ಹಾಕಿ: ಬಿಎಸ್‌ಎನ್‌ಎಲ್‌ಗೆ ಜಯ

7

ಹಾಕಿ: ಬಿಎಸ್‌ಎನ್‌ಎಲ್‌ಗೆ ಜಯ

Published:
Updated:

ಬೆಂಗಳೂರು: ಪಂದ್ಯದ ಅಂತಿಮ ಕ್ಷಣದಲ್ಲಿ ವಿನೋದ್ ಬೆನೆಡಿಕ್ಟ್‌ ತಂದಿತ್ತ ಗೋಲಿನ ನೆರವಿನಿಂದಾಗಿ ಬಿಎಸ್‌ಎನ್‌ ಎಲ್‌ ತಂಡ ಕೆಎಸ್‌ಎಚ್‌ಎ ರಾಜ್ಯ ‘ಎ’ ಡಿವಿಷನ್‌ ಹಾಕಿಲೀಗ್ ಚಾಂಪಿಯನ್‌ ಷಿಪ್‌ನಲ್ಲಿ  ಗೆಲುವು ದಾಖಲಿಸಿತು.ಕೆಎಸ್‌ಎಚ್‌ಎ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಬಿಎಸ್‌ಎನ್‌ಎಲ್ 3–2 ಗೋಲು ಗಳಿಂದ ಸಿನರ್ಜಿ ಎಚ್‌ಸಿ ತಂಡವನ್ನು ಮಣಿಸಿತು.

ವಿಜಯೀ ತಂಡದ ಪರ ಕಾರ್ಯಪ್ಪ (19 ನೇ ನಿಮಿಷ), ಜಾರ್ಜ್‌ ಡೊಮಿನಿಕ್ (57) ಮತ್ತು ವಿನೋದ್ ಬೆನೆಡಿಕ್ಟ್‌ (59) ಗೋಲು ಗಳಿಸಿದರು. ಸಿನರ್ಜಿ ಪರ ಧನುಶ್ (17) ಮತ್ತು ಆಂಜನೇಯ (20) ತಲಾ ಒಂದು ಗೋಲು ಗಳಿಸಿದರೂ ತಂಡ ಸೋಲಿನಿಂದ ಪಾರಾಗಲಿಲ್ಲ.ದಿನದ ಇನ್ನೊಂದು ಪಂದ್ಯದಲ್ಲಿ ಕೂರ್ಗ್‌ ಹಾಕಿ ಸಂಸ್ಥೆ ತಂಡ 6–1 ಗೋಲುಗಳಿಂದ ಫ್ಲೈಯಿಂಗ್‌ ಎಚ್‌ಸಿ ವಿರುದ್ಧ ಭರ್ಜರಿ ಜಯ ಸಂಪಾದಿಸಿತು.

ಕೂರ್ಗ್‌ ತಂಡದ ಪರ ಕಲ್ಲಪ್ಪ (20, 49ನೇ ನಿಮಿಷ), ಸುಬ್ಬಯ್ಯ (8), ಚಿರಾಗ್ (52), ಐಯ್ಯಣ್ಣ (56) ಹಾಗೂ ಸೂರಜ್ (57) ಗೋಲು ಗಳಿಸಿ ಮಿಂಚಿದರು. ಫ್ಲೈಯಿಂಗ್‌ ತಂಡದ ಏಕೈಕ ಗೋಲನ್ನು ಧರ್ಮ  ಅವರು ಪಂದ್ಯದ 15ನೇ ನಿಮಿಷದಲ್ಲಿ ತಂದಿತ್ತರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry