ಹಾಕಿ: ಮೈಸೂರು, ಗುಲ್ಬರ್ಗ ತಂಡಗಳಿಗೆ ಜಯ

7

ಹಾಕಿ: ಮೈಸೂರು, ಗುಲ್ಬರ್ಗ ತಂಡಗಳಿಗೆ ಜಯ

Published:
Updated:

ಬಾಗಲಕೋಟೆ: ಮೈಸೂರು, ಗುಲ್ಬರ್ಗ ಮತ್ತು ಕೂಡಿಗಿ ಕ್ರೀಡಾ ವಸತಿ ನಿಲಯ ತಂಡಗಳು  ಸಾರ್ವಜನಿಕ ಶಿಕ್ಷಣ ಇಲಾಖೆಯ ಆಶ್ರಯದಲ್ಲಿ ನಗರದ ಬಸವೇಶ್ವರ ವಿದ್ಯಾವರ್ಧಕ ಸಂಘದ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪ್ರಾಥಮಿಕ ಮತ್ತು ಪ್ರೌಢಶಾಲಾ ಬಾಲಕ-ಬಾಲಕಿಯರ ರಾಜ್ಯ ಹಾಕಿ ಟೂರ್ನಿಯಲ್ಲಿ ಮೊದಲ ದಿನ ಗೆಲುವು ಪಡೆದಿವೆ.ಮಂಗಳವಾರ ನಡೆದ 17 ವರ್ಷದ ಬಾಲಕರ ವಿಭಾಗದ ಮೊದಲ ಪಂದ್ಯದಲ್ಲಿ ಕೂಡಿಗಿ ತಂಡ 2-1 ಗೋಲುಗಳಿಂದ ಬೆಂಗಳೂರು ತಂಡವನ್ನು ಸೋಲಿಸಿತು. ಕೂಡಿಗಿ ಪರ ವಿನಯ ಮತ್ತು ಹನಮೇಶ ತಲಾ ಒಂದು ಗೋಲು ಗಳಿಸಿದರೆ ಬೆಂಗಳೂರು ತಂಡಕ್ಕೆ ವಿನಯ ಎಸ್.ಎಂ. ಗೋಲು ತಂದುಕೊಟ್ಟರು.ಗುಲ್ಬರ್ಗ ತಂಡ ಬೆಳಗಾವಿಯನ್ನು 3-0 ಗೋಲುಗಳಿಂದ ಜಯ ಮಣಿಸಿತು. ಸುರೇಶ, ಶ್ರೀನಿವಾಸ ಮತ್ತು ದಯಾಸಾಗರ ಒಂದೊಂದು ಗೋಲು ಬಾರಿಸಿದರು. ಮತ್ತೊಂದು ಪಂದ್ಯದಲ್ಲಿ ಮೈಸೂರು ತಂಡ ಬೆಂಗಳೂರಿನ ಸೇಂಟ್ ಜೋಸೆಫ್ ಇಂಡಿಯನ್ ಸ್ಕೂಲ್ ತಂಡವನ್ನು  2-0 ಗೋಲುಗಳಿಂದ ಜಯ ಸೋಲಿಸಿತು.ಎಸ್.ಎಚ್. ಕೂಡಿಗಿ  ಮತ್ತು ಬೆಳಗಾವಿ ನಡುವಣ ಪಂದ್ಯ ಡ್ರಾ (1-1) ಆಯಿತು. ಕೂಡಿಗೆ ಪರ ಪ್ರಶಾಂತ ಮತ್ತು ಬೆಳಗಾವಿ ಪರ ಮಹೇಶ ಗೋಲು ಬಾರಿಸಿದರು.17 ವರ್ಷದೊಳಗಿನ ಬಾಲಕಿಯರ ವಿಭಾಗದಲ್ಲಿ ಎಸ್.ಎಚ್. ಕೂಡಿಗಿ ತಂಡ ಏಕಪಕ್ಷೀಯವಾದ 15 ಗೋಲುಗಳಿಂದ ಬೆಂಗಳೂರು ತಂಡವನ್ನು ಮಣಿಸಿತು. ಕೂಡಿಗಿ ಪರ ರಮ್ಯಾ ಅಮೋಘ 5 ಗೋಲು ಗಳಿಸಿದರೆ, ಸೌಂದರ್ಯಾ, ನೇಹಾ,  ಕೃತಿಕಾ, ಮೈಕೆಲ್ ದೀಕ್ಷಾ ಮತ್ತು ಅಮೂಲ್ಯ ತಲಾ ಎರಡು ಗೋಲುಗಳನ್ನು ತಂದಿತ್ತರು.14 ವರ್ಷದೊಳಗಿನ ಬಾಲಕರ ವಿಭಾಗದಲ್ಲಿ ಮೈಸೂರು ತಂಡ ಬೆಳಗಾವಿಯನ್ನು 6-1 ಗೋಲುಗಳಿಂದ ಮಣಿಸಿತು. ಮತ್ತೊಂದು ಪಂದ್ಯದಲ್ಲಿ ಗುಲ್ಬರ್ಗ 5-0 ಗೋಲುಗಳಿಂದ ಬೆಂಗಳೂರು ತಂಡವನ್ನು ಸೋಲಿಸಿತು.14 ವರ್ಷದೊಳಗಿನ ಬಾಲಕಿಯರ ವಿಭಾಗದಲ್ಲಿ ಬೆಂಗಳೂರು ತಂಡ  ಮೈಸೂರು ತಂಡವನ್ನು 2-0 ಗೋಲುಗಳಿಂದ ಸೋಲಿಸಿತು. ಬೆಂಗಳೂರು ಪರ ಧನುಶ್ರೀ ಮತ್ತು ಚೈತ್ರಾ ಒಂದೊಂದು ಗೋಲು ಹೊಡೆದರು.ಬೆಳಗಾವಿ ತಂಡ ಗುಲ್ಬರ್ಗ ತಂಡವನ್ನು 4-0 ಗೋಲುಗಳಿಂದ ಸೋಲಿಸಿತು.  ಬೆಳಗಾವಿ ಪರ ಸಿಂಚನಾ 2, ತನುಜಾ ಮತ್ತು ಶೃತಿ ತಲಾ ಒಂದೊಂದು ಗೋಲು ಬಾರಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry