ಬುಧವಾರ, ಅಕ್ಟೋಬರ್ 16, 2019
21 °C

ಹಾಕಿ: ಬಿಇಎಂಎಲ್ ತಂಡಕ್ಕೆ ಜಯ

Published:
Updated:

ಬೆಂಗಳೂರು: ಉತ್ತಮ ಪ್ರದರ್ಶನ ನೀಡಿದ ಬಿಇಎಂಎಲ್ ಬೆಂಗಳೂರು ತಂಡದವರು ಡಿ.ಎಸ್. ಮೂರ್ತಿ ಮತ್ತು ವಿ. ಕರುಣಾಕರನ್ ಸ್ಮಾರಕ ಹಾಕಿ ಟೂರ್ನಿಯ ಪಂದ್ಯದಲ್ಲಿ ಗೆಲುವು ಪಡೆದರು.ಅಕ್ಕಿ ತಿಮ್ಮನಹಳ್ಳಿ ರಾಜ್ಯ ಹಾಕಿ ಸಂಸ್ಥೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಬಿಇಎಂಎಲ್ ತಂಡ 4-2 ಗೋಲುಗಳಿಂದ ಟೈ ಬ್ರೇಕರ್‌ನಲ್ಲಿ ಆರ್‌ಡಬ್ಲ್ಯುಎಫ್ ತಂಡವನ್ನು ಮಣಿಸಿತು.    ಉಭಯ ತಂಡಗಳು ನಿಗದಿತ ಅವಧಿಯಲ್ಲಿ ತಲಾ ಒಂದು ಗೋಲು ಗಳಿಸಿದ್ದವು.ಪೈಪೋಟಿಯಿಂದ ಕೂಡಿದ್ದ ಈ ಪಂದ್ಯದಲ್ಲಿ  ವಿರಾಮದ ವೇಳೆಗೆ ಎರಡೂ ತಂಡಗಳು ಗೋಲು ಗಳಿಸಲು ವಿಫಲವಾಗಿದ್ದವು.ಆದರೆ ವಿರಾಮದ ಬಳಿಕ ಆರ್‌ಡಬ್ಲ್ಯುಎಫ್ ತಂಡದ ಜಯರಾಜ್ 36ನೇ ನಿಮಿಷದಲ್ಲಿ ಮೊದಲ ಗೋಲು ಗಳಿಸಿ 1-0 ಮುನ್ನಡೆಗೆ ಕಾರಣರಾಧರು. ಇದಕ್ಕೆ ಪ್ರತಿಯಾಗಿ ವಿಜಯಿ ತಂಡದ ಅರವಿಂದ್ 42ನೇ ನಿಮಿಷದಲ್ಲಿ ಗೋಲು ಗಳಿಸಿ ತಿರುಗೇಟು ನೀಡಿದರು. ಬಳಿಕ ಉಭಯ ತಂಡಗಳು ಗೋಲು ಗಳಿಸಲು ನಡೆಸಿದ ಯತ್ನ ಫಲಿಸಲಿಲ್ಲ. ಫಲಿತಾಂಶ ನಿರ್ಧರಿಸಲು ಟೈ ಬ್ರೇಕರ್ ಮೊರೆ ಹೋಗಲಾಯಿತು. ಆಗ ಬಿಇಎಂಎಲ್ ತಂಡ ವಿಜಯದ ಸಂಭ್ರಮ ಆಚರಿಸಿಕೊಂಡಿತು.

Post Comments (+)