ಬುಧವಾರ, ಅಕ್ಟೋಬರ್ 16, 2019
21 °C

ಹಾಕಿ: ಬಿಇಎಂಎಲ್‌ಗೆ ಗೆಲುವು

Published:
Updated:

ಬೆಂಗಳೂರು: ಬಿಇಎಂಎಲ್ ತಂಡದವರು ಇಲ್ಲಿ ನಡೆಯುತ್ತಿರುವ ಡಿ.ಎಸ್. ಮೂರ್ತಿ ಮತ್ತು ವಿ. ಕರುಣಾಕರನ್ ಸ್ಮಾರಕ ರಾಜ್ಯಮಟ್ಟದ ಹಾಕಿ ಟೂರ್ನಿಯ ಪಂದ್ಯದಲ್ಲಿ ಸುಲಭ ಗೆಲುವು ಪಡೆದರು.ಅಕ್ಕಿತಿಮ್ಮನಹಳ್ಳಿ ರಾಜ್ಯ ಹಾಕಿ ಸಂಸ್ಥೆ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಬಿಇಎಂಎಲ್ 4-1 ಗೋಲುಗಳಿಂದ ಕೆಜಿಎಫ್‌ನ ಐಡಿಯಲ್ ಸ್ಪೋರ್ಟ್ಸ್ ಕ್ಲಬ್ ತಂಡವನ್ನು ಮಣಿಸಿತು.ನಾಗಲಿಂಗಸ್ವಾಮಿ (5 ಮತ್ತು 29ನೇ ನಿಮಿಷ) ಹಾಗೂ ರಮೇಶ್ (37 ಮತ್ತು 55ನೇ ನಿ.) ತಲಾ ಎರಡು ಗೋಲುಗಳನ್ನು ಗಳಿಸಿ ಬಿಇಎಂಎಲ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಐಡಿಯಲ್ ತಂಡದ ಷಣ್ಮುಗಂ 39ನೇ ನಿಮಿಷದಲ್ಲಿ ಚೆಂಡನ್ನು ಗುರಿ ಸೇರಿಸಿ ಸೋಲಿನ ಅಂತರ ತಗ್ಗಿಸಿದರು.ದಿನದ ಮತ್ತೊಂದು ಪಂದ್ಯದಲ್ಲಿ ಪಿಸಿಟಿಸಿ ತಂಡ 4-3 ಗೋಲುಗಳಿಂದ ಡಿವೈಎಸ್‌ಎಸ್ ವಿರುದ್ಧ ಜಯ ಪಡೆಯಿತು. ಮೂರು ಗೋಲುಗಳನ್ನು ತಂದಿತ್ತ (12, 13 ಹಾಗೂ 47) ರಾಜೇಶ್ ಪಿಸಿಟಿಸಿ ತಂಡದ `ಹೀರೊ~ ಆಗಿ ಮೆರೆದರು. ಮತ್ತೊಂದು ಗೋಲನ್ನು ಸಚಿನ್ (43) ಗಳಿಸಿದರು.ಸೋಲು ಅನುಭವಿಸುವ ಮುನ್ನ ಪ್ರಬಲ ಪೈಪೋಟಿ ನೀಡಿದ ಡಿವೈಎಸ್‌ಎಸ್ ತಂಡದ ಮೂರೂ ಗೋಲುಗಳನ್ನು ಗಳಿಸಿದ ಸಚಿನ್ ಮಲಾಡ್ (31, 40 ಹಾಗೂ 41) `ಹ್ಯಾಟ್ರಿಕ್~ ಸಾಧನೆ ಮಾಡಿದರು. ಆದರೆ ಅವರ ಪ್ರಯತ್ನ ಕೊನೆಯಲ್ಲಿ ವಿಫಲವಾಯಿತು.ಶುಕ್ರವಾರ ನಡೆಯುವ ಪಂದ್ಯಗಳಲ್ಲಿ ಆರ್‌ಬಿಐ - ಎಸ್‌ಎಐ ಮತ್ತು ಪಿಸಿಟಿಸಿ- ಡಿವೈಎಸ್‌ಎಸ್ ತಂಡಗಳು ಪೈಪೋಟಿ ನಡೆಸಲಿವೆ.

Post Comments (+)