ಹಾಕಿ: ಹರಿಯಾಣ ತಂಡಕ್ಕೆ ಪ್ರಶಸ್ತಿ

7

ಹಾಕಿ: ಹರಿಯಾಣ ತಂಡಕ್ಕೆ ಪ್ರಶಸ್ತಿ

Published:
Updated:

ಸೋನೆಪತ್ (ಐಎಎನ್‌ಎಸ್):  ಹರಿಯಾಣ ತಂಡ ಶುಕ್ರವಾರ ಇಲ್ಲಿ ಕೊನೆಗೊಂಡ ಹಾಕಿ ಇಂಡಿಯಾ ಆಶ್ರಯದ ಎರಡನೇ ರಾಷ್ಟ್ರೀಯ ಜೂನಿಯರ್ ಮಹಿಳೆಯರ ಹಾಕಿ ಟೂರ್ನಿಯಲ್ಲಿ ಪ್ರಶಸ್ತಿ ಜಯಿಸಿತು.ಫೈನಲ್‌ನಲ್ಲಿ ಹರಿಯಾಣ 5-4 ಗೋಲುಗಳಿಂದ ಚಂಡೀಗಡ ತಂಡವನ್ನು ಸೋಲಿಸಿತು. ವಿಜಯಿ ತಂಡದ ನವಜೋತ್ ಕೌರ್ (24ನೇ ನಿಮಿಷ), ನವನೀತ್ ಕೌರ್ (44ನೇ ನಿ.), ರೀನಾ ರಾಣಿ (55ನೇ ನಿ, 67ನೇ ನಿ.) ಗಳಿಸಿದರು.16ನೇ ನಿಮಿಷದಲ್ಲಿ ಚಂಡೀಗಡ ತಂಡ ಉಡುಗೊರೆ ಗೋಲು ನೀಡಿತ್ತು. ಚಂಡೀಗಡದ ಹರ್ದೀಪ್ ಕೌರ್ (3ನೇ ನಿ.), ಪೂಜಾ ರಾಣಿ (14ನೇ, 59ನೇ ನಿ.) ಹಾಗೂ ನವಪ್ರೀತ್ ಕೌರ್ (52ನೇ ನಿ.) ಚೆಂಡನ್ನು ಗುರಿ ಸೇರಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry