ಶುಕ್ರವಾರ, ಮೇ 29, 2020
27 °C

ಹಾಕಿ: ಭಾರತಕ್ಕೆ ವಿದೇಶಿ ಕೋಚ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಐಎಎನ್‌ಎಸ್/ಪಿಟಿಐ): ಭಾರತ ಹಾಕಿ ತಂಡದ ತರಬೇತಿಗಾಗಿ ಐವರು ವಿದೇಶಿ  ಕೋಚ್‌ಗಳನ್ನು ನೇಮಕ ಮಾಡಿಕೊಳ್ಳಲು ಹಾಕಿ ಇಂಡಿಯಾ ನಿರ್ಧರಿಸಿದೆ.ಇತ್ತೀಚಿಗೆ ಕೊನೆಗೊಂಡ ಅಜ್ಲನ್ ಷಾ ಹಾಕಿ ಕಪ್ ಟೂರ್ನಿಯಲ್ಲಿ ಭಾರತ ತಂಡ ಕಳಪೆ ಪ್ರದರ್ಶನ ತೋರಿದ ಹಿನ್ನೆಲೆಯಲ್ಲಿ ಹಾಕಿ ಇಂಡಿಯಾ ಈ ನಿರ್ಧಾರಕ್ಕೆ ಮುಂದಾಗಿದೆ.ಮುಂಬರಲಿರುವ ಚಾಂಪಿಯನ್ ಟ್ರೋಫಿ ಹಾಗೂ 2012ರ ಲಂಡನ್ ಒಲಿಂಪಿಕ್ ಅರ್ಹತೆ ಗಿಟ್ಟಿಸಲು ನಡೆಯುವ ಪಂದ್ಯಗಳಲ್ಲಿ ಭಾರತ ಉತ್ತಮ ಪ್ರದರ್ಶನ ನೀಡಬೇಕು ಎನ್ನುವುದು ಹಾಕಿ ಇಂಡಿಯಾದ ಉದ್ದೇಶವಾಗಿದೆ. ಅದಕ್ಕಾಗಿ ಆದ್ದರಿಂದಲೇ ಐವರು ವಿದೇಶಿ ಕೋಚ್‌ಗಳನ್ನು ಮುಂದಿನ 15 ದಿನಗಳ ಒಳಗೆ ಆಯ್ಕೆ ಮಾಡಲು ಅಂತರರಾಷ್ಟ್ರೀಯ ಮಾಜಿ ಆಟಗಾರ ಪರ್ಗತ್ ಸಿಂಗ್ ಅವರ ನೇತೃತ್ವದಲ್ಲಿ ಐಮ ಪರಿಣಿತರ ತಂಡವನ್ನು ಹಾಕಿ ಇಂಡಿಯಾ ನೇಮಿಸಿದೆ.`ಮಾಜಿ ಆಟಗಾರರಾದ ಎಸ್.ಎಸ್. ಗ್ರೇವಾಲ್, ಬಲ್ದೀರ್ ಸಿಂಗ್, ಜಗ್ಬೀರ್ ಸಿಂಗ್ ಹಾಗೂ ಎ.ಬಿ. ಸುಬ್ಬಯ್ಯ ಅವರು ಸಮಿತಿಯಲ್ಲಿರುವ ಇತರ ಸದಸ್ಯರು. ಇನ್ನೂ 15 ದಿನಗಳಲ್ಲಿ ಈ ಸದಸ್ಯರು ತಮ್ಮ ಕಾರ್ಯವನ್ನು ಮುಗಿಸಲಿದ್ದಾರೆ~ ಎಂದು ಹಾಕಿ ಇಂಡಿಯಾದ ಪ್ರಧಾನ ಕಾರ್ಯದರ್ಶಿ ನರೇಂದ್ರ ಬಾತ್ರಾ ತಿಳಿಸಿದ್ದಾರೆ.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.