ಹಾಕಿ: ಹಾವೇರಿ ಸ್ಪೋರ್ಟ್ಸ್ ಕ್ಲಬ್ ಶುಭಾರಂಭ

ಮಂಗಳವಾರ, ಜೂಲೈ 16, 2019
25 °C

ಹಾಕಿ: ಹಾವೇರಿ ಸ್ಪೋರ್ಟ್ಸ್ ಕ್ಲಬ್ ಶುಭಾರಂಭ

Published:
Updated:

ಬೆಂಗಳೂರು: ರಾಘವೇಂದ್ರ ಗಳಿಸಿದ ಎರಡು ಗೋಲುಗಳ ನೆರವಿನಿಂದ ಹಾವೇರಿ ಸ್ಪೋರ್ಟ್ಸ್ ಕ್ಲಬ್ ತಂಡದವರು ಕರ್ನಾಟಕ ರಾಜ್ಯ ಹಾಕಿ ಸಂಸ್ಥೆ ಆಶ್ರಯದಲ್ಲಿ ಇಲ್ಲಿ ಆರಂಭವಾದ `ಸಿ~ ಡಿವಿಷನ್ ಹಾಕಿ ಲೀಗ್ ಚಾಂಪಿಯನ್‌ಷಿಪ್‌ನ ಪಂದ್ಯದಲ್ಲಿ ಶುಭಾರಂಭ ಮಾಡಿದರು.ಅಕ್ಕಿ ತಿಮ್ಮನಹಳ್ಳಿ ರಾಜ್ಯ ಹಾಕಿ ಸಂಸ್ಥೆ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಹಾವೇರಿ ತಂಡ 4-2ಗೋಲುಗಳಿಂದ ನಾಗನಾಥಪುರದ ಬಾಷ್ ಕ್ಲಬ್ ತಂಡವನ್ನು ಮಣಿಸಿತು.ವಿಜಯಿ ತಂಡದ ನಿತಿನ್ ಕುಮಾರ್ ಹಾಗೂ ಆದಿತ್ಯ ಕ್ರಮವಾಗಿ (3 ಹಾಗೂ 7ನೇ ನಿ.) ಗೋಲು ತಂದಿತ್ತರೆ, ಇನ್ನೆರೆಡು ಗೋಲುಗಳನ್ನು ರಾಘವೇಂದ್ರ 34 ಹಾಗೂ 35ನೇ ನಿಮಿಷದಲ್ಲಿ ಗಳಿಸಿ ಗೆಲುವಿನ ಅಂತರ ಹೆಚ್ಚಿಸಿದರು. ಬಾಷ್ ಕ್ಲಬ್ ತಂಡದ ಜೋಸೆಫ್ ಎಲಂಗೊ (7ನೇ ನಿ.) ಹಾಗೂ ವಿನು ಕುಮಾರ್ (41ನೇ ನಿ.)ಗೋಲು ಗಳಿಸಿ ತಂಡವನ್ನು ಗೆಲುವಿನ ದಡಕ್ಕೆ ಸೇರಿಸಲು ನಡೆಸಿದ ಯತ್ನ ವಿಫಲವಾಯಿತು.ದಿನದ ಇನ್ನೊಂದು ಪಂದ್ಯದಲ್ಲಿ ಬೆಂಗಳೂರಿನ ಬಾಷ್ ಸ್ಪೋರ್ಟ್ಸ್ ಕ್ಲಬ್ ತಂಡ 3-0ಗೋಲುಗಳಿಂದ ಐಟಿಸಿ ತಂಡವನ್ನು ಮಣಿಸಿತು. ಪಿ.ಪಿ. ಸೋಮಣ್ಣ 1 ಹಾಗೂ 45ನೇ ನಿಮಿಷದಲ್ಲಿ ಗೋಲು ಗಳಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಇನ್ನೊಂದು ಗೋಲನ್ನು ಸುಭ್ರಮಣಿ 47ನೇ ನಿಮಿಷದಲ್ಲಿ ತಂದಿತ್ತರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry