ಹಾಕಿ: ಹಾಲಪ್ಪ ಬದಲು ಭರತ್ ಚಿಕಾರ

7

ಹಾಕಿ: ಹಾಲಪ್ಪ ಬದಲು ಭರತ್ ಚಿಕಾರ

Published:
Updated:

ನವದೆಹಲಿ (ಪಿಟಿಐ): ಭರತ್ ಚಿಕಾರ ಒಲಿಂಪಿಕ್ ಅರ್ಹತಾ ಟೂರ್ನಿಗೆ ಸಜ್ಜಾಗುತ್ತಿರುವ ಭಾರತ ಹಾಕಿ ತಂಡದಲ್ಲಿ ರಿಸರ್ವ್ ಆಟಗಾರನಾಗಿ ಸ್ಥಾನ ಪಡೆದಿದ್ದಾರೆ. ಅರ್ಜುನ್ ಹಾಲಪ್ಪ ಬದಲು ಅನುಭವಿ ಫಾರ್ವರ್ಡ್ ಚಿಕಾರ ತಂಡ ಸೇರಿಕೊಂಡಿದ್ದಾರೆ.ರಿಸರ್ವ್ ಆಟಗಾರನ ಸ್ಥಾನ ನೀಡಿದ್ದಕ್ಕೆ ಬೇಸರ ವ್ಯಕ್ತಪಡಿಸಿ ಅರ್ಜುನ್ ನವದೆಹಲಿಯಲ್ಲಿ ನಡೆಯುತ್ತಿರುವ ಆಟಗಾರರ ಶಿಬಿರ ತೊರೆದಿದ್ದರು. ಅವರ ಸ್ಥಾನದಲ್ಲಿ ಭರತ್‌ಗೆ ಅವಕಾಶ ಲಭಿಸಿದೆ. `ಭರತ್ ತಂಡದ ಸದಸ್ಯರೊಂದಿಗೆ ತರಬೇತಿಯಲ್ಲಿ ಪಾಲ್ಗೊಂಡಿದ್ದಾರೆ. ರಿಸರ್ವ್ ಆಟಗಾರನಾಗಿ ಅವರು ತಂಡ ಸೇರಿಕೊಳ್ಳುವರು~ ಎಂದು ಹಾಕಿ ಇಂಡಿಯಾ ಆಯ್ಕೆ ಸಮಿತಿ ಸದಸ್ಯರೊಬ್ಬರು ಹೇಳಿದ್ದಾರೆ. ಭಾರತ ತಂಡದ ನಾಯಕ ಭರತ್ ಚೆಟ್ರಿ  ಕೂಡಾ ಇದನ್ನು ಖಚಿತಪಡಿಸಿಕೊಂಡಿದ್ದಾರೆ.ಅರ್ಜುನ್ ಹಾಲಪ್ಪ ಅಲ್ಲದೆ, ಮಂಜೀತ್ ಕುಲ್ಲು, ವಿ.ಎಸ್. ವಿನಯ್ ಮತ್ತು ಚಿಂಗ್ಲೇಸನ ಸಿಂಗ್ ಅವರಿಗೆ ರಿಸರ್ವ್ ಆಟಗಾರರ ಸ್ಥಾನ ನೀಡಲಾಗಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry