ಹಾಕಿ: ರೇಂಜರ್ಸ್‌ ಕ್ಲಬ್‌ಗೆ ಜಯ

7

ಹಾಕಿ: ರೇಂಜರ್ಸ್‌ ಕ್ಲಬ್‌ಗೆ ಜಯ

Published:
Updated:

ಬೆಂಗಳೂರು: ರೇಂಜರ್ಸ್‌ ಹಾಕಿ ಕ್ಲಬ್ ತಂಡದವರು ಕೆಎಸ್‌ಎಚ್‌ಎ ಆಶ್ರಯದಲ್ಲಿ ನಡೆಯುತ್ತಿರುವ ತಿರುವಾಂಕೂರ್ ಕಪ್ ಹಾಕಿ ಟೂರ್ನಿಯ ಸೋಮವಾರದ ಪಂದ್ಯದಲ್ಲಿ 2-1ಗೋಲುಗಳಿಂದ ನವೀನ್ ಕ್ಲಬ್ ಎದುರು ಗೆಲುವು ಸಾಧಿಸಿದರು.ಅಕ್ಕಿ ತಿಮ್ಮನಹಳ್ಳಿ ರಾಜ್ಯ ಹಾಕಿ ಸಂಸ್ಥೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ವಿಜಯಿ ತಂಡದ ಮೈಕಲ್ (7ನೇ ನಿ.) ಗೋಲಿನ ಖಾತೆ ತೆರೆದರು. ಇದಕ್ಕೆ ಪ್ರಬಲ ಪೈಪೋಟಿ ಒಡ್ಡಿದ ನವೀನ್ ಕ್ಲಬ್‌ನ ಸುಜಿತ್‌ರಾವ್ 28ನೇ ನಿಮಿಷದಲ್ಲಿ ಗೋಲು ತಂದಿತ್ತರು. ಆದ್ದರಿಂದ ಉಭಯ ತಂಡಗಳು ವಿರಾಮದ ವೇಳೆಗೆ 1-1ರಲ್ಲಿ ಸಮಬಲ ಸಾಧಿಸಿದ್ದವು.ವಿರಾಮದ ನಂತರ ಜೋಷು (47ನೇ ನಿ.) ಗಳಿಸಿ ರೇಂಜರ್ಸ್‌ ತಂಡದ ಗೆಲುವಿಗೆ ಕಾರಣರಾದರು.

ಮಂಗಳವಾರದ ಪಂದ್ಯ: ಪ್ರಿಮ್‌ರೋಸ್ ಕ್ಲಬ್-ರೇಂಜರ್ಸ್‌ ಕ್ಲಬ್ (ಸಂಜೆ 4.15ಕ್ಕೆ).

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry