ಹಾಕಿ: ಭಾರತ ತಂಡಕ್ಕೆ ಮೊದಲ

7

ಹಾಕಿ: ಭಾರತ ತಂಡಕ್ಕೆ ಮೊದಲ

Published:
Updated:

ಬಸೆಲ್ಟನ್, ಆಸ್ಟ್ರೇಲಿಯಾ (ಪಿಟಿಐ): ಮಿಂಚಿನ ಪ್ರದರ್ಶನ ನೀಡಿದ ಆತಿಥೇಯ ಆಸ್ಟ್ರೇಲಿಯಾ ತಂಡದವರು ಇಲ್ಲಿ ನಡೆದ ಮೂರು ರಾಷ್ಟ್ರಗಳ ನಡುವಿನ ಹಾಕಿ ಸರಣಿಯ ಮೊದಲ ಪಂದ್ಯದಲ್ಲಿ ಭಾರತ ತಂಡವನ್ನು ಸೋಲಿಸಿ ಶುಭಾರಂಭ ಮಾಡಿದರು.ಗುರುವಾರ  ನಡೆದ ಪಂದ್ಯದಲ್ಲಿ ಆಸ್ಟ್ರೇಲಿಯಾ 8-3ಗೋಲುಗಳಿಂದ ಭಾರತಕ್ಕೆ ಸೋಲುಣಿಸಿತು.

ಭಾರತದ ದನಿಶ್ ಮುಜ್ತಾಬಾ 12ನೇ ನಿಮಿಷದಲ್ಲಿ ಗೋಲಿನ ಖಾತೆ ತೆರೆದರು. ಇದಾದ 20 ನಿಮಿಷಗಳ ಅಂತರದಲ್ಲಿ ಎಸ್.ವಿ. ಸುನಿಲ್ ಮತ್ತೊಂದು ಗೋಲನ್ನು ಭಾರತದ ಮಡಿಲಿಗೆ ಸೇರಿಸಿದರು. ದನಿಶ್ 66ನೇ ನಿಮಿಷದಲ್ಲಿ ಮತ್ತೊಂದು ಗೋಲು ತಂದಿತ್ತರು. ಆದರೂ ಗೆಲುವು ಸಾಧ್ಯವಾಗಲಿಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry