ಹಾರಾಡಿದ ಧ್ವಜ, ಮೊಳಗಿದ ಜೈಹಿಂದ್...

ಬುಧವಾರ, ಮೇ 22, 2019
24 °C

ಹಾರಾಡಿದ ಧ್ವಜ, ಮೊಳಗಿದ ಜೈಹಿಂದ್...

Published:
Updated:

ಚಿತ್ರದುರ್ಗ: ಏಕತೆ, ಸಮಗ್ರತೆ, ಭಾವೈಕ್ಯತೆ, ದೇಶಪ್ರೇಮ, ತ್ಯಾಗ, ಬಲಿದಾನ ಬಿಂಬಿಸುವ ನೃತ್ಯಗಳು ರಾಷ್ಟ್ರಪ್ರಜ್ಞೆ ಮೂಡಿಸುವ ಪ್ರಯತ್ನಕ್ಕೆ ಸ್ವಾತಂತ್ರ್ಯ ದಿನಾಚರಣೆ ಸಾಕ್ಷಿಯಾಯಿತು.

ನಗರದ ಸರ್ಕಾರಿ ವಿಜ್ಞಾನ ಕಾಲೇಜಿನ ಮೈದಾನದಲ್ಲಿ ಜಿಲ್ಲಾಡಳಿತ ವತಿಯಿಂದ ನಡೆದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ವೈವಿಧ್ಯಮ ವರ್ಣರಂಜಿತ ನೃತ್ಯಗಳು ಸಂಭ್ರಮ, ಉಲ್ಲಾಸ ಮೂಡಿಸಿದವು. ರಾಷ್ಟ್ರಭಕ್ತಿ, ಶಾಂತಿ-ಸೌಹಾರ್ದತೆ, ಸಹಬಾಳ್ವೆಯ ಸಂದೇಶವನ್ನು ವಿದ್ಯಾರ್ಥಿಗಳು ನೀಡಿದರು.

ವಿದ್ಯಾರ್ಥಿಗಳು ಹಾಡಿಗೆ ಹೆಜ್ಜೆ ಹಾಕಿ ಕುಣಿದು ಕುಪ್ಪಳಿಸಿದರು. ನಗರದ ವಿವಿಧ ಶಾಲೆಯ ವಿದ್ಯಾರ್ಥಿಗಳು ನೃತ್ಯ ಪ್ರದರ್ಶಿಸಿ ಗಮನಸೆಳೆದರು. ಇತ್ತೀಚಿನ ಒಲಿಂಪಿಕ್ ಕ್ರೀಡಾಕೂಟದಲ್ಲಿ ಭಾರತೀಯರ ಸಾಧನೆಯನ್ನು ಸಹ ವಿದ್ಯಾರ್ಥಿಗಳು ಬಿಂಬಿಸಿದರು.

ಸೆಂಟ್ ಮೇರಿಸ್ ಕಾನ್ವೆಂಟ್ ಶಾಲೆಯ 500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಎಚ್.ಎಸ್. ವೆಂಕಟೇಶಮೂರ್ತಿ ಅವರ ರಚಿಸಿದ ಹಾಡಿಗೆ ಪ್ರದರ್ಶಿಸಿದ ನೃತ್ಯ ಮನಮೋಹಕವಾಗಿತ್ತು. ಪಾರ್ಶ್ವನಾಥ್ ಶಾಲೆ ವಿದ್ಯಾರ್ಥಿಗಳು `ಮೇರಾ ಭಾರತ್ ಮಹಾನ್~ ಶೀರ್ಷಿಕೆಯೊಂದಿಗೆ ನೃತ್ಯ ಪ್ರದರ್ಶಿಸಿ ಗಮನಸೆಳೆದರು. ಒಲಿಂಪಿಕ್ ಕ್ರೀಡಾಕೂಟದಲ್ಲಿನ ಪದಕಗಳಿಸಿದ ಭಾರತೀಯರಿಗೆ ವಿದ್ಯಾರ್ಥಿಗಳು ಅಭಿನಂದನೆ ಸಲ್ಲಿಸುವ ಫಲಕಗಳನ್ನು ಪ್ರದರ್ಶಿಸಿದರು.

ನಗರದ ಬಾಲಕಿಯರ ಜ್ಯೂನಿಯರ್ ಕಾಲೇಜಿನ ವಿದ್ಯಾರ್ಥಿಗಳು ವಂದೇ ಮಾತರಂ ನೃತ್ಯ ಪ್ರದರ್ಶಿಸಿದರು. ಡಾನ್‌ಬಾಸ್ಕೋ ಶಾಲೆ ವಿದ್ಯಾರ್ಥಿಗಳು ತ್ರಿವರ್ಣ ಧ್ವಜದೊಂದಿಗೆ ಪ್ರದರ್ಶಿಸಿದ ನೃತ್ಯ ಗಮನಸೆಳೆಯಿತು. ಎಸ್‌ಜೆಎಂ ಇಂಗ್ಲಿಷ್ ಮಾಧ್ಯಮ ಶಾಲೆ ವಿದ್ಯಾರ್ಥಿಗಳು ಭ್ರಷ್ಟಾಚಾರ ತೊಲಗಿಸೋಣ ಎನ್ನುವ ಅಣ್ಣಾಹಜಾರೆಯ ಹೋರಾಟದ ಪ್ರದರ್ಶನ ಹಾಗೂ ಮಹಾತ್ಮ ಗಾಂಧೀಜಿಯ `ಬ್ರಿಟಿಷರೇ ಭಾರತ ಬಿಟ್ಟು ತೊಲಗಿ~ ಹೋರಾಟವನ್ನು ಬಿಂಬಿಸಿ ಸಭಿಕರ ಗಮನಸೆಳೆಯಲ್ಲಿ ಯಶಸ್ವಿಯಾದರು.

ಸನ್ಮಾನ: ಕಾರ್ಯಕ್ರಮದಲ್ಲಿ ಕಳೆದ ಜನವರಿಯಲ್ಲಿ ದೆಹಲಿಯಲ್ಲಿ ನಡೆದ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಎನ್‌ಸಿಸಿ ವಿಭಾಗದಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ ಎಸ್. ಮೋನಿಷಾ ಅವರನ್ನು ಸಚಿವ ಬಿ.ಜೆ. ಪುಟ್ಟಸ್ವಾಮಿ ಸನ್ಮಾನಿಸಿದರು.

ಶಿವಮೊಗ್ಗ ಸಹಕಾರ ಹಾಲು ಒಕ್ಕೂಟದ ವತಿಯಿಂದ ಎಸ್ಸೆಸ್ಸೆಲ್ಸಿ ಮತ್ತು ಪಿಯು ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳನ್ನು ಸಚಿವರು ಸನ್ಮಾನಿಸಿದರು. ಎಸ್ಸೆಸ್ಸೆಲ್ಸಿಯಲ್ಲಿ ಹೆಚ್ಚು ಅಂಕಗಳಿಸಿದ ಎಂ.ಆರ್. ಅಮೃತಲಕ್ಷ್ಮಿ, ಆರ್. ಮೇಘನಾ, ಎನ್. ಭುವನ್ ಹಾಗೂ ಪಿಯು ಪರೀಕ್ಷೆಯಲ್ಲಿ ಹೆಚ್ಚು ಅಂಕಗಳಿಸಿದ ಎ.ಎಂ. ಅಕ್ಷಯಕುಮಾರ್, ಐಶ್ವರ್ಯ ಡಿ. ಜೈನ್, ವಿ.ಎಂ. ವೀರಭದ್ರಾಚಾರ್ ಸನ್ಮಾನಿತರಾದ ವಿದ್ಯಾರ್ಥಿಗಳು.

ನಂತರ ಸಚಿವರು ನೆಹರು ಯುವ ಕೇಂದ್ರದ ವತಿಯಿಂದ ಆರಂಭಿಸಲಾದ ` ಭೂಮಿ ಹಬ್ಬ~ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಶಾಸಕ ಎಸ್.ಕೆ. ಬಸವರಾಜನ್, ಜಿ.ಪಂ. ಅಧ್ಯಕ್ಷ ಟಿ. ರವಿಕುಮಾರ್, ಸಂಸತ್ ಸದಸ್ಯ ಜನಾರ್ದನಸ್ವಾಮಿ,  ವಿಧಾನಪರಿಷತ್ ಸದಸ್ಯ ಜಿ.ಎಚ್. ತಿಪ್ಪಾರೆಡ್ಡಿ, ನಗರಸಭೆ ಅಧ್ಯಕ್ಷೆ ಸುನೀತಾ ಮಲ್ಲಿಕಾರ್ಜುನ್, ಜಿಲ್ಲಾ ಸ್ವಾತಂತ್ರ್ಯ ಹೋರಾಟಗಾರರ ಸಂಘದ ಅಧ್ಯಕ್ಷ ಡಿ.ಎಸ್. ಚಿದಾನಂದಪ್ಪ, ಜಿಲ್ಲಾಧಿಕಾರಿ ವಿಪುಲ್ ಬನ್ಸಲ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎನ್. ನಾಗರಾಜ್, ಜಿ.ಪಂ. ಸಿಇಒ ಪಿ.ಎ. ಗೋಪಾಲ್ ಹಾಜರಿದ್ದರು.

ಪ್ರಗತಿಯ ವೇಗ ಕಡಿಮೆ: ಬೇಸರ

ಹಿರಿಯೂರು:  ದೇಶ ಪ್ರಗತಿ ಪಥದಲ್ಲಿದೆ. ಆದರೆ ಪ್ರಗತಿಯ ವೇಗ ಕಡಿಮೆಯಾಗಿದೆ ಎಂದು ನಗರದ ಮೈದಾನದಲ್ಲಿ ಸ್ವಾತಂತ್ರ