ಹಾಕಿ: ರಘುನಾಥ್‌ಗೆ ರೂ 1 ಲಕ್ಷ ಬಹುಮಾನ

7

ಹಾಕಿ: ರಘುನಾಥ್‌ಗೆ ರೂ 1 ಲಕ್ಷ ಬಹುಮಾನ

Published:
Updated:

ನವದೆಹಲಿ (ಪಿಟಿಐ): ಏಷ್ಯಾ ಕಪ್‌ ಹಾಕಿ ಟೂರ್ನಿಯಲ್ಲಿ ಎರಡನೇ ಸ್ಥಾನ ಪಡೆದ ಭಾರತ ತಂಡದ ಮೂವರು ಆಟಗಾರರಿಗೆ ಹಾಕಿ ಇಂಡಿಯಾ ತಲಾ ಒಂದು ಲಕ್ಷ ರೂಪಾಯಿ  ಬಹುಮಾನ ಪ್ರಕಟಿಸಿದೆ.ಟೂರ್ನಿಯ ‘ಅತ್ಯುತ್ತಮ ಆಟ­ಗಾರ’ ಪ್ರಶಸ್ತಿ ಪಡೆದ ಕರ್ನಾಟಕದ ವಿ.ಆರ್‌.ರಘುನಾಥ್‌, ‘ಅತ್ಯುತ್ತಮ ಗೋಲ್‌ ಕೀಪರ್‌’ ಎನಿಸಿದ ಕೇರಳದ ಪಿ.ಆರ್‌.ಶ್ರೀಜೇಶ್‌ ಹಾಗೂ ಪದಾ­ರ್ಪಣೆ ಪಂದ್ಯದಲ್ಲಿ ಗೋಲು ಗಳಿಸಿದ ರಮಣದೀಪ್‌ ಸಿಂಗ್‌ ಅವರು ತಲಾ ಒಂದು ಲಕ್ಷ ರೂಪಾಯಿ ಪಡೆಯಲಿದ್ದಾರೆ.‘ಎರಡನೇ ಸ್ಥಾನ ಪಡೆದ ತಂಡಕ್ಕೆ ಅಭಿನಂದನೆ. ಈ ಟೂರ್ನಿಯ ಎರಡು ವೈಯಕ್ತಿಕ ಪ್ರಶಸ್ತಿಗಳು ನಮ್ಮ ತಂಡದ ಪಾಲಾಗಿದೆ. ಇದು ನಮ್ಮ ಪ್ರದರ್ಶನ ಮಟ್ಟಕ್ಕೆ ಉದಾಹರಣೆ’ ಎಂದು ಹಾಕಿ ಇಂಡಿಯಾ ಪ್ರಧಾನ ಕಾರ್ಯದರ್ಶಿ ನರೀಂದರ್‌ ಬಾತ್ರಾ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry