ಹಾಕಿ: ಭಾರತ ತಂಡಕ್ಕೆ ಸೋಲು

7

ಹಾಕಿ: ಭಾರತ ತಂಡಕ್ಕೆ ಸೋಲು

Published:
Updated:
ಹಾಕಿ: ಭಾರತ ತಂಡಕ್ಕೆ ಸೋಲು

ನವದೆಹಲಿ (ಪಿಟಿಐ): ಭಾರತ ಹಾಕಿ ತಂಡದವರ ಕಳಪೆ ಪ್ರದರ್ಶನ ಮುಂದುವರಿದಿದೆ. ಶುಕ್ರವಾರ ಇಲ್ಲಿ ಆರಂಭವಾದ ವಿಶ್ವ ಹಾಕಿ ಲೀಗ್‌ ಫೈನಲ್ಸ್‌ನ ತಮ್ಮ ಮೊದಲ ಪಂದ್ಯದಲ್ಲಿ ಸರ್ದಾರ್‌ ಸಿಂಗ್‌ ಸಾರಥ್ಯದ ಬಳಗ ಸೋಲು ಕಂಡಿತು. ಮೇಜರ್‌ ಧ್ಯಾನ್‌ಚಂದ್‌ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ‘ಎ’ ಗುಂಪಿನ ಈ ಪಂದ್ಯದಲ್ಲಿ ಇಂಗ್ಲೆಂಡ್‌ 2–0 ಗೋಲುಗಳಿಂದ ಭಾರತ ತಂಡವನ್ನು  ಮಣಿಸಿತು. ನಾಲ್ಕನೇ ರ್‍ಯಾಂಕ್‌ನ ಇಂಗ್ಲೆಂಡ್‌ ವಿರಾಮದ ವೇಳೆ 1–0 ಗೋಲಿನಿಂದ ಮುಂದಿತ್ತು. ಈ ತಂಡದ ಆ್ಯಡಮ್‌ ಡಿಕ್ಸಾನ್‌ (28ನೇ ಹಾಗೂ 45ನೇ ನಿಮಿಷ) ಗೋಲು ಗಳಿಸಿದರು. ಈ ಮೂಲಕ ಅಮೂಲ್ಯ ಮೂರು ಪಾಯಿಂಟ್‌ ಕಲೆಹಾಕಿತು.ಭಾರತ ತಂಡ ಶನಿವಾರ ನಡೆಯಲಿರುವ ತನ್ನ ಎರಡನೇ ಪಂದ್ಯದಲ್ಲಿ ನ್ಯೂಜಿಲೆಂಡ್‌ ಎದುರು ಪೈಪೋಟಿ ನಡೆಸಲಿದೆ. ‘ಬಿ’ ಗುಂಪಿನ ಪಂದ್ಯದಲ್ಲಿ ಅರ್ಜೆಂಟೀನಾ ತಂಡದವರು 5–2 ಗೋಲುಗಳಿಂದ ಬಲಿಷ್ಠ ಹಾಲೆಂಡ್‌ಗೆ ಆಘಾತ ನೀಡಿದರು. ಆಸ್ಟ್ರೇಲಿಯಾ ತಂಡದವರು 3–2 ಗೋಲುಗಳಿಂದ ಬೆಲ್ಜಿಯಂ ಎದುರು ಗೆದ್ದರು. ಜರ್ಮನಿ ತಂಡದವರು 6–1 ಗೋಲುಗಳಿಂದ ನ್ಯೂಜಿಲೆಂಡ್‌ ತಂಡವನ್ನು ಸೋಲಿಸಿದರು.ಇಂದಿನ ಪಂದ್ಯಗಳು

‘ಎ’ ಗುಂಪು: ಭಾರತ–ನ್ಯೂಜಿಲೆಂಡ್‌ (ಆರಂಭ: ರಾತ್ರಿ 8 ಗಂಟೆಗೆ)

ಇಂಗ್ಲೆಂಡ್‌–ಜರ್ಮನಿ (ಆರಂಭ: ಸಂಜೆ 6 ಗಂಟೆಗೆ)‘ಬಿ’ ಗುಂಪು: ಬೆಲ್ಜಿಯಂ–ಅರ್ಜೆಂಟೀನಾ (ಆರಂಭ: ಮಧ್ಯಾಹ್ನ 2  ಗಂಟೆಗೆ)

ಆಸ್ಟ್ರೇಲಿಯಾ–ಹಾಲೆಂಡ್‌ (ಆರಂಭ: ಸಂಜೆ 4 ಗಂಟೆಗೆ)

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry