ಹಾಕಿ: ಹುಬ್ಬಳ್ಳಿ ತಂಡಕ್ಕೆ ಗೆಲುವು

7

ಹಾಕಿ: ಹುಬ್ಬಳ್ಳಿ ತಂಡಕ್ಕೆ ಗೆಲುವು

Published:
Updated:

ಬೆಂಗಳೂರು: ಹುಬ್ಬಳ್ಳಿಯ ಯಂಗ್‌ಸ್ಟರ್‌ ಕ್ಲಬ್‌ ರಾಜ್ಯ ಹಾಕಿ ಸಂಸ್ಥೆ ಆಶ್ರಯದಲ್ಲಿ ನಡೆಯುತ್ತಿರುವ ರಾಜ್ಯ ‘ಎ’ ಡಿವಿಷನ್‌ ಹಾಕಿ ಚಾಂಪಿಯನ್‌ಷಿಪ್‌ನ ಶುಕ್ರವಾರದ ಪಂದ್ಯದಲ್ಲಿ ಗೆಲುವು ಸಾಧಿಸಿತು.ಅಕ್ಕಿ ತಿಮ್ಮನಹಳ್ಳಿ ಹಾಕಿ ಕ್ರೀಡಾಂ ಗಣದಲ್ಲಿ ನಡೆದ ಪಂದ್ಯದಲ್ಲಿ ಯಂಗ್‌ಸ್ಟರ್‌ 3–2 ಗೋಲುಗಳಿಂದ ಆರ್‌ಬಿಐ ಎದುರು ಗೆಲುವು ಸಾಧಿ ಸಿತು. ವಿಜಯೀ ತಂಡದ ಲಖನ್‌ 41ನೇ ನಿಮಿಷದಲ್ಲಿ ಗೋಲಿನ ಖಾತೆ ತೆರೆದರೆ, ನಾಗರಾಜು 51 ಹಾಗೂ 55ನೇ ನಿಮಿಷದಲ್ಲಿ ಗೋಲು ಗಳಿಸಿ ಗೆಲುವಿನ ರೂವಾರಿ ಎನಿಸಿದರು.ಎಸ್‌ಬಿಎಂ ಜೈನ್‌ ಕಾಲೇಜು ತಂಡ 8– 1 ಗೋಲುಗಳಿಂದ ಬೆಳಗಾವಿ ಜಿಲ್ಲಾ ಹಾಕಿ ಸಂಸ್ಥೆ ಎದುರು ಗೆಲುವು ಸಾಧಿಸಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry