ಹಾಕಿ: ಭಾರತ ತಂಡದ ಶೂನ್ಯ ಸಾಧನೆ

ಶುಕ್ರವಾರ, ಮೇ 24, 2019
22 °C

ಹಾಕಿ: ಭಾರತ ತಂಡದ ಶೂನ್ಯ ಸಾಧನೆ

Published:
Updated:
ಹಾಕಿ: ಭಾರತ ತಂಡದ ಶೂನ್ಯ ಸಾಧನೆ

ಲಂಡನ್: ಚೆಂಡಿನ ಮೇಲೆ ಪದೇ ಪದೇ ನಿಯಂತ್ರಣ ಕಳೆದುಕೊಂಡಿದ್ದು, ಬೆಲ್ಜಿಯಂ ತಂಡದ ಬಲಿಷ್ಠ ಗೋಲ್ ಕೀಪರ್ ಹಾಗೂ ಭಾರತದ ದುರ್ಬಲ ಗೋಲ್ ಕೀಪಿಂಗ್. ಈ ಮೂರು ಅಂಶಗಳು ಭಾರತ ಹಾಕಿ ತಂಡದ ಮಂಗಳವಾರದ ಪಂದ್ಯದಲ್ಲಿನ ಸೋಲಿಗೆ ಕಾರಣವಾದವು. ಆದ್ದರಿಂದ ಈ ಸಲದ ಒಲಿಂಪಿಕ್ಸ್‌ನಲ್ಲಿ ಭಾರತ ಪಾಯಿಂಟ್ಸ್ ಪಟ್ಟಿಯಲ್ಲಿ `ಶೂನ್ಯ~ ಸಂಪಾದನೆ ಮಾಡಿತು.ಒಲಿಂಪಿಕ್ಸ್ ಹಾಕಿ ಅರೆನಾದಲ್ಲಿ ನಡೆದ ಕೊನೆಯ ಲೀಗ್ ಪಂದ್ಯದಲ್ಲಿ ಭಾರತ ಹಿಂದಿನ ಪಂದ್ಯದಲ್ಲಿನ ತಪ್ಪುಗಳನ್ನು ಪುನರಾವರ್ತನೆ ಮಾಡಿತು. ಅದೇ ಸೋಲಿಗೆ ಕಾರಣವಾಯಿತು. ಆರಂಭದಿಂದಲೂ ಚುರುಕಿನ ಆಟವಾಡಿದ ಎದುರಾಳಿ ಬೆಲ್ಜಿಯಂ 3-0ಗೋಲುಗಳಿಂದ ಭಾರತವನ್ನು ಮಣಿಸಿತು. ಹಿಂದಿನ ನಾಲ್ಕೂ ಪಂದ್ಯಗಳಲ್ಲಿ ಸೋಲು ಕಂಡಿದ್ದ ಭಾರತ ಸಮಾಧಾನಕ್ಕೊಂದು ಕೊನೆಯ ಪಂದ್ಯದಲ್ಲಿ ಗೆಲುವು ಪಡೆಯುವ ಲೆಕ್ಕಾಚಾರ ಹೊಂದಿತ್ತು.ಆದರೆ, ಈ ನಿರೀಕ್ಷೆಯನ್ನು ಬೆಲ್ಜಿಯಂ ಆರಂಭದಲ್ಲಿಯೇ ಹುಸಿಗೊಳಿಸಿತು. ಏಕಪಕ್ಷೀಯವಾಗಿ ಕೊನೆಗೊಂಡ ಪಂದ್ಯದಲ್ಲಿ ಜರೋಮ್ ಡೆಕಾಸರ್ 15ನೇ ನಿಮಿಷದಲ್ಲಿ ಗಳಿಸಿದ ಗೋಲಿನ ನೆರವಿನಿಂದ ವಿರಾಮದ ವೇಳೆಗೆ

1-0ರಲ್ಲಿ ಮುನ್ನಡೆ ಸಾಧಿಸಿತು.ಚೆಟ್ರಿ ಪಡೆ ಪದೇ ಪದೇ ಗೋಲು ಗಳಿಸಲು ನಡೆಸಿದ ಯತ್ನವನ್ನು ಎದುರಾಳಿ ಗೋಲ್‌ಕೀಪರ್ ವಿಫಲಗೊಳಿಸಿದರು. ಆದರೆ, ಬೆಲ್ಜಿಯಂ ಭಾರತದ ದುರ್ಬಲ ಗೋಲ್ ಕೀಪಿಂಗ್‌ನ ಪ್ರಯೋಜನ ಪಡೆಯಿತು. ಟಾಮ್ ಬೂನ್ 67ನೇ ನಿಮಿಷದಲ್ಲಿ ಗಳಿಸಿದ ಮೂರನೇ ಗೋಲು ಇದಕ್ಕೆ ಸಾಕ್ಷಿ.ಬೂನ್ ಗೋಲ್ ಗಳಿಸುವುದನ್ನು ತಪ್ಪಿಸಲು ಚೆಟ್ರಿ ಅವರಿಗೆ ಸುಲಭವಾಗಿ ಅವಕಾಶವಿತ್ತು. ಇನ್ನೊಂದು ಗೋಲನ್ನು ಗೆಯೇಟರ್ ಬೊಕಾರ್ಡ್ 47ನೇ ನಿಮಿಷದಲ್ಲಿ ಎರಡನೇ ಗೋಲು ಗಳಿಸಿ ಭಾರತದ ಗೆಲುವಿನ ಆಸೆಯನ್ನು ದೂರ ಮಾಡಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry