ಭಾನುವಾರ, ಡಿಸೆಂಬರ್ 8, 2019
21 °C

ಹಾಕಿ: ಬಿಇಎಂಎಲ್‌ಗೆ ವಿಜಯ

Published:
Updated:
ಹಾಕಿ: ಬಿಇಎಂಎಲ್‌ಗೆ ವಿಜಯ

ಬೆಂಗಳೂರು:  ಆರಂಭದಿಂದ ನೀಡಿದ ಚುರುಕಿನ ಪ್ರದರ್ಶನದ ಪರಿಣಾಮದಿಂದ ಐಟಿಐ ಹಾಗೂ ಬಿಎಎಂಎಲ್ ಬೆಂಗಳೂರು ತಂಡದವರು ರೇನ್ ಬೋ ಕ್ಲಬ್ ಆಶ್ರಯದಲ್ಲಿ ಇಲ್ಲಿ ನಡೆಯುತ್ತಿರುವ ಡಿ.ಎಸ್. ಮೂರ್ತಿ ಮತ್ತು ವಿ. ಕರುಣಾಕರನ್ ಸ್ಮಾರಕ ಹಾಕಿ ಟೂರ್ನಿಯ ಪಂದ್ಯದಲ್ಲಿ ವಿಜಯ ಪಡೆದರು.ಅಕ್ಕಿ ತಿಮ್ಮನಹಳ್ಳಿ ರಾಜ್ಯ ಹಾಕಿ ಸಂಸ್ಥೆ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಐಟಿಐ ತಂಡ 3-0 ಗೋಲುಗಳಿಂದ ಬ್ಲೂ ಸ್ಟಾರ್ ಎದುರು ಗೆಲುವು ಸಾಧಿಸಿತು.ವಿಜಯಿ ತಂಡದ ಕಿಂಡೋ 12 ನಿಮಿಷದಲ್ಲಿ ಗೋಲಿನ ಖಾತೆ ತೆರೆದರು. ಇದಾದ ಮೂವತ್ತು ನಿಮಿಷಗಳ ನಂತರ ಇದೇ ಆಟಗಾರ ಮತ್ತೊಂದು ಗೋಲನ್ನು ತಂಡದ ಖಾತೆಗೆ ಸೇರಿಸಿದರು. ಗೋಲುಗಳ ಸಂಖ್ಯೆಯನ್ನು ಐಟಿಐ ತಂಡ ಹೆಚ್ಚಿಸಿಕೊಳ್ಳುತ್ತಿದ್ದರೂ, ಎದುರಾಳಿ ತಂಡ ಇದಕ್ಕೆ ತಕ್ಕ ಪೈಪೋಟಿ ನೀಡುವಲ್ಲಿ ವಿಫಲವಾಯಿತು. ಕಿಂಡೋಗೆ ತಕ್ಕ ಬೆಂಬಲ ನೀಡಿದ  ಸೋಮಯ್ಯ 52ನೇ ನಿ.ದಲ್ಲಿ ಗೋಲು ಗಳಿಸಿದರು.ದಿನದ ಎರಡನೇ ಪಂದ್ಯದಲ್ಲಿ ಬಿಇಎಂಎಲ್ 4-0 ಗೋಲುಗಳಿಂದ ರೇನ್ ಬೋ ಹಾಕಿ ಕ್ಲಬ್ ತಂಡವನ್ನು ಸೋಲಿಸಿತು. ಇದಕ್ಕೆ ಕಲ್ಲಪ್ಪ ತೋರಿದ ಚುರುಕಾದ ಪ್ರದರ್ಶನ ಕಾರಣ. ಈ ಆಟಗಾರ 12 ಹಾಗೂ 17ನೇ ನಿಮಿಷದಲ್ಲಿ ಎರಡು ಗೋಲುಗಳನ್ನು ತಂದಿಟ್ಟರು. ನರೇಶ್ 4ನೇ ನಿಮಿಷದಲ್ಲಿ ಗೋಲು ತಂದಿಟ್ಟರು. ವಿರಾಮದ ವೇಳೆಗಾಗಲೇ ನಾಲ್ಕು ಗೋಲುಗಳು ತಂಡದ ಖಾತೆ ಜಮೆ ಆಗಿದ್ದವು.  ನಂತರ ಸುರೇಂದ್ರ ಗೋಲು ಅಂತರ ಇನ್ನಷ್ಟು ಹೆಚ್ಚಿಸಿದರು.

ಪ್ರತಿಕ್ರಿಯಿಸಿ (+)