ಬುಧವಾರ, ಮೇ 12, 2021
19 °C

ಹಾನಗಲ್ಲಮ್ಮ ರಥೋತ್ಸವ: ಅಪಾರ ಜನಸ್ತೋಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಮನಾಥಪುರ: ದೊಡ್ಡಮಗ್ಗೆ ಹೋಬಳಿ ಹಾನಗಲ್ಲು ಗ್ರಾಮದ ಗ್ರಾಮದೇವತೆ ಹಾನಗಲ್ಲಮ್ಮ ದಿವ್ಯ ರಥೋತ್ಸವ ಶನಿವಾರ ವೈಭವದಿಂದ ನೆರವೇರಿತು. ಸುತ್ತಮುತ್ತಲ ಹಳ್ಳಿಗಳಿಂದ ಆಗಮಿಸಿದ್ದ ಸಹಸ್ರಾರು ಭಕ್ತರು ರಥೋ ತ್ಸವದ ಸಂಭ್ರಮಕ್ಕೆ ಸಾಕ್ಷಿಯಾದರು.ಹಾನಗಲ್ಲು ಜಾತ್ರೆ ಎಂದೇ ಪ್ರಸಿದ್ದಿ ಪಡೆದ ಗ್ರಾಮದೇವತೆ ಮಹೋತ್ಸವ ಮೂರು ದಿನಗಳ ಕಾಲ ನಡೆಯಲಿದೆ. ಶುಕ್ರವಾರ ರಾತ್ರಿ ಸಿಡಿ ಮಹೋತ್ಸವ ಆಚರಿಸಲಾಯಿತು.ಭಾನುವಾರ ಚಿಕ್ಕಮ್ಮದೇವರ ಉತ್ಸವ ಜರುಗಲಿದ್ದು ಗ್ರಾಮದಲ್ಲಿ ಸಂಭ್ರಮದ ವಾತಾವರಣ ನಿರ್ಮಾಣವಾಗಿದೆ.

ಶನಿವಾರ ಬೆಳಿಗ್ಗೆ ದೇವಸ್ಥಾನದಲ್ಲಿ ಅರ್ಚಕರು ಹಲವು ಧಾರ್ಮಿಕ ವಿಧಿ- ವಿಧಾನಗಳನ್ನು ಪೂರೈಸಿದರು. ಬಳಿಕ ದೇವರ ಉತ್ಸವ ಮೂರ್ತಿಯನ್ನು ಕೆರೆ ಬಳಿ ಕೊಂಡೊಯ್ದು ಸಂಪ್ರದಾಯದಂತೆ ಹಬ್ಬಮ್ಮ ದೇವತೆ ಕಳಸವಿಟ್ಟು ಪೂಜಾ ಕೈಂಕರ್ಯಗಳನ್ನು ಮುಗಿಸಿ ಮಂಗಳ ವಾದ್ಯಗಳೊಂದಿಗೆ ಕರೆತರಲಾಯಿತು.ನಂತರ ಹೆಣ್ಣು ಮಕ್ಕಳ ತಲೆ ಮೇಲೆ ಕಳಸ ಹೊರಿಸಿ ದೇವಸ್ಥಾನದ ಸುತ್ತ ಉತ್ಸವ ಮೂರ್ತಿಯನ್ನು ಮೂರು ಸುತ್ತ ಪ್ರದಕ್ಷಿಣೆ ಹಾಕಿ ಗಣಪತಿ ದೇವಸ್ಥಾನ ಮಂಟಪದಲ್ಲಿ ಪೂಜಿಸಲಾಯಿತು.ಬಳಿಕ ಬಗೆ ಬಗೆ ರೀತಿಯಲ್ಲಿ ಬಣ್ಣದ ಬಾವುಗಳನ್ನು ಕಟ್ಟಿ ಸಿಂಗರಿಸಿದ್ದ ರಥದ ಮೇಲೆ ಉತ್ಸವ ಮೂರ್ತಿಯನ್ನು ಪ್ರತಿಷ್ಠಾಪಿಸಿ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ಸೂಸುತ್ರವಾಗಿ ಸಾಗಿದ ತೇರು ದೇವಸ್ಥಾನದ ಮುಂಭಾಗ ಬಂದು ನಿಂತಿತು. ನೆರೆದಿದ್ದ ಭಕ್ತರು ಹರ್ಷೊ ೀದ್ಗಾರದ ನಡುವೆ ತೇರಿನತ್ತ ಹಣ್ಣು- ದವನ ಎಸೆದು ಭಕ್ತಿ ಸಮರ್ಪಿಸಿದರು.ಸಂಜೆ ವೇಳೆಗೆ ತೇರನ್ನು ಪುನಃ ಸ್ವಸ್ಥಾನಕ್ಕೆ ಎಳೆದು ತಂದು ನಿಲ್ಲಿಸಲಾಯಿತು. ಶನೇಶ್ವರಸ್ವಾಮಿ ಉತ್ಸವ ಮೂರ್ತಿ ಹೊತ್ತ ಚಿಕ್ಕ ತೇರು ಅದನ್ನು ಹಿಂಬಾಲಿಸಿತು.ಸಿಡಿ ಮಹೋತ್ಸವ: ರಥೋತ್ಸವ ಹಿನ್ನೆಲೆಯಲ್ಲಿ ಭಕ್ತರು ಶುಕ್ರವಾರ ರಾತ್ರಿ ಹಾನಗಲ್ಲಮ್ಮನ ಸಿಡಿ ಮಹೋತ್ಸವ ಆಚರಿಸಿ ಭಕ್ತಿ ರಸದಲ್ಲಿ ಮಿಂದೆದ್ದರು.ಭಾನುವಾರ ಗ್ರಾಮದ ದಲಿತ ಕುಟುಂಬದವರು ಚಿಕ್ಕಮ್ಮ ದೇವರ ಉತ್ಸವ ನಡೆಸಿ ಹಲವು ಪೂಜಾ ವಿಧಾನ ಸಲ್ಲಿಸಲಿದ್ದಾರೆ.ಇದರೊಂದಿಗೆ ಹಾನಗಲ್ಲಮ ಗ್ರಾಮ ದೇವತೆಯ ಜಾತ್ರಾ ಮಹೋತ್ಸವಕ್ಕೆ ಸಂಭ್ರಮದ ತೆರೆ ಬೀಳಲಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.