ಸೋಮವಾರ, ಮೇ 23, 2022
24 °C

ಹಾಕಿ ಹೈದರಾಬಾದ್‌ಗೆ ಎಚ್‌ಐ ಸಹ ಸದಸ್ಯತ್ವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಹಾಕಿ ಇಂಡಿಯಾವು (ಎಚ್‌ಐ) ಹಾಕಿ ಹೈದರಾಬಾದ್ ಸಂಸ್ಥೆಗೆ ತನ್ನ ಸಹ ಸದಸ್ಯತ್ವ ಸ್ಥಾನ ನೀಡಿದೆ. ಈ ಮೂಲಕ ಹಾಕಿ ಇಂಡಿಯಾದ ಸಹ ಸದಸ್ಯರ ಸಂಖ್ಯೆ 15ಕ್ಕೆ ಏರಿದೆ. ಅಷ್ಟು ಮಾತ್ರವಲ್ಲದೆ. ಎಚ್‌ಐ ಒಟ್ಟು 28 ಸದಸ್ಯರನ್ನು ಹೊಂದಿದೆ.ಸಹ ಸದಸ್ಯನ ಸ್ಥಾನ ದೊರೆತಿರುವ ಕಾರಣ ಹಾಕಿ ಹೈದರಾಬಾದ್ ಇನ್ನು ಮುಂದೆ ಎಚ್‌ಐ ನಡೆಸುವ ಎಲ್ಲ ರಾಷ್ಟ್ರೀಯ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಳ್ಳಬಹುದು.`ಹಾಕಿ ಹೈದರಾಬಾದ್‌ನ ಪ್ರವೇಶದಿಂದಾಗಿ ಈ ಕ್ರೀಡೆಯ ಬೆಳವಣಿಗೆಗೆ ನೆರವಾಗಲಿದೆ. ಮಾತ್ರವಲ್ಲ, ಈ ಸಂಸ್ಥೆಯ ತಂಡವನ್ನು ಪ್ರತಿನಿಧಿಸುವ ಯುವ ಆಟಗಾರರಿಗೆ ತಮ್ಮ ಸಾಮರ್ಥ್ಯ ತೋರಿಸಲು ಅವಕಾಶ ಲಭಿಸಲಿದೆ' ಎಂದು ಎಚ್‌ಐ ಪ್ರಧಾನ ಕಾರ್ಯದರ್ಶಿ ನರೀಂದರ್ ಬಾತ್ರ ಹೇಳಿದ್ದಾರೆ.`ಹೈದರಾಬಾದ್ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಹಾಕಿ ಕ್ರೀಡೆಯ ಬೆಳವಣಿಗೆಗೆ ಹಾಕಿ ಇಂಡಿಯಾ ಪೂರ್ಣ ನೆರವು ನೀಡಲಿದೆ' ಎಂದು ಅವರು ನುಡಿದಿದ್ದಾರೆ.ಜಯೇಶ್ ರಂಜನ್ ಅವರು ಹಾಕಿ ಹೈದರಾಬಾದ್‌ನ ಅಧ್ಯಕ್ಷರಾಗಿದ್ದು, ಮೂರು ಬಾರಿಯ ಒಲಿಂಪಿಯನ್ ಎನ್. ಮುಖೇಶ್ ಕುಮಾರ್ ಕಾರ್ಯದರ್ಶಿಯಾಗಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.