ಹಾಕಿ: ವಾಸು ಕ್ಲಬ್‌ಗೆ ಗೆಲುವು

7

ಹಾಕಿ: ವಾಸು ಕ್ಲಬ್‌ಗೆ ಗೆಲುವು

Published:
Updated:

ಬೆಂಗಳೂರು: ವಾಸು ಸ್ಪೋರ್ಟ್ಸ್ ಕ್ಲಬ್‌ ತಂಡದವರು ಕೆಎಸ್‌ಎಚ್‌ಎ ಆಶ್ರಯದಲ್ಲಿ ನಡೆಯುತ್ತಿರುವ ಮಹಿ­ಳೆ­ಯರ ಹಾಕಿ ಲೀಗ್‌ ಚಾಂಪಿ­ಯನ್‌ಷಿಪ್‌ನ ಬುಧವಾರದ ಪಂದ್ಯ­ದಲ್ಲಿ 2–1 ಗೋಲುಗಳಿಂದ ವೈಇ­ಎಸ್‌ಡಿ ಎದುರು ಗೆಲುವು ಸಾಧಿಸಿದರು.ಅಕ್ಕಿ ತಿಮ್ಮನಹಳ್ಳಿ ರಾಜ್ಯ ಹಾಕಿ ಸಂಸ್ಥೆಯ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ 6ನೇ ನಿಮಿಷದಲ್ಲಿ ಹುಬ್ಬಳ್ಳಿ ತಂಡಕ್ಕೆ ಮೊದಲ ಗೋಲು ‘ಉಡುಗೊರೆ’ಯಾಗಿ ಬಂತು. ಇನ್ನೊಂದು ಗೋಲನ್ನು ಕೆ.ಸಿ. ಚೈತ್ರಾ 25ನೇ ನಿಮಿಷದಲ್ಲಿ ತಂದಿತ್ತರು.ದಿನದ ಇನ್ನೊಂದು ಪಂದ್ಯದಲ್ಲಿ  ಭಾರತ ಕ್ರೀಡಾ ಪ್ರಾಧಿಕಾರ ‘ಬಿ’ ತಂಡ 4–1 ಗೋಲುಗಳಿಂದ ಕೂಡಿಗೆಯ ಸರ್ಕಾರಿ ಶಾಲಾ ತಂಡವನ್ನು ಮಣಿಸಿತು.ವಿಜಯೀ ತಂಡದ ಸಿ. ರಂಜಿತಾ ಮೊದಲ ನಿಮಿಷದಲ್ಲಿ ಗೋಲಿನ ಖಾತೆ ತೆರೆದರು. ಉಳಿದ ಗೋಲುಗಳನ್ನು ಪಿ.ಸಿ. ನೀಚಾ (8ನೇ ನಿಮಿಷ), ಎ.ಎ. ವಿಷ್ಮಾ (24ನೇ ನಿ.), ಜಿ.ಕೆ. ಇಂದುಶ್ರೀ (47ನೇ ನಿ.) ಕಲೆ ಹಾಕಿದರು. ಕೂಡಿಗೆ ತಂಡದ ಸೌಂದರ್ಯ ಮಾತ್ರ 37ನೇ ನಿಮಿಷದಲ್ಲಿ ಗೋಲು ಕಲೆ ಹಾಕುವಲ್ಲಿ ಯಶ ಕಂಡರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry