ಹಾಕಿ: ಬಿಷಪ್ ಕಾಟನ್ಸ್ ಚಾಂಪಿಯನ್ಸ್

7

ಹಾಕಿ: ಬಿಷಪ್ ಕಾಟನ್ಸ್ ಚಾಂಪಿಯನ್ಸ್

Published:
Updated:
ಹಾಕಿ: ಬಿಷಪ್ ಕಾಟನ್ಸ್ ಚಾಂಪಿಯನ್ಸ್

ಬೆಂಗಳೂರು: ಬಿಷಪ್ ಕಾಟನ್ ಬಾಲಕರ ಪ್ರೌಢ ಶಾಲೆ ತಂಡದವರು ಸೇಂಟ್ ಜರ್ಮೇನ್ಸ್ ಪ್ರೌಢ ಶಾಲೆ ಹಳೆ ವಿದ್ಯಾರ್ಥಿ ಸಂಘ ಆಶ್ರಯದಲ್ಲಿ ನಡೆದ ರಾಜ್ಯ ಮಟ್ಟದ ಅಂತರ ಶಾಲಾ ಹಾಕಿ ಟೂರ್ನಿ ಬಾಲಕರ ವಿಭಾಗದ ಪ್ರಶಸ್ತಿ ಗೆದ್ದುಕೊಂಡರು.ಅಕ್ಕಿತಮ್ಮನಹಳ್ಳಿ ರಾಜ್ಯ ಹಾಕಿ ಸಂಸ್ಥೆ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಟೂರ್ನಿಯ ಫೈನಲ್‌ನಲ್ಲಿ ಬಿಷಪ್ ಕಾಟನ್ ಬಾಲಕರ ಪ್ರೌಢ ಶಾಲೆ ತಂಡ 2-0 ಗೋಲುಗಳಿಂದ ಆತಿಥೇಯ ಸೇಂಟ್ ಜರ್ಮೇನ್ಸ್ ಪ್ರೌಢ ಶಾಲೆ ವಿರುದ್ಧ ಅರ್ಹ ಜಯ ಪಡೆಯಿತು. ಎರಡು ಗೋಲುಗಳು ಪಂದ್ಯದ ಉತ್ತರಾರ್ಧದಲ್ಲಿ ಬಂದುವು.ಉತ್ತಮ ಹೋರಾಟ ಕಂಡು ಬಂದ ಪಂದ್ಯದಲ್ಲಿ ವಿಜಯಿ ತಂಡದ ನಾರಂಗ್ ಬಾಪು, ಅನೂಪ್ ಗಾರ್ಗ್ ಚೆಂಡನ್ನು ಗುರಿಮುಟ್ಟಿಸಿದರು. ಅವರು ಗೋಲುಗಳನ್ನು ಗಳಿಸಲು ಹಲವು ಭಾರಿ ಯತ್ನಿಸಿದರು.ಎನ್.ಎ.ಎಲ್. ಕೇಂದ್ರೀಯ ವಿದ್ಯಾಲಯ ತಂಡದ ಧನಂಜಯ ಸಿಂಗ್ `ಅತ್ಯುತ್ತಮ ಗೋಲ್‌ಕೀಪರ್~, ಎವರ್‌ಶೈನ್ ಶಾಲೆಯ ಜೋಜಿನ್ `ಅತ್ಯುತ್ತಮ ಬ್ಯಾಕ್~, ಸೇಂಟ್ ಜಾನ್ಸ್ ಶಾಲೆಯ ಅರವಿಂದ್ `ಅತ್ಯುತ್ತಮ ಹಾಫ್ ಬ್ಯಾಕ್~, ಸೇಂಟ್ ಪ್ಯಾಟ್ರಿಕ್ ಶಾಲೆಯ ಜೊಹಾನ್ ಬಾಸ್ಕೊ `ಅತ್ತ್ತುಮ ಫಾರ್ವರ್ಡ್~ ಹಾಗೂ ಸೇಂಟ್ ಜರ್ಮೇನ್ಸ್ ಶಾಲೆಯ ಜಾಫ್ರಿ `ಟೂರ್ನಿ ಅತ್ಯುತ್ತಮ ಆಟಗಾರ~ ಪ್ರಶಸ್ತಿ ಪಡೆದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry