ಹಾಕಿ: ಬದಲಾದ ಬಣ್ಣದ ಟರ್ಫ್‌ನಲ್ಲಿ ಆಟ, ಹಸಿರು ಬದಲು ನೀಲಿ:ಹೊಂದಿಕೊಳ್ಳಲು ಕಷ್ಟವೇನಲ್ಲ: ರಘು

7

ಹಾಕಿ: ಬದಲಾದ ಬಣ್ಣದ ಟರ್ಫ್‌ನಲ್ಲಿ ಆಟ, ಹಸಿರು ಬದಲು ನೀಲಿ:ಹೊಂದಿಕೊಳ್ಳಲು ಕಷ್ಟವೇನಲ್ಲ: ರಘು

Published:
Updated:
ಹಾಕಿ: ಬದಲಾದ ಬಣ್ಣದ ಟರ್ಫ್‌ನಲ್ಲಿ ಆಟ, ಹಸಿರು ಬದಲು ನೀಲಿ:ಹೊಂದಿಕೊಳ್ಳಲು ಕಷ್ಟವೇನಲ್ಲ: ರಘು

ಬೆಂಗಳೂರು: `ನೀಲಿ ಬಣ್ಣದ ಟರ್ಫ್ ನಮಗೆ ಹೊಸ ಅನುಭವ ನೀಡಿದೆ. ಆರಂಭದಲ್ಲಿ ಕೊಂಚ ಕಷ್ಟ ಎನಿಸಿತು. ಆದರೆ ಒಂದೆರಡು ಪಂದ್ಯ ಆಡಿದ ಮೇಲೆ ಯಾವುದೇ ಸಮಸ್ಯೆ ಆಗಲಿಲ್ಲ. ಹಾಗಾಗಿ ಬದಲಾದ ಬಣ್ಣಕ್ಕೆ ಹೊಂದಿಕೊಳ್ಳುವುದು ಕಷ್ಟವೇನಲ್ಲ~ ಎಂದು ಭಾರತ ಹಾಕಿ ತಂಡದ ಆಟಗಾರ ವಿ.ಆರ್.ರಘುನಾಥ್ ತಿಳಿಸಿದ್ದಾರೆ.ಹಸಿರು ಬಣ್ಣಕ್ಕೆ ಬದಲಾಗಿ ಈ ಬಾರಿಯ ಒಲಿಂಪಿಕ್ಸ್‌ನಲ್ಲಿ ನೀಲಿ ಬಣ್ಣದ ಟರ್ಫ್‌ನಲ್ಲಿ ಹಳದಿ ಚೆಂಡಿನೊಂದಿಗೆ ಹಾಕಿ ನಡೆಯಲಿದೆ. ಇದು ಆಟಗಾರರಿಗೆ ಸವಾಲಾಗಿ ಪರಿಣಮಿಸಿದೆ. ಹಾಕಿ ಕ್ರೀಡೆಯನ್ನು ಮನರಂಜನೀಯಗೊಳಿಸಲು ಹಾಗೂ ಹೆಚ್ಚು ಜನರನ್ನು ಸೆಳೆಯಲು ಅಂತರರಾಷ್ಟ್ರೀಯ ಹಾಕಿ ಫೆಡರೇಷನ್ ಈ ಬದಲಾವಣೆಗೆ ಮುಂದಾಗಿದೆ.ಲಂಡನ್‌ನಲ್ಲಿ ನಡೆದ ನಾಲ್ಕು ರಾಷ್ಟ್ರಗಳ `ಒಲಿಂಪಿಕ್ಸ್ ಹಾಕಿ ಟೆಸ್ಟ್~ ಟೂರ್ನಿಯಲ್ಲಿ ನೀಲಿ ಬಣ್ಣದ ಟರ್ಫ್‌ನಲ್ಲಿ ಆಡಿ ಪ್ರಯೋಗ ನಡೆಸಲಾಗಿದೆ. ಆದರೆ ಈ ಟೂರ್ನಿಯಲ್ಲಿ ಭಾರತ ಎಲ್ಲಾ ಪಂದ್ಯಗಳಲ್ಲಿ ಸೋಲು ಕಂಡಿತು.

`ಆರಂಭದಲ್ಲಿ ಎಲ್ಲವೂ ಕಷ್ಟವಾಗುತ್ತದೆ. ಆದರೆ ಪ್ರಯೋಗಕ್ಕೆ ತೆರೆದುಕೊಳ್ಳದಿದ್ದರೆ ಹೇಗೆ? ಪ್ರತಿ ಕ್ರೀಡೆಯಲ್ಲಿ ಈಗ ಬದಲಾವಣೆ ಕಾಣುತ್ತಿದ್ದೇವೆ.

 

ಹಾಗಾಗಿ ಹಾಕಿಯಲ್ಲಿ ಈಗ ಮಾಡಲಾಗಿರುವ ಹೊಸ ಪ್ರಯೋಗವನ್ನು ಒಪ್ಪಿಕೊಳ್ಳಲೇಬೇಕು~ ಎಂದು ಡ್ರ್ಯಾಕ್ ಫ್ಲಿಕರ್ ರಘುನಾಥ್ `ಪ್ರಜಾವಾಣಿ~ಗೆ ತಿಳಿಸಿದರು.ಈ ಟೂರ್ನಿಯಲ್ಲಿ ಸೋಲು ಕಂಡ ಬಗ್ಗೆ ಪ್ರತಿಕ್ರಿಯಿಸಿದ ಅವರು `ಆಸ್ಟ್ರೇಲಿಯಾ, ಜರ್ಮನಿ ಬಲಿಷ್ಠ ತಂಡಗಳು ಎಂಬುದು ಎಲ್ಲರಿಗೂ ಗೊತ್ತೇ ಇದೆ.

 

ಆದರೆ ನಾವು ಆ ತಂಡಗಳಿಗೆ ತುಂಬಾ ಪೈಪೋಟಿ ನೀಡಿದೆವು. ನೂರರಷ್ಟು ಪ್ರಯತ್ನ ಹಾಕಿದೆವು. ಜೊತೆಗೆ ನಾವು ಯಾವ ಮಟ್ಟದಲ್ಲಿದ್ದೇವೆ ಎಂಬುದು ಈ ಟೂರ್ನಿಯಿಂದ ಗೊತ್ತಾಗಿದೆ~ ಎಂದರು.`ಒಲಿಂಪಿಕ್ಸ್‌ಗೆ ಸಿದ್ಧರಾಗಲು ಇನ್ನೂ ತುಂಬಾ ಸಮಯವಿದೆ. ಅಜ್ಲಾನ್ ಷಾ ಕಪ್ ಸೇರಿದಂತೆ ಮುಂದಿನ ಟೂರ್ನಿಗಳಲ್ಲಿ ನಾವು ನೀಲಿ ಟರ್ಫ್‌ನಲ್ಲಿಯೇ ಆಡಲಿದ್ದೇವೆ. ಸುಮಾರು 20 ಪಂದ್ಯಗಳನ್ನು ಆಡಲಿದ್ದೇವೆ~ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry