ಶುಕ್ರವಾರ, ನವೆಂಬರ್ 22, 2019
22 °C

ಹಾಕಿ: ಫೋರ್ಟಿಸ್ ತಂಡಕ್ಕೆ ಜಯ

Published:
Updated:
ಹಾಕಿ: ಫೋರ್ಟಿಸ್ ತಂಡಕ್ಕೆ ಜಯ

ಬೆಂಗಳೂರು: ಶಶಿ ಟೊಪ್ನೊ ತಂದಿತ್ತ ಎರಡು ಅಮೂಲ್ಯ ಗೋಲುಗಳ ನೆರವಿನಿಂದ ಫೋರ್ಟಿಸ್ ತಂಡದವರು ಇಲ್ಲಿ ನಡೆಯುತ್ತಿರುವ ಕರ್ನಾಟಕ ರಾಜ್ಯ ಹಾಕಿ ಸಂಸ್ಥೆ ಆಶ್ರಯದ `ಓಜೋನ್ ಗ್ರೂಪ್' ರಾಷ್ಟ್ರೀಯ ಹಾಕಿ ಲೀಗ್ ಟೂರ್ನಿಯಲ್ಲಿ ಗೆಲುವು ಸಾಧಿಸಿದ್ದಾರೆ.ಅಕ್ಕಿತಿಮ್ಮನಹಳ್ಳಿ ರಾಜ್ಯ ಹಾಕಿ ಸಂಸ್ಥೆ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಫೋರ್ಟಿಸ್ 4-3 ಗೋಲುಗಳಿಂದ ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಬಿಪಿಸಿಎಲ್) ತಂಡವನ್ನು ಪರಾಭವಗೊಳಿಸಿತು.ವಿಜಯಿ ಫೋರ್ಟಿಸ್ ತಂಡದ ಶಶಿ (16ನೇ ಹಾಗೂ 57ನೇ ನಿಮಿಷ), ಹೋರೊ ಬಿ (33ನೇ  ನಿ.) ಹಾಗೂ ಜಯಂತ್ (49ನೇ ನಿ.) ಗೋಲು ತಂದಿತ್ತರು. ಪರಾಭವಗೊಂಡ ಬಿಪಿಸಿಎಲ್ ಪರ ಗುರುಪ್ರೀತ್ ಸಿಂಗ್ (7ನೇ ಹಾಗೂ 53ನೇ ನಿ.), ಜರ್ನಾಲಿ ಸಿಂಗ್ (40ನೇ ನಿ.) ಚೆಂಡನ್ನು ಗುರಿ ಸೇರಿಸಿದರು.ಏರ್ ಇಂಡಿಯಾಕ್ಕೆ ಗೆಲುವು: ಇನ್ನೊಂದು ಪಂದ್ಯದಲ್ಲಿ ಏರ್ ಇಂಡಿಯಾ 4-2 ಗೋಲುಗಳಿಂದ ಪಂಜಾಬ್ ನ್ಯಾಷನಲ್ ಬ್ಯಾಂಕ್ ಎದುರು ಗೆಲುವು ಸಾಧಿಸಿತು. ವಿಜಯಿ ತಂಡ ವಿರಾಮದ ವೇಳೆಗೆ 3-1 ಗೋಲುಗಳಿಂದ ಮುನ್ನಡೆ ಸಾಧಿಸಿತ್ತು.ಏರ್ ಇಂಡಿಯಾದ ಜೋಗ ಸಿಂಗ್ (4ನೇ ನಿ.), ಶಿವೇಂದ್ರ ಸಿಂಗ್ (11ನೇ ನಿ.), ಅರ್ಜುನ್ ಹಾಲಪ್ಪ (21ನೇ ನಿ.) ಗೋಲು ಗಳಿಸಿದರು. 51ನೇ ನಿಮಿಷದಲ್ಲಿ ಉಡುಗೊರೆ ಗೋಲು ಲಭಿಸಿತು. ಪಿಎನ್‌ಬಿ ತಂಡದ ರಂಜಿತ್ ಸಿಂಗ್ ಜೂನಿಯರ್ (22ನೇ ನಿ.) ಹಾಗೂ ಯಧುವೀರ್ ಸಿಂಗ್ (57ನೇ ನಿ.) ಗೋಲು ತಂದಿತ್ತರು.

ಪ್ರತಿಕ್ರಿಯಿಸಿ (+)