ಸೋಮವಾರ, ನವೆಂಬರ್ 18, 2019
21 °C

ಹಾಕಿ: ಭಾರತ ಮಹಿಳಾ ತಂಡಕ್ಕೆ ವೈಜ್ಞಾನಿಕ ಸಲಹೆಗಾರರ ನೇಮಕ

Published:
Updated:

ನವದೆಹಲಿ (ಪಿಟಿಐ): ಭಾರತ ಮಹಿಳಾ ಹಾಕಿ ತಂಡಕ್ಕೆ ವೈಜ್ಞಾನಿಕ ಸಲಹೆಗಾರರನ್ನಾಗಿ ಮ್ಯಾಥ್ಯು ಟ್ರೆಡ್ರಿಯಾ ಅವರನ್ನು ನೇಮಿಸಲಾಗಿದೆ. ದೈಹಿಕವಾಗಿ ಹಾಗೂ ಮಾನಸಿಕವಾಗಿ ಸಮರ್ಥ ತಂಡ ಕಟ್ಟುವ ನಿಟ್ಟಿನಲ್ಲಿ ಹಾಕಿ ಇಂಡಿಯಾ ಈ ಕ್ರಮಕ್ಕೆ ಮುಂದಾಗಿದೆ.26 ವರ್ಷ ವಯಸ್ಸಿನ ಟ್ರೆಡ್ರಿಯಾ ಈ ಹಿಂದೆ ಆಸ್ಟ್ರೇಲಿಯಾದ ವೃತ್ತಿಪರ ರಗ್ಬಿ ಲೀಗ್ ಕ್ಲಬ್, ನ್ಯೂ ಕ್ಯಾಸಲ್ ಪರ ಫಿಟ್‌ನೆಸ್ ಕೋಚ್ ಆಗಿ ಎರಡು ವರ್ಷ ಕಾರ್ಯನಿರ್ವಹಿಸಿದ್ದರು.ಈ ನೇಮಕದಿಂದ ಆಟಗಾರ್ತಿಯರು ಸೂಕ್ತ ಫಿಟ್‌ನೆಸ್ ಕಾಯ್ದುಕೊಳ್ಳಲು ನೆರವಾಗಬಹುದು ಎಂಬ ವಿಶ್ವಾಸವನ್ನು ಹಾಕಿ ಇಂಡಿಯಾದ ಪ್ರಧಾನ ಕಾರ್ಯದರ್ಶಿ ನರೀಂದರ್ ಬಾತ್ರಾ ವ್ಯಕ್ತಪಡಿಸಿದ್ದಾರೆ.`ಪ್ರಮುಖ ಟೂರ್ನಿಗಳಲ್ಲಿ ಪಾಲ್ಗೊಳ್ಳಲು ನಮ್ಮ ಜೂನಿಯರ್ ಹಾಗೂ ಸೀನಿಯರ್ ತಂಡಗಳು ಸಜ್ಜಾಗುತ್ತಿವೆ. ವೈಜ್ಞಾನಿಕ ಸಲಹೆಗಾರ ಮ್ಯಾಥ್ಯು ಈ ನಿಟ್ಟಿನಲ್ಲಿ ಪ್ರಮುಖ ಪಾತ್ರ ನಿಭಾಯಿಸಲಿದ್ದಾರೆ' ಎಂದು ಅವರು ನುಡಿದಿದ್ದಾರೆ.

ಪ್ರತಿಕ್ರಿಯಿಸಿ (+)