ಹಾಕಿ: ಭಾರತ-ಬೆಲ್ಜಿಯಂ ಮುಖಾಮುಖಿ ಇಂದು

6

ಹಾಕಿ: ಭಾರತ-ಬೆಲ್ಜಿಯಂ ಮುಖಾಮುಖಿ ಇಂದು

Published:
Updated:

ಮೆಲ್ಬರ್ನ್ (ಪಿಟಿಐ): ಗಾಯಾಳುಗಳ ಸಂಕಷ್ಟದ ನಡುವೆಯೂ ಭಾರತ ತಂಡ ಇಲ್ಲಿ ನಡೆಯುತ್ತಿರುವ ಚಾಂಪಿಯನ್ಸ್ ಟ್ರೋಫಿ ಹಾಕಿ ಟೂರ್ನಿಯ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಗುರುವಾರ ಬೆಲ್ಜಿಯಂ ವಿರುದ್ಧ ಪೈಪೋಟಿ ನಡೆಸಲಿವೆ.`ಎ' ಗುಂಪಿನಲ್ಲಿರುವ ಭಾರತ ತಂಡ ಅಗ್ರಸ್ಥಾನ ಗಳಿಸಿ ಎಂಟರ ಘಟ್ಟಕ್ಕೆ ಲಗ್ಗೆ ಇಟ್ಟಿದೆ. ಉಭಯ ತಂಡಗಳು ಲೀಗ್ ಹಂತದಲ್ಲಿ ಉತ್ತಮ ಪೈಪೋಟಿ ನೀಡಿರುವ ಕಾರಣ ಈ ಪಂದ್ಯದಲ್ಲಿ ಪ್ರಬಲ ಪೈಪೋಟಿ ಎದುರಾಗುವ ನಿರೀಕ್ಷೆಯಿದೆ. ಉಭಯ ತಂಡಗಳು ತಲಾ ಆರು ಅಂಕಗಳನ್ನು ಹೊಂದಿದೆ.

ಭಾರತ ತಂಡ ಲೀಗ್ ಹಂತದಲ್ಲಿ ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ವಿರುದ್ಧ ಗೆಲುವು ಸಾಧಿಸಿತ್ತು. ಲಂಡನ್ ಒಲಿಂಪಿಕ್ಸ್‌ನಲ್ಲಿ ಈ ಎರಡೂ ತಂಡಗಳು ಮುಖಾಮುಖಿಯಾಗಿದ್ದವು. ಭಾರತ ತಂಡದ ಕೆಲ ಆಟಗಾರರು ಗಾಯದ ಸಮಸ್ಯೆಯಿಂಂದ ಬಳಲುತ್ತಿರುವ ಕಾರಣ ಬುಧವಾರ ಕೆಲವರು ಹೋಟೆಲ್‌ನಲ್ಲಿಯೇ ವಿಶ್ರಾಂತಿ ಪಡೆದರೆ, ಇನ್ನೂ ಕೆಲವರು ಸುತ್ತಮುತ್ತಲಿನ ಸ್ಥಳಗಳನ್ನು ವೀಕ್ಷಿಸಿದರು.`ನಾವು ಅತ್ಯುತ್ತಮ ತಂಡದೊಂದಿಗೆ ಆಡುತ್ತಿದ್ದೇವೆ. ಲೀಗ್ ಹಂತದಲ್ಲಿ ನೀಡಿದ ಪ್ರದರ್ಶನದಂತೆ ಕ್ವಾರ್ಟರ್ ಫೈನಲ್‌ನಲ್ಲೂ ಅದೇ ರೀತಿಯ ಪ್ರದರ್ಶನ ನೀಡುತ್ತೇವೆ' ಎಂದು ಭಾರತ ಹಾಕಿ ತಂಡದ ತರಬೇತುದಾರ ಮೈಕಲ್ ನಾಬ್ಸ್ ಹೇಳಿದ್ದಾರೆ. ಮಿಡ್‌ಫೀಲ್ಡರ್ ಮನ್‌ಪ್ರೀತ್ ಸಿಂಗ್, ಸ್ಟ್ರೈಕರ್ ಎಸ್.ವಿ. ಸುನಿಲ್ ಅವರು ಗಾಯದ ಸಮಸ್ಯೆಯಿಂದ ಬಳಲುತ್ತಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry