ಭಾನುವಾರ, ಮೇ 16, 2021
22 °C

ಹಾಡಹಗಲೇ ಚಿನ್ನದ ಸರ ದರೋಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಲ್ಲಹಳ್ಳಿ: ಹಾಡಹಗಲೇ ಮನೆಗೆ ನುಗ್ಗಿ ಮಹಿಳೆಯೊಬ್ಬರ ಕತ್ತಿನಲ್ಲಿದ್ದ ಚಿನ್ನದ ಸರವನ್ನು ಕಿತ್ತುಕೊಂಡು ಪರಾರಿಯಾಗಿರುವ ಘಟನೆ ಮಂಗಳವಾರ ಇಲ್ಲಿ ನಡೆದಿದೆ.ಇಲ್ಲಿನ ಸಂಗಂ ರಸ್ತೆ ನಿವಾಸಿ ಷಡಕ್ಷರಪ್ಪ ಎಂಬುವರ ಮನೆಗೆ ಮಧ್ಯಾಹ್ನ 1 ಗಂಟೆ ಸುಮಾರಿಗೆ ಅಪರಿಚಿತ ವ್ಯಕ್ತಿಯೊಬ್ಬ ಬಂದು ನಿಮ್ಮ ಪತಿ ಮನೆಗೆ ರಾಗಿ ತಲುಪಿಸಲು ಸೂಚಿಸಿದ್ದಾರೆ ಎಂದು ತಿಳಿಸಿದ್ದಾನೆ. ಆತನ ಮಾತು ನಂಬಿ ಬಾಗಿಲು ತೆರೆದ ಷಡಕ್ಷರಪ್ಪ ಪತ್ನಿ ಲಲಿತಮ್ಮ ಅವರಿಗೆ ಮಣ್ಣು ತುಂಬಿದ್ದ ಚೀಲವನ್ನೇ ರಾಗಿ ಚೀಲ ಎಂದು ನೀಡಿದ್ದಾನೆ. ಚೀಲವನ್ನು ತೆಗೆದುಕೊಂಡು ಹೋಗುವ ಸಮಯದಲ್ಲಿ ಬಲವಾಗಿ ಹಿಂದಿನಿಂದ ಹೊಡೆದು ಆಕೆ ಕತ್ತಿನಲ್ಲಿದ್ದ 70 ಗ್ರಾಂ ಚಿನ್ನದ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದಾನೆ.ಸರವನ್ನು ಕಿತ್ತುಕೊಂಡ ರಭಸಕ್ಕೆ ಲಲಿತಮ್ಮ ಅವರ ಕುತ್ತಿಗೆಗೆ ಗಾಯವಾಗಿದ್ದು, ಮೈಸೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಸ್ಥಳಕ್ಕೆ ಎಎಸ್‌ಪಿ ಆನಂದ್ ರೆಡ್ಡಿ, ಸಿಪಿಐ ಜಿ.ಎಸ್. ರಘು, ಪಿಎಸ್‌ಐ ಆರೋಗ್ಯಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಹುಲ್ಲಹಳ್ಳಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.