ಹಾಕಿ: ಫೈನಲ್‌ಗೆ ಎಂಇಜಿ, ಆರ್ಮಿ ಗ್ರೀನ್

7

ಹಾಕಿ: ಫೈನಲ್‌ಗೆ ಎಂಇಜಿ, ಆರ್ಮಿ ಗ್ರೀನ್

Published:
Updated:

ಬೆಂಗಳೂರು: ಎಂಇಜಿ `ಎ~ ಹಾಗೂ ಆರ್ಮಿ ಗ್ರೀನ್ ತಂಡಗಳು ಕೊಡವ ಸಮಾಜ ಸ್ಪೋರ್ಟ್ಸ್ ಮತ್ತು ರಿಕ್ರಿಯೇಷನ್ ಕ್ಲಬ್ ಆಶ್ರಯದಲ್ಲಿ ನಡೆಯುತ್ತಿರುವ 15ನೇ ವರ್ಷದ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಸ್ಮಾರಕ ಹಾಕಿ ಟೂರ್ನಿಯ ಫೈನಲ್‌ನಲ್ಲ ಪಂದ್ಯದಲ್ಲಿ ಸೆಣಸಲಿವೆ.ಅಕ್ಕಿ ತಿಮ್ಮನಹಳ್ಳಿ ರಾಜ್ಯ ಹಾಕಿ ಸಂಸ್ಥೆ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಎಂಇಜಿ 3-1ಗೋಲುಗಳಿಂದ ಕೆಎಸ್‌ಪಿ ತಂಡವನ್ನು ಮಣಿಸಿತು.ವಿಜಯಿ ತಂಡದ ಎಸ್.  ಜಯಶೀಲನ್ (27ನೇ ನಿ.) ಸಿರಾಜ್ (32ನೇ ನಿ.) ಹಾಗೂ ಸುಬ್ರಮಣಿ (60ನೇ ನಿ.) ಗೋಲು ಗಳಿಸಿದರು. ಇನ್ನೊಂದು ನಾಲ್ಕರ ಘಟ್ಟದ ಪಂದ್ಯದಲ್ಲಿ ಆರ್ಮಿ ಗ್ರೀನ್ 8-7ಗೋಲುಗಳಿಂದ ಸೆಡನ್ ಡೆತ್ ಮೂಲಕ ಎಸ್‌ಎಐ ಎದುರು ಗೆಲುವು ಸಾಧಿಸಿ ಅಂತಿಮ ಘಟ್ಟಕ್ಕೆ ಲಗ್ಗೆ ಇಟ್ಟಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry