ಹಾರಕೂಡ: ಸಂಭ್ರಮದ ರಥೋತ್ಸವ

7

ಹಾರಕೂಡ: ಸಂಭ್ರಮದ ರಥೋತ್ಸವ

Published:
Updated:

ಬಸವಕಲ್ಯಾಣ: ತಾಲ್ಲೂಕಿನ ಹಾರ­ಕೂಡ­ದ ಹಿರೇಮಠ ಸಂಸ್ಥಾನದ ಪ್ರಾಂಗಣದಲ್ಲಿ ಸೋಮವಾರ ಚನ್ನಬಸವ ಶಿವಯೋಗಿಗಳ 62 ನೇ ಜಾತ್ರಾ ಮಹೋತ್ಸವ ಅಂಗವಾಗಿ ರಥೋತ್ಸವ ಸಂಭ್ರಮದಿಂದ ನಡೆಯಿತು.ಮಧ್ಯಾಹ್ನ ವಾದ್ಯಗಳೊಂದಿಗೆ ಗ್ರಾಮದಲ್ಲಿ ಪಲ್ಲಕ್ಕಿ ಮತ್ತು ನಂದಿಕೋಲ ಮೆರವಣಿಗೆ ನಡೆಯಿತು. ಸಂಜೆ ಮಠಾಧೀಶ ಚನ್ನವೀರ ಶಿವಾಚಾರ್ಯ  ವಿಶೇಷ ಪೂಜೆ ಸಲ್ಲಿಸಿ ರಥೋತ್ಸವಕ್ಕೆ ಚಾಲನೆ ನೀಡಿದರು.ನಂತರ ಶಿವಮೊಗ್ಗ ಬೆಕ್ಕಿನಕಲ್ಮಠದ ಡಾ.ಮಲ್ಲಿಕಾರ್ಜುನ ಮುರುಘ­ರಾಜೇಂದ್ರ ಸ್ವಾಮೀಜಿ ಸಾನಿಧ್ಯದಲ್ಲಿ ಶಿವಾನುಭವ ಚಿಂತನಗೋಷ್ಠಿ ನಡೆಯಿತು.

ಸಂಸದ ಎನ್.ಧರ್ಮಸಿಂಗ್, ಮಾಜಿ ಸಚಿವ ರೇವು ನಾಯಕ ಬೆಳಮಗಿ, ಶಾಸಕ ಮಲ್ಲಿಕಾರ್ಜುನ ಖೂಬಾ, ಮಾಜಿ ಶಾಸಕ ಬಸವರಾಜ ಪಾಟೀಲ ಅಟ್ಟೂರ್, ಮುಖಂಡ ಬಾಬು ಹೊನ್ನಾನಾಯಕ್, ಬಸವಕಲ್ಯಾಣದ ಬಾಗ ಸವಾರ ದರ್ಗಾ ಪ್ರಮುಖ ಜಿಯಾ ಉಲ ಹಸನ್ ಜಾಗೀರದಾರ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಸಂಜೀವ ಕಾಳೇಕರ, ಚಂದ್ರಶೇಖರ ಬಿರಾದಾರ ಇದ್ದರು. ವಿವಿಧೆಡೆಯ  ಭಕ್ತರು ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry