ಹಾಕಿ: ಸಹ್ಯಾದ್ರಿ ತಂಡದಿಂದ ಗೋಲಿನ ಸುರಿಮಳೆ

ಬುಧವಾರ, ಜೂಲೈ 17, 2019
26 °C

ಹಾಕಿ: ಸಹ್ಯಾದ್ರಿ ತಂಡದಿಂದ ಗೋಲಿನ ಸುರಿಮಳೆ

Published:
Updated:

ಬೆಂಗಳೂರು: ಶಿವಮೊಗ್ಗದ ಸಹ್ಯಾದ್ರಿ ಹಾಕಿ ಕ್ಲಬ್ ತಂಡದವರು ಕರ್ನಾಟಕ ರಾಜ್ಯ ಹಾಕಿ ಸಂಸ್ಥೆ ಆಶ್ರಯದ ರಾಜ್ಯ `ಸಿ~ ಡಿವಿಷನ್ ಹಾಕಿ ಲೀಗ್ ಚಾಂಪಿಯನ್‌ಷಿಪ್‌ನಲ್ಲಿ ಗೋಲಿನ ಸುರಿಮಳೆಗೆರೆದರು.ಅಕ್ಕಿತಿಮ್ಮನಹಳ್ಳಿ ರಾಜ್ಯ ಹಾಕಿ ಸಂಸ್ಥೆ  ಕ್ರೀಡಾಂಗಣದಲ್ಲಿ ಶನಿವಾರ ನಡೆದ ಏಕಪಕ್ಷೀಯವಾಗಿದ್ದ ಪಂದ್ಯದಲ್ಲಿ ಸಹ್ಯಾದ್ರಿ ಹಾಕಿ ಕ್ಲಬ್ ತಂಡದವರು 15-0 ಗೋಲುಗಳಿಂದ ಬೆಂಗಳೂರಿನ ಮೆಟ್ರೋ ಹಾಕಿ ಕ್ಲಬ್ ವಿರುದ್ಧ ಸುಲಭ ವಿಜಯ ಸಾಧಿಸಿದರು. ವಿಜಯಿ ತಂಡದ ಶಶಾಂಕ್ (2), ಭರತ್ (3), ಸೈಯದ್ ಮಜಹರ್, ಸುರೇಶ್ (4), ಕುಮಾರ್, ಸಾಗರ್, ಸಂಜಯ್, ಶ್ರೀಕಾಂತ್ ಗೋಲು ತಂದಿತ್ತರು.ಇದೇ ಲೀಗ್ ಇನ್ನೊಂದು ಪಂದ್ಯದಲ್ಲಿ ಬೆಂಗಳೂರಿನ ರೇಂಜರ್ಸ್‌ ಹಾಕಿ ಕ್ಲಬ್ ತಂಡ 10-1 ಗೋಲುಗಳಿಂದ ಕಾವೇರಿ ಸ್ಪೋರ್ಟ್ಸ್ ಕ್ಲಬ್ ತಂಡವನ್ನು ಸುಲಭವಾಗಿ ಮಣಿಸಿತು. ವಿಜಯಿ ತಂಡದ ಮೈಕೆಲ್ ಬೇಕ್ಸ್ (2), ನಂದಕುಮಾರ್ (2), ಮನೋವಾ, ಸ್ಯಾಮ್ಯುಯಲ್ (2), ಪುರುಷೋತ್ತಮ್, ಕುಟ್ಟಪ್ಪ (2) ಹಾಗೂ ಎದುರಾಳಿ ತಂಡದ ಮಹಮದ್ ಅಜರ್ ಚೆಂಡನ್ನು ಗುರಿಮುಟ್ಟಿಸಿದರು.ದಿನದ ಕೊನೆಯ ಪಂದ್ಯದಲ್ಲಿ ಬಿಇಎಲ್ ಕಾಲೋನಿ ಯೂತ್ ಸಂಸ್ಥೆ ತಂಡ ಬೆಂಗಳೂರು ಫ್ರೆಂಡ್ಸ್ ಹಾಕಿ ಕ್ಲಬ್ ಮೇಲೆ 5-0 ಗೋಲುಗಳಿಂದ ವಿಜಯ ಸಾಧಿಸಿತು.ಏಕಪಕ್ಷೀಯವಾಗಿದ್ದ ಪಂದ್ಯದಲ್ಲಿ ಬಿಇಎಲ್ ತಂಡದ ಸಂತೋಷ್ (2), ಅಲ್ವಿನ್ (2), ರೋಷನ್  ಗೋಲು ತಂದಿತ್ತರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry