ಹಾಯ್ಕುಗಳು

7
ಕವಿತೆ

ಹಾಯ್ಕುಗಳು

Published:
Updated:

ಗುರುಕೃಪೆ 

ಮಹಾಭಾರತದ ಬಾಲಿಕೆಗೆ

ವಂಶಾಭಿವೃದ್ಧಿಯ ಯೋಗ

*

ಗುಡಿಸಿಲ ಗರ್ಭದಲ್ಲಿ ಜೀವಂತಿಕೆ

ಗರ್ಭಗುಡಿಯ ಜಿಡ್ಡುಗಲ್ಲುಗಳಿಗೆ

ಅಸೂಯೆ

*

ತುಸು ಮಾತಾಡಲಿಕ್ಕಿದೆ

ದೇವರೇ ಎದುರಿಗೆ ಬಾ

ಮಚ್ಚನ್ನು ಕೆಳಗೆಸೆದಿದ್ದೇನೆ

*

ಹೊಸಬೆಳಕು ಹೊಸ ಜಮಾನ

ಉರಿಯುತ್ತಿವೆ

ದೀಪದ ಬದಲು ಮನೆಗಳು

*

ಪುಟಕ್ಕಿಟ್ಟ ಲೋಹ ಪರಿಶುದ್ಧಗೊಂಡಿದೆ

ಬಿಸಿ ಬೂದಿಯಲಿ

ಸೀತೆಯ ಅಸ್ಥಿ ಚೆಲ್ಲಾಪಿಲ್ಲಿ

*

ಮುಕ್ಕೋಟಿ ಕುಲ ದೈವಗಳ ಸೃಷ್ಟಿಸಿದ

ಮನುಜ

ಸೈತಾನನ ಅಭಿನಂದನೆ

*

ದಕ್ಕದ ಚನ್ನ ಚೆಲುವ 

ಅಕ್ಕನಿಗೆ ದುಃಖದೊಡನೆ ಸಖ್ಯ:

ವಚನಾಮೃತದ ಶಿಶು ಜನನ

*

ಗೋಪೂಜೆಯ ಸಂಭ್ರಮ

ಆಕಳಚಿತ್ತ

ಗರಿಕೆ ಹುಲ್ಲಿನತ್ತ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry