ಹಾಡುಕೋಗಿಲೆ ಕಲರವ

7

ಹಾಡುಕೋಗಿಲೆ ಕಲರವ

Published:
Updated:

ಗಾಯನ ಗಂಗಾ ಸಂಸ್ಥೆಯು ರವೀಂದ್ರ ಕಲಾಕ್ಷೇತ್ರದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಹಾಡು ಕೋಗಿಲೆ ಗೀತೋತ್ಸವ ಕಾರ್ಯಕ್ರಮದಲ್ಲಿ ಸುಗಮ ಸಂಗೀತ ಸಂಯೋಜಕ ಹಾಗೂ ಗಾಯಕ ಗರ್ತಿಕೆರೆ ರಾಘಣ್ಣ ಅವರಿಗೆ `ಸ್ವರ ಸಾಮ್ರೋಟ್~ ಪ್ರಶಸ್ತಿ ಪ್ರದಾನ ಮಾಡಲಾಯಿತು.ಗಾಯನ ಕಾರ್ಯಕ್ರಮದಲ್ಲಿ ಯಶವಂತ ಹಳಿಬಂಡಿ, ಪುತ್ತೂರು ನರಸಿಂಹ ನಾಯಕ್, ಇಂದೂ ವಿಶ್ವನಾಥ್, ಡಾ. ರೋಹಿಣಿ ಮೋಹನ್, ಸುರೇಖಾ ಕೆ.ಎಸ್, ಡಾ. ಶಮಿತಾ ಮಲ್ನಾಡ್, ಮಾಲಿನಿ ಕೇಶವಪ್ರಸಾದ್, ಆನಂದ ಮಾದಲಗೆರೆ, ನರಹರಿ ದೀಕ್ಷಿತ್, ಗಣೇಶ ದೇಸಾಯಿ, ರಾಜೇಂದ್ರ ಬೆಂಡೆ, ಹರೀಶ್ ನರಸಿಂಹ, ಶ್ರೀದೇವಿ ಗರ್ತಿಕೆರೆ, ಚಾಂದಿನಿ ಗರ್ತಿಕೆರೆ ಪಾಲ್ಗೊಂಡಿದ್ದರು.ಜೊತೆಗೆ ಸಂಗೀತ ಗಂಗಾ, ಸವಿಗಾನ ಲಹರಿ ಸಂಗೀತ ಶಾಲೆ, ಸಪ್ತಸ್ವರ ಸಂಗೀತ ವಿದ್ಯಾಲಯ, ಸೃಜನ ಸಂಗೀತ ಶಾಲೆ. ರಂಗ ಸಂಸ್ಥಾನ. ಕಲಾಭಾರತಿ. ಹಾಗೂ ಗಾಯನ ಗಂಗಾ ಕಲಾವಿದರು ಭಾಗವಹಿಸಿ ಗಾಯನ ರಸಧಾರೆ ಹರಿಸಿದರು.ಕವಿ ಡಾ.ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟ, ಬಿ.ಕೆ. ಸುಮಿತ್ರಾ, ವಿಜಯ ಹಾವನೂರು, ಟಿ.ಎ. ನಾರಾಯಣಗೌಡ, ಡಾ.ಭೈರಮಂಗಲ ರಾಮೇಗೌಡ, ಗಾಯಕ ಅಪ್ಪಗೆರೆ ತಿಮ್ಮರಾಜು ಮತ್ತು ಸಂಸ್ಥೆ ಅಧ್ಯಕ್ಷ ಆನಂದ ಮಾದಲಗೆರೆ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry