ಹಾಕಿ: ಸೆಮಿಫೈನಲ್ ಲೀಗ್‌ಗೆ ಎಸ್‌ಎಐ

7

ಹಾಕಿ: ಸೆಮಿಫೈನಲ್ ಲೀಗ್‌ಗೆ ಎಸ್‌ಎಐ

Published:
Updated:

ಬೆಂಗಳೂರು: ಭಾರತ ಕ್ರೀಡಾ ಪ್ರಾಧಿಕಾರ ‘ಎ’ ಹಾಗೂ ಎ.ಎಸ್.ಸಿ. ತಂಡದವರು ಇಲ್ಲಿ ನಡೆಯುತ್ತಿರುವ ಬೆಂಗಳೂರು ಕೊಡವ ಸಮಾಜ ಆಶ್ರಯದ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಸ್ಮಾರಕ ರಾಜ್ಯಮಟ್ಟದ ಹಾಕಿ ಟೂರ್ನಿ ಸೆಮಿಫೈನಲ್ ರೌಂಡ್ ರಾಬಿನ್ ಲೀಗ್ ಪ್ರವೇಶಿಸಿದರು.ಅಕ್ಕಿತಿಮ್ಮನಹಳ್ಳಿ ರಾಜ್ಯ ಹಾಕಿ ಸಂಸ್ಥೆ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಭಾರತ ಕ್ರೀಡಾ ಪ್ರಾಧಿಕಾರ ‘ಎ’ ತಂಡ 7-0 ಗೋಲುಗಳಿಂದ ಪಿ.ಸಿ.ಟಿ.ಸಿ. ತಂಡವನ್ನು ಸುಲಭವಾಗಿ ಮಣಿಸಿತು. ಏಕಪಕ್ಷೀಯವಾಗಿದ್ದ ಪಂದ್ಯದಲ್ಲಿ ವಿಜಯಿ ತಂಡದ ಪ್ರಧಾನ್ ಸೋಮಣ್ಣ, ನಿಖಿನ್ ತಿಮ್ಮಯ್ಯ, ಎಂ.ಬಿ. ಅಯ್ಯಪ್ಪ (2), ದೀಪಕ್ ಬಿಜ್‌ವಾದ್, ಎಸ್,ಕೆ. ಉತ್ತಪ್ಪ (2) ಗೋಲು ತಂದಿತ್ತರು.

ಇದೇ ಟೂರ್ನಿ ಇನ್ನೊಂದು ಪಂದ್ಯದಲ್ಲಿ ಎ.ಎಸ್.ಸಿ. ತಂಡ 2-1 ಗೋಲುಗಳಿಂದ ಕೆ.ಎಸ್.ಪಿ. ತಂಡವನ್ನು ಸೋಲಿಸಿತು. ವಿಜಯಿ ತಂಡದ ಸರಜನ್ ತುತ್ತಿ, ದೀಪು ಹಾಗೂ ಎದುರಾಳಿ ತಂಡದ ರಾಜಶೇಖರ್ ಚೆಂಡನ್ನು ಗುರಿಮುಟ್ಟಿಸಿದರು.ನಾಳೆ (ಬುಧವಾರ) ಮಧ್ಯಾಹ್ನ 4-00ಕ್ಕೆ ಎಂ.ಇ.ಜಿ.- ಸಿ.ಒ.ಇ ನಡುವೆ ಪಂದ್ಯ ನಡೆಯಲಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry