ಸೋಮವಾರ, ಮೇ 16, 2022
30 °C

ಹಾಟ್ ಸ್ಪಾಟ್ ಬಳಕೆ ಇಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಭಾರತ ಹಾಗೂ ಇಂಗ್ಲೆಂಡ್ ತಂಡಗಳ ನಡುವೆ ಅಕ್ಟೋಬರ್ 14ರಿಂದ ಆರಂಭವಾಗಲಿರುವ ಏಕದಿನ ಕ್ರಿಕೆಟ್ ಸರಣಿಗೆ ವಿವಾದಾತ್ಮಕ `ಹಾಟ್ ಸ್ಪಾಟ್~ ತಂತ್ರಜ್ಞಾನ ಬಳಕೆ ಇಲ್ಲ ಎಂದು ಬಿಬಿಜಿ ಸ್ಪೋರ್ಟ್ಸ್ ಕಂಪೆನಿ ತಿಳಿಸಿದೆ.`ಭಾರತ ತಂಡ ಇತ್ತೀಚಿಗೆ ಇಂಗ್ಲೆಂಡ್ ಪ್ರವಾಸ ಕೈಗೊಂಡಾಗ ಈ ತಂತ್ರಜ್ಞಾನದ ಬಳಕೆ ಮಾಡಿಕೊಳ್ಳಲಾಗಿತ್ತು. ಇದರಿಂದ ಸಾಕಷ್ಟು ವಿವಾದ ಸೃಷ್ಟಿಯಾಗಿದ್ದವು. ಇದನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಟೀಕೆ ಮಾಡಿತ್ತು. ಆದ್ದರಿಂದ ಈ ಸಲದ ಸರಣಿಗೆ ಇದನ್ನು ಬಳಸದಿರಲು ನಿರ್ಧರಿಸಲಾಗಿದೆ~ ಎಂದು ಬಿಬಿಜಿ ಸ್ಪೋರ್ಟ್ಸ್ ಕಂಪೆನಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವಾರೆನ್ ಬರ‌್ರೆನ್ ತಿಳಿಸಿದ್ದಾರೆ.ಅಂಪೈರು ತೀರ್ಪು ಪರಿಶೀಲನಾ ಪದ್ಧತಿ (ಡಿಆರ್‌ಎಸ್) ಅಳವಡಿಸಿಕೊಳ್ಳಲು ಬಿಸಿಸಿಐ ಮೊದಲಿನಿಂದಲೂ ವಿರೋಧ ವ್ಯಕ್ತಪಡಿಸುತ್ತಿದೆ.ಇಂಗ್ಲೆಂಡ್ ಪ್ರವಾಸದ ವೇಳೆ ಕೆಲ ಫಲಿತಾಂಶಗಳು ತಿರುವು ಮುರುವು ಆಗಿದ್ದವು.

ಆದ್ದರಿಂದ ಬಿಸಿಸಿಐ ಈ ತಂತ್ರಜ್ಞಾನ ಬಳಕೆಗೆ ತೀವ್ರ ವಿರೋಧ ವ್ಯಕ್ತಪಡಿಸಿದೆ. ತಂತ್ರಜ್ಞಾನ ಬಳಸಲು ಕ್ರಿಕೆಟ್ ಮಂಡಳಿ ಪ್ರಾಮಾಣಿಕ ಸಹಕಾರ ನೀಡುತ್ತಿಲ್ಲ ಎನ್ನುವುದು ಸ್ಪೋರ್ಟ್ಸ್ ಕಂಪೆನಿಯ ಆರೋಪವಾಗಿದೆ.ತವರು ನೆಲದಲ್ಲಿ ನಡೆಯುವ ಕ್ರಿಕೆಟ್ ಸರಣಿಗೆ ಈ ತಂತ್ರಜ್ಞಾನ ಬಳಕೆ ಮಾಡಿಕೊಳ್ಳಲು ಬಿಸಿಸಿಐ ಹಾಗೂ ಬಿಬಿಜಿ ಸ್ಪೋರ್ಟ್ಸ್ ಕಂಪೆನಿ ನಡುವೆ ಈ ವರ್ಷ ಒಪ್ಪಂದ ನಡೆದಿತ್ತು.ಏನಿದು ಹಾಟ್‌ಸ್ಪಾಟ್: `ಇನ್‌ಫ್ರಾ-ರೆಡ್~ ಛಾಯಾಚಿತ್ರ ಬಳಸಿಕೊಂಡು ಮೂರನೇ ಅಂಪೈರ್ ತೀರ್ಪು ನೀಡಲು ಸಹಕಾರಿಯಾಗುವುದೇ `ಹಾಟ್ ಸ್ಪಾಟ್~. ಚೆಂಡು ಬ್ಯಾಟ್‌ಗೆ ಇಲ್ಲವೇ  ಪ್ಯಾಡ್ ಇವೆರಡರಲ್ಲಿ ಯಾವುದಕ್ಕೆ ತಗುಲಿದೆ ಎನ್ನುವುದನ್ನು ನಿಖರವಾಗಿ ತಿಳಿಯಲು ಈ ತಂತ್ರಜ್ಞಾನ ಬಳಸಿಕೊಳ್ಳಲಾಗುತ್ತದೆ. ಇದನ್ನು ಪಂದ್ಯದ ವಿಶ್ಲೇಷಣೆ ಮಾಡಲು ವಾಹಿನಿಗಳಲ್ಲಿ ಹೆಚ್ಚು ಬಳಕೆ ಮಾಡುತ್ತಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.