್ಯ 2-2 ಗೋಲು ಡ್ರಾ ಆಯಿತು.ಉತ್ತಮ ಹೋರಾಟದಿಂದ ಕೂಡಿದ್ದ ಪಂದ್ಯದಲ್ಲಿ ಆರ್‌ಬಿಐ ತಂಡದ ಸಂತೋಷ್, ಕಿಶೋರ್ ಹಾಗೂ ಬಿಎಸ್‌ಎನ್‌ಎಲ್ ತಂಡದ ಟಿ.ಜೆ. ಬೋಪಣ್ಣ, ಮಹಮದ್ ನಜೀಮ್ ಬೆಪಾರಿ ಚೆಂಡನ್ನು ಗುರಿ ಮುಟ್ಟಿಸಿದರು.

ನಾಳೆ (ಶನಿವಾರ) ಮಧ್ಯಾಹ್ನ 2-30ಕ್ಕೆ ನಡೆಯುವ ಪಂದ್ಯದಲ್ಲಿ ಕೂರ್ಗ್ ಬ್ಲೂಸ್-ಸಿನರ್ಜಿ ಹಾಕಿ ಕ್ಲಬ್ ಆನಂತರ ಬಿಇಎಲ್-ಫ್ಲೈಯಿಂಗ್ ಹಾಕಿ ಕ್ಲಬ್ ಪರಸ್ಪರ ಪೈಪೋಟಿ ನಡೆಸಲಿವೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.