ಭಾನುವಾರ, ಅಕ್ಟೋಬರ್ 20, 2019
27 °C

ಹಾಕಿ: ಬಿಸಿವೈಎಸ್ ತಂಡದ ಶುಭಾರಂಭ

Published:
Updated:

ಬೆಂಗಳೂರು: ಬಿಸಿವೈಎಸ್ ತಂಡದವರು ರೇನ್ ಬೋ ಹಾಕಿ ಕ್ಲಬ್ ಆಶ್ರಯದಲ್ಲಿ ಇಲ್ಲಿ ಆರಂಭವಾದ ಡಿ.ಎಸ್. ಮೂರ್ತಿ ಮತ್ತು ವಿ. ಕರುಣಾಕರನ್ ಸ್ಮಾರಕ ಹಾಕಿ ಟೂರ್ನಿಯ ಪಂದ್ಯದಲ್ಲಿ ಶುಭಾರಂಭ ಮಾಡಿದರು.ಅಕ್ಕಿ ತಿಮ್ಮನಹಳ್ಳಿ ರಾಜ್ಯ ಹಾಕಿ ಸಂಸ್ಥೆ ಕ್ರೀಡಾಂಗಣದಲ್ಲಿ ಬುಧವಾರದ ಪಂದ್ಯದಲ್ಲಿ ಬಿಸಿವೈಎಸ್ 11-10ರಲ್ಲಿ ಪ್ರಿಮ್‌ರೋಸ್ ಕ್ಲಬ್ ತಂಡವನ್ನು ಮಣಿಸಿತು. ನಿಗದಿತ ಅವಧಿಯಲ್ಲಿ ಉಭಯ ತಂಡಗಳು ತಲಾ ಒಂದು ಗೋಲನ್ನು ಗಳಿಸಿದ್ದವು. ಫಲಿತಾಂಶ ನಿರ್ಧರಿಸಲು `ಸಡನ್ ಡೆತ್~ ಮೊರೆ ಹೋಗಲಾಯಿತು. ಇನ್ನೊಂದು ಪಂದ್ಯದಲ್ಲಿ ರೇನ್ ಬೋ ಕ್ಲಬ್ 4-0 ಗೋಲುಗಳಿಂದ ನ್ಯೂ ಅಶೋಕ ಕ್ಲಬ್ ತಂಡವನ್ನು ಮಣಿಸಿತು.

Post Comments (+)