ಗುರುವಾರ , ಮೇ 13, 2021
38 °C

ಹಾಕಿ: ಬಿಎಸ್‌ಎನ್‌ಎಲ್‌ಗೆ ಮಣಿದ ಕೂರ್ಗ್ ತಂಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾಕಿ: ಬಿಎಸ್‌ಎನ್‌ಎಲ್‌ಗೆ ಮಣಿದ ಕೂರ್ಗ್ ತಂಡ

ಬೆಂಗಳೂರು: ಬಿಎಸ್‌ಎನ್‌ಎಲ್ ತಂಡ ಕೆಎಸ್‌ಎಚ್‌ಎ ಆಶ್ರಯದಲ್ಲಿ ನಡೆಯುತ್ತಿರುವ `ಎ' ಡಿವಿಷನ್ ಹಾಕಿ ಲೀಗ್ ಚಾಂಪಿಯನ್‌ಷಿಪ್‌ನ ಬುಧವಾರದ ಪಂದ್ಯದಲ್ಲಿ 3-1ಗೋಲುಗಳಿಂದ ಕೂರ್ಗ್ ಬ್ಲೂಸ್ ಹಾಕಿ ಕ್ಲಬ್ ಎದುರು ಗೆಲುವು ಸಾಧಿಸಿತು.ಅಕ್ಕಿ ತಿಮ್ಮನಹಳ್ಳಿ ರಾಜ್ಯ ಹಾಕಿ ಸಂಸ್ಥೆಯ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಬಿಎಸ್‌ಎನ್‌ಎಲ್ ಗೆಲುವಿಗೆ ವಿನೋದ್ ಚಿನ್ನಪ್ಪ ಪ್ರಮುಖ ಕಾರಣರಾದರು. ಕೂರ್ಗ್ ತಂಡದ ದೀಪಕ್ ಮೂರನೇ ನಿಮಿಷದಲ್ಲಿ ಗೋಲು ಗಳಿಸಿ ಆರಂಭಿಕ ಮುನ್ನಡೆ ತಂದುಕೊಟ್ಟಿದ್ದರು.ಆದರೆ, ಎದುರಾಳಿ ಬಿಎಸ್‌ಎನ್‌ಎಲ್ ದ್ವಿತೀಯಾರ್ಧದಲ್ಲಿ ತಿರುಗೇಟು ನೀಡಿತು. ಇದಕ್ಕೆ ಕಾರಣವಾಗಿದ್ದು ವಿನೋದ್ 40 ಮತ್ತು 56ನೇ ನಿಮಿಷದಲ್ಲಿ ಗಳಿಸಿದ ಎರಡು ಗೋಲುಗಳು. ಜಾರ್ಜ್ ಡೈಮಾನಿಕ್ 53ನೇ ನಿಮಿಷದಲ್ಲಿ ಮತ್ತೊಂದು ಗೋಲು ಗಳಿಸಿ ಬಿಎಸ್‌ಎನ್‌ಎಲ್ ಗೆಲುವಿನ ಪಾಲುದಾರರಾದರು.ಗುರುವಾರದ ಪಂದ್ಯಗಳು:  ಆರ್‌ಡಬ್ಲ್ಯುಎಫ್-ಎಸ್‌ಬಿಎಂ ಜೈನ್ (ಮಧ್ಯಾಹ್ನ 3ಕ್ಕೆ) ಹಾಗೂ ಐಟಿಐ-ಡಿವೈಎಸ್‌ಎಸ್ `ಬಿ' (ಸಂಜೆ 4.30ಕ್ಕೆ).

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.