ಹಾಕಿ: ಭಾರತಕ್ಕೆ ಗೆಲುವು

7

ಹಾಕಿ: ಭಾರತಕ್ಕೆ ಗೆಲುವು

Published:
Updated:

ಜೋಹರ್‌ಬಾಹ್ರು, ಮಲೇಷ್ಯಾ (ಪಿಟಿಐ): ಭಾರತ ತಂಡದವರು ಇಲ್ಲಿ ನಡೆಯುತ್ತಿರುವ ಸುಲ್ತಾನ್‌ ಆಫ್‌ ಜೋಹರ್‌ ಕಪ್‌ 21ವರ್ಷದೊಳಗಿನವರ ಹಾಕಿ ಟೂರ್ನಿಯಲ್ಲಿ ಸೋಮವಾರ ಅರ್ಜೆಂಟಿನಾ ವಿರುದ್ಧ 3-2 ಗೋಲುಗಳಿಂದ ಜಯ ಸಾಧಿಸಿತು.ರಮಣದೀಪ್‌ ಸಿಂಗ್‌ ಅವರು ಗಳಿಸಿದ ಎರಡು ಗೋಲುಗಳು ಭಾರತಕ್ಕೆ ಜಯದ ಸಂಭ್ರಮ ನೀಡಿತು. ತಂಡದ ಉಪನಾಯಕ ಅಫಾನ್‌ ಯೂಸುಫ್‌ 23ನೇ ನಿಮಿಷದಲ್ಲಿ ಭಾರತದ ಪರ ಮೊದಲ ಗೋಲಿನ ಆತ್ಮವಿಶ್ವಾಸ ನೀಡಿದರು. ನಂತರ ಬಹಳ ಹೊತ್ತಿನ ತನಕ ಹಿನ್ನಡೆಯಲ್ಲಿಯೇ ಇದ್ದ ಭಾರತಕ್ಕೆ ರಮಣದೀಪ್‌ ತಮ್ಮ ಗೋಲುಗಳಿಂದ ಆತ್ಮವಿಶ್ವಾಸ ತುಂಬಿದರು.ರಮಣದೀಪ್‌ 60 ಮತ್ತು 62ನೇ ನಿಮಿಷಗಳಲ್ಲಿ ತಂದಿತ್ತ ಎರಡು ಗೋಲುಗಳು ಪಂದ್ಯದ ಗತಿಯನ್ನೇ ಬದಲಿಸಿಬಿಟ್ಟವು.

ಅರ್ಜೆಂಟಿನಾದ ಇಸಿದೊರೊ ಕಾರ್ಲೊಸ್‌ ಇಬಾರಾ 16ನೇ ಮತ್ತು 42ನೇ ನಿಮಿಷದಲ್ಲಿ  ಎರಡು ಗೋಲುಗಳನ್ನು ಗಳಿಸಿದರು.

ಭಾರತಕ್ಕೆ ಇದು ಸತತ ಎರಡನೇ ಗೆಲುವು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry