ಸೋಮವಾರ, ಜನವರಿ 20, 2020
29 °C

ಹಾಕಿ: ಮಹಿಳೆಯರಿಗೆ ಸತತ ಎರಡನೇ ಗೆಲುವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಭಾರತ ಪುರುಷರ ಹಾಕಿ ತಂಡದವರು ಇಲ್ಲಿ ಆರಂಭವಾದ ಹಾಕಿ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ 4-0ಗೋಲುಗಳಿಂದ ದಕ್ಷಿಣ ಆಫ್ರಿಕಾ ಎದುರು ಭರ್ಜರಿ ಗೆಲುವು ಪಡೆದರು.ಮೇಜರ್ ಧ್ಯಾನಚಂದ್ ರಾಷ್ಟ್ರೀಯ ಹಾಕಿ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಶಿವೇಂದರ್ ಸಿಂಗ್ 15ನೇ ನಿಮಿಷದಲ್ಲಿ ಗೋಲಿನ ಖಾತೆ ತೆರೆದು ಭಾರತಕ್ಕೆ 1-0ರಲ್ಲಿ ಆರಂಭಿಕ ಮುನ್ನಡೆ ತಂದುಕೊಟ್ಟರು.ಇದಾದ ಒಂಬತ್ತು ನಿಮಿಷಗಳಲ್ಲಿ ಬೀರೇಂದ್ರ ಲಾಕ್ರಾ ಮತ್ತೊಂದು ಗೋಲನ್ನು ತಂದಿಟ್ಟರು. ಸರ್ದಾರ್ ಸಿಂಗ್ 28ನೇ ನಿಮಿಷದಲ್ಲಿ ಇನ್ನೊಂದು ಗೋಲು ಗಳಿಸಿ ಆತಿಥೇಯ ತಂಡದ ಮುನ್ನಡೆಯನ್ನು 3-0ಗೆ ಹೆಚ್ಚಿಸಿದರು. ಆದರೆ, ಪ್ರವಾಸಿ ದಕ್ಷಿಣ ಆಫ್ರಿಕಾ ಗೋಲಿನ ಖಾತೆ ತೆರೆಯಲು ಪರದಾಟ ನಡೆಸಿತು. ದ್ವಿತಿಯಾರ್ಧದಲ್ಲಿ ಎಸ್.ಕೆ. ಉತ್ತಪ್ಪ (53ನೇ ನಿ) ಗೋಲು ಗಳಿಸಿದರು. ಇದರಿಂದ ಅಂತರದ ಗೆಲುವು ಪಡೆಯಲು ತವರಿನ ತಂಡಕ್ಕೆ ಸಾಧ್ಯವಾಯಿತು.ಲಂಡನ್ ಒಲಿಂಪಿಕ್ಸ್‌ಗೆ ಅರ್ಹತಾ ಸುತ್ತಿನ ಪಂದ್ಯಗಳು ಆರಂಭವಾಗಲು ಕೇವಲ ಒಂದು ತಿಂಗಳು ಮಾತ್ರ ಬಾಕಿ ಇರುವುದರಿಂದ ಈ ಗೆಲುವು ದಕ್ಕಿದ್ದು, ಭಾರತದ ಆತ್ಮ ವಿಶ್ವಾಸವನ್ನು ಹೆಚ್ಚಿಸಿದೆ.ಇದರಿಂದ ಒಟ್ಟು ಐದು ಪಂದ್ಯಗಳ ಸರಣಿಯಲ್ಲಿ ಭರತ್ ಚೆಟ್ರಿ ಪಡೆ 1-0ರಲ್ಲಿ ಮುನ್ನಡೆ ಸಾಧಿಸಿತು. ಪಂದ್ಯದ ಆರಂಭದ 35      ನಿಮಿಷಗಳಲ್ಲಿ ಗೋಲು ಗಳಿಸುವ ಅವಕಾಶವನ್ನು ಪ್ರವಾಸಿ ತಂಡ ಪಡೆದಿತ್ತು. ಆದರೆ, ಎದುರಾಳಿ ಪಡೆ ಇದಕ್ಕೆ ಅವಕಾಶ ನೀಡಲಿಲ್ಲ.ಮಹಿಳಾ ತಂಡದ ಗೆಲುವಿನ ಓಟ: ಭಾರತ ಮಹಿಳಾ ಹಾಕಿ ತಂಡ ಟೆಸ್ಟ್ ಸರಣಿಯ ಎರಡನೇ ಪಂದ್ಯದಲ್ಲೂ 2-1ಗೋಲುಗಳಿಂದ ಅಜರ್‌ಬೈಜಾನ್ ಎದುರು ಗೆಲುವು ಪಡೆಯಿತು.ವಿಜಯಿ ತಂಡದ ರಿತು ರಾಣಿ ಹಾಗೂ ಸಬಾ ಅಂಜುಮ್ ಕ್ರಮವಾಗಿ 18 ಮತ್ತು 41ನೇ ನಿಮಿಷದಲ್ಲಿ ಗೋಲು ಗಳಿಸಿದರು.ಇದರಿಂದ ಭಾರತ ತಂಡ ನಾಲ್ಕು ಪಂದ್ಯಗಳ ಸರಣಿಯಲ್ಲಿ 2-0ರಲ್ಲಿ ಮುನ್ನಡೆ ಗಳಿಸಿತು.

ಪ್ರತಿಕ್ರಿಯಿಸಿ (+)