ಹಾಕಿ: ಭಾರತಕ್ಕೆ ಮತ್ತೆ ಸೋಲು

7

ಹಾಕಿ: ಭಾರತಕ್ಕೆ ಮತ್ತೆ ಸೋಲು

Published:
Updated:
ಹಾಕಿ: ಭಾರತಕ್ಕೆ ಮತ್ತೆ ಸೋಲು

ಲಂಡನ್ (ಪಿಟಿಐ): ಸತತ ಸೋಲಿನ ಸಂಕಷ್ಟದಲ್ಲಿರುವ ಭಾರತ ಪುರುಷರ ಹಾಕಿ ತಂಡಕ್ಕೆ ಇಲ್ಲಿ ನಡೆಯುತ್ತಿರುವ ನಾಲ್ಕು ರಾಷ್ಟ್ರಗಳ `ಲಂಡನ್ ಒಲಿಂಪಿಕ್ಸ್ ಹಾಕಿ ಟೆಸ್ಟ್~ ಟೂರ್ನಿಯಲ್ಲಿ ಮತ್ತೊಂದು ನಿರಾಸೆ ಕಾಡಿತು.ರಿವರ್ ಬ್ಯಾಂಕ್ ಅರೆನಾದಲ್ಲಿ ಶನಿವಾರ ನಡೆದ ಮೂರನೇ ಪಂದ್ಯದಲ್ಲಿ ಭಾರತ 1-2ಗೋಲುಗಳಿಂದ ಜರ್ಮನಿ ಎದುರು ಮುಗ್ಗರಿಸಿತು. ಭಾರತಕ್ಕೆ ಎದುರಾದ ಮೂರನೇ ಸೋಲು ಇದಾಗಿದೆ. ಹಿಂದಿನ ಎರಡೂ ಪಂದ್ಯಗಳಲ್ಲಿ ಆಸ್ಟ್ರೇಲಿಯಾ ಹಾಗೂ ಆತಿಥೇಯ ಲಂಡನ್ ಎದುರು ಸೋಲು ಅನುಭವಿಸಿತ್ತು.

 

15ನೇ ನಿಮಿಷದಲ್ಲಿಯೇ ಗೋಲು ಗಳಿಸಿದ ಸ್ಟ್ರೈಕರ್ ಶಿವೇಂದರ್ ಸಿಂಗ್ ಭಾರತಕ್ಕೆ ಆರಂಭಿಕ ಮುನ್ನಡೆ ತಂದುಕೊಟ್ಟರು. ಇದಕ್ಕೆ ತಿರುಗೇಟು ನೀಡಿದ ಜರ್ಮನಿಯ ಕ್ರಿಸ್ಟೋಫರ್ ವೆಸ್ಲೆ 27ನೇ ನಿಮಿಷದಲ್ಲಿ ಚೆಂಡನ್ನು ಗುರಿ ಸೇರಿಸಿ 1-1ರಲ್ಲಿ ಸಮಬಲ ಸಾಧಿಸಿದರು. ಪಂದ್ಯ ಡ್ರಾ ಹಾದಿಯಲ್ಲಿ ಸಾಗಿದ್ದಾಗ, ಫ್ಲೊರಿಯಿನಾ ಫಂಚ್ಸ್ 65ನೇ ನಿಮಿಷದಲ್ಲಿ ಗೋಲು ತಂದಿಟ್ಟರು. ಇದರಿಂದ ಜರ್ಮನಿ ಫೈನಲ್‌ಗೆ ಲಗ್ಗೆ ಇಟ್ಟಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry