ಹಾಕಿ: ಸಂದೀಪ್‌ಗೆ ಗಾಯ

7

ಹಾಕಿ: ಸಂದೀಪ್‌ಗೆ ಗಾಯ

Published:
Updated:

ಪರ್ತ್ (ಪಿಟಿಐ): ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಭಾರತ ಹಾಕಿ ತಂಡದ ಡಿಫೆಂಡರ್ ಸಂದೀಪ್ ಸಿಂಗ್ ಗಾಯಗೊಂಡಿದ್ದಾರೆ. ಇದರಿಂದ ಗುರುವಾರ ಆರಂಭವಾಗಲಿರುವ `ಹಾಕಿ 9 ಸೂಪರ್ ಸೀರಿಸ್~ ಟೂರ್ನಿಯಲ್ಲಿ ತಂಡಕ್ಕೆ ಅವರ ಸೇವೆ ಲಭಿಸುತ್ತಿಲ್ಲ.

ರಾಕಿಂಗ್‌ಹ್ಯಾಮ್‌ನಲ್ಲಿ ಶನಿವಾ,ರ ನಡೆದ ಆಸ್ಟ್ರೇಲಿಯಾ `ಎ~ ತಂಡದ ವಿರುದ್ಧದ ಪಂದ್ಯದ ವೇಳೆ ಸಂದೀಪ್ ಅವರ ಮೂಗಿಗೆ ಗಾಯವಾಗಿತ್ತು ಎಂದು ಭಾರತ ತಂಡದ ಕೋಚ್ ಮೈಕಲ್ ನಾಬ್ಸ್ ಹೇಳಿದ್ದಾರೆ.

`ಭಾರತ ತಂಡ ಬುಧವಾರ  ಬೆಳಿಗ್ಗೆ ಪರ್ತ್‌ಗೆ ಆಗಮಿಸಿತು. ಸಂದೀಪ್ ಅವರನ್ನು ಪರೀಕ್ಷಿಸಿದ ವೈದ್ಯರು, ವಿಶ್ರಾಂತಿ ಪಡೆಯುವಂತೆ ಸೂಚಿಸಿದ್ದಾರೆ. ಗಾಯ ಗಂಭೀರವಾದುದಲ್ಲ. ಆದರೆ ನಾವು ಅವರನ್ನು ಕಣಕ್ಕಿಳಿಸಿ ಅಪಾಯವನ್ನು ಆಹ್ವಾನಿಸುವುದಿಲ್ಲ~ ಎಂದು ನಾಬ್ಸ್ ನುಡಿದಿದ್ದಾರೆ.

`ಸಂದೀಪ್ ತಂಡದ ಪ್ರಮುಖ ಸದಸ್ಯ. ಹಾಕಿ 9 ಸೂಪರ್ ಸೀರಿಸ್ ಬಳಿಕ ನಡೆಯುವ ಪಂದ್ಯಗಳಲ್ಲಿ ಅವರು ಆಡುವರು~ ಎಂಬ ವಿಶ್ವಾಸವನ್ನು ನಾಬ್ಸ್ ವ್ಯಕ್ತಪಡಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry