ಹಾಡಿನಿಂದಲೇ ಬದುಕು ಕಟ್ಟಿಕೊಂಡರು...

7

ಹಾಡಿನಿಂದಲೇ ಬದುಕು ಕಟ್ಟಿಕೊಂಡರು...

Published:
Updated:

ಶಾಲೆ ಬಾಗಿಲು ತುಳಿದಿಲ್ಲ. ಜ್ಞಾನ ಸಂಪಾದನೆಗಾಗಿ ಆಯ್ಕೆಮಾಡಿಕೊಂಡಿದ್ದು ಜನಪದ ಕ್ಷೇತ್ರ. ಭಜನೆ, ಸೋಬಾನೆ ಪದ, ಜನಪದ ಗೀತೆ, ಭಕ್ತಿಗೀತೆ ಮೊದಲಾದ ಹಾಡುಗಳನ್ನು ಬರೆದುಕೊಳ್ಳದೆ ಕರತಾಲಮಲಕ ಮಾಡಿಕೊಂಡಿರುವ ನೂಲೆನೂರು (ಕೊಟ್ಟಿಗೆ) ಗ್ರಾಮದ ಕದುರಮ್ಮ ಅಪ್ಪಟ ಗ್ರಾಮೀಣ ಪ್ರತಿಭೆ.ಹುಟ್ಟಿದ್ದು ಹೊಸದುರ್ಗ ತಾಲ್ಲೂಕು ಶ್ರೀರಾಂಪುರ ಗ್ರಾಮ. ಮದುವೆಯಾಗಿ ಬಂದಿದ್ದು ಹುಳಿಯಾರು ಹೋಬಳಿ ನೂಲೆನೂರು ಗ್ರಾಮಕ್ಕೆ. ಮದುವೆಯಾದ ಎರಡು ವರ್ಷದಲ್ಲಿ ಪತಿ ವಿಯೋಗ. ಗಂಡ ಹೊಸೂರಯ್ಯಗೆ ಅಂಗೈಯಗಲ ಜಮೀನಿಲ್ಲ. ಇಂ ಕಷ್ಟಕರ ಸಮಯದಲ್ಲಿ ಕೈಹಿಡಿದಿದ್ದು ತಾಯಿಯಿಂದ ಬಳುವಳಿಯಾಗಿ ಬಂದ ಸೋಬಾನೆ, ಭಜನೆ ಪದಗಳು. ಹಾಡುವುದರಿಂದಲೇ ಬದುಕು ಕಟ್ಟಿಕೊಂಡ ಕದುರಮ್ಮನಿಗೆ ಈಗ ಅದೇ ತಂದೆ, ತಾಯಿ, ಮಕ್ಕಳು ಎ್ಲ್ಲಲ ಆಗಿ ಹೋಗಿದೆ.`ತಾಯಿ ಶುಭ ಸಮಾರಂಭಗಳಲ್ಲಿ ಸೋಬಾನೆ ಪದ ಹಾಡುತ್ತಿದ್ದರು. ಅವರ ಜತೆಯಲ್ಲಿ ಹೋಗುವ ಅಭ್ಯಾಸವನ್ನು ತಾನು 5 ವರ್ಷದ ಮಗುವಾಗಿದ್ದಾಗಲೇ ರೂಢಿಸಿಕೊಂಡೆ. ಅಂದಿನ ದಿನಗಳಲ್ಲಿ ಗ್ರಾಮದಲ್ಲಿ ಆಡುತ್ತಿದ್ದ ರಾಮಾಯಣ, ಮಹಾಭಾರತದಂತಹ ಪೌರಾಣಿಕ ನಾಟಕಗಳು ಸಂಗೀತದ ಗೀಳಿನತ್ತ ಸೆಳೆದವು. ತನ್ನ ತಂದೆ ರಾಮನ ಪಾತ್ರ ಹಾಗೂ ದೊಡ್ಡಪ್ಪ ಆಂಜನೇಯನ ಪಾತ್ರ ಮಾಡುತ್ತಿದ್ದರು' ಎಂದು ನೆನಪಿಸಿಕೊಳ್ಳುತ್ತಾರೆ.ನಾಟಕದ ಹಾಡು ಹೇಳಿಸಿಕೊಂಡು ಕಲಿತು, ಯಾವುದೇ ಹಾಡು ಬರೆದುಕೊಳ್ಳದೆ ಈಗಲೂ ಮದುವೆ ಮತ್ತಿತರ ಸಮಾರಂಭಗಳಿಗೆ ತಕ್ಕಂತೆ ಸಾವಿರಾರು ಹಾಡುಗಳು ಇವರ ಕಂಠಸಿರಿಯಲ್ಲಿ ಹರಿದು ಬರುತ್ತವೆ. ಈಗಾಗಲೇ ರಾಜ್ಯದ ನಾನಾ ಕಡೆ ಭಜನಾ ಕಾರ್ಯಕ್ರಮ ನಡೆಸಿಕೊಟ್ಟಿದ್ದಾರೆ. ಅನೇಕ ಜಿಲ್ಲಾ ಕೇಂದ್ರಗಳಲ್ಲಿ ನಡೆದ ಜನಪದ ಕಾರ್ಯಕ್ರಮದಲ್ಲಿ ಹಾಡಿ ಸೈ ಎನಿಸಿಕೊಂಡಿದ್ದಾರೆ.ರಾಜ್ಯದ ಯಾವುದೇ ಭಾಗಗಳಿಂದ ಕರೆ ಬಂದರೂ ತಮಗೆ ಬೇಕಾದ ಸಹ ಗಾಯಕರು ಹಾಗೂ ಸಂಗೀತ ವಾದ್ಯ ನುಡಿಸುವವರನ್ನು ಕರೆದುಕೊಂಡು ಹೋಗಿ ಕಾರ್ಯಕ್ರಮ ನಡೆಸಿಕೊಡುತ್ತಾರೆ. ಹಲವು ಬಾರಿ ಕರೆದುಕೊಂಡು ಹೋದವರಿಗೆ ಕೈಯಿಂದ ಹಣ ನೀಡಿ ಕೈ ಸುಟ್ಟುಕೊಂಡ ಉದಾಹರಣೆಯೂ ಇದೆ ಎನ್ನುತ್ತಾರೆ.

