ಶುಕ್ರವಾರ, ಏಪ್ರಿಲ್ 23, 2021
28 °C

ಹಾಕಿ: ಭಾರತಕ್ಕೆ ಸೋಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸ್ಪೇನ್ (ಪಿಟಿಐ): ಮೊದಲ ಪಂದ್ಯದಲ್ಲಿ ಸೋಲು ಕಂಡಿದ್ದ ಭಾರತ ಹಾಕಿ ತಂಡ ಇಲ್ಲಿ ಕೊನೆಗೊಂಡ ಮೂರು ರಾಷ್ಟ್ರಗಳ ನಡುವಣ ಆಹ್ವಾನಿತ ಹಾಕಿ ಟೂರ್ನಿಯ ಕೊನೆಯ ಲೀಗ್ ಪಂದ್ಯದಲ್ಲಿ ನಿರಾಸೆ ಅನುಭವಿಸಿತು.

ಎರಡನೇ ಪಂದ್ಯದಲ್ಲಿ ಆತಿಥೇಯ ಸ್ಪೇನ್ 2-1ಗೋಲುಗಳಿಂದ ಭಾರತವನ್ನು ಮಣಿಸಿತು.ಲಂಡನ್ ಒಲಿಂಪಿಕ್ಸ್‌ಗೆ ತೆರಳಲಿರುವ ಭಾರತ ಹಾಕಿ ತಂಡಕ್ಕೆ ಇದು ಕೊನೆಯ ಅಭ್ಯಾಸ ಪಂದ್ಯವಾಗಿತ್ತು. ಮೊದಲಾರ್ಧದಲ್ಲಿ ಭಾರತದ ಗೋಲ್‌ಕೀಪರ್ ಪಿ.ಆರ್. ಶ್ರೀಜೇಶ್ ಸ್ಪೇನ್ ತಂಡದ ಗೋಲು ಗಳಿಸುವ ಅವಕಾಶವನ್ನು ವಿಫಲಗೊಳಿಸಿದರು. ಆದ್ದರಿಂದ ವಿರಾಮದ ವೇಳೆಗೆ ಯಾವ ತಂಡಗಳಿಂದಲೂ ಗೋಲು ಬಂದಿರಲಿಲ್ಲ.ಗಾಯಗೊಂಡಿದ್ದ ಕಾರಣ ಸರ್ದಾರ್ ಸಿಂಗ್ ಕೆಲ ಹೊತ್ತು ಕ್ರೀಡಾಂಗಣದಿಂದ ಹೊರಗಿದ್ದರು. ಇದರ ಲಾಭ ಪಡೆದ ಆತಿಥೇಯ ತಂಡದ ಡೇವಿಡ್ ಅಲೆಗ್ರೆ 42ನೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್ ಮೂಲಕ ಮೊದಲ ಗೋಲು ಗಳಿಸಿದರು.61ನೇ ನಿಮಿಷದಲ್ಲಿ ಸ್ಪೇನ್‌ನ ಮಿಖಾಯೆಲ್ ಡೇಲಸ್ ಮತ್ತೊಂದು ಪೆನಾಲ್ಟಿ ಕಾರ್ನರ್ ಮೂಲಕ 61ನೇ ನಿಮಿಷದಲ್ಲಿ ಗೋಲು ಗಳಿಸಿ ಮುನ್ನಡೆಯನ್ನು 2-0ರಲ್ಲಿ ಹೆಚ್ಚಿಸಿದರು. ಈ ಗೋಲು ಬಂದು ಮೂರು ನಿಮಿಷದ ಅಂತರದಲ್ಲಿ ಭಾರತದ ವಿ.ಆರ್. ರಘುನಾಥ್ ಗೋಲು ಗಳಿಸಿ ಅಂತರ ತಗ್ಗಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.