ಚಿಕ್ಕನಾಯಕನಹಳ್ಳಿ ತಾಲ್ಲೂಕು ಆಡಳಿತ ಕನ್ನಡ ರಾಜ್ಯೋತ್ಸವದಲ್ಲಿ ಸನ್ಮಾನಿಸಿದೆ. ವಿವಿಧ ಜಿಲ್ಲೆಗಳ 25ಕ್ಕೂ ಹೆಚ್ಚು ಸಂಘ ಸಂಸ್ಥೆಗಳು ಅಭಿನಂದಿಸಿವೆ. ಈಚೆಗೆ ಗ್ರಾಮೀಣ ಪ್ರದೇಶಗಳಿಗಿಂತ ನಗರ ಪ್ರದೇಶಗಳಲ್ಲಿ ಭಜನೆ, ಸೋಬಾನೆ ಪದ ಯಶಸ್ವಿಯಾಗುತ್ತಿದ್ದು, ಕೇಳುವವರ ಸಂಖ್ಯೆ ಹೆಚ್ಚುತ್ತಿರುವುದು ಆರೋಗ್ಯಕರ ಬೆಳವಣಿಗೆ. ಇದು ಜನಪದಕ್ಕೆ ಎಂದಿಗೂ ಜೀವವಿದೆ ಎಂಬುದನ್ನು ಬಿಂಬಿಸುತ್ತದೆ ಎನ್ನುತ್ತಾರೆ ಕದುರಮ್ಮ. 68ರ ಇಳಿವಯಸ್ಸಿನಲ್ಲೂ ಜನಪದವನ್ನೇ ನಂಬಿ ಬದುಕುತ್ತ್ದ್ದಿದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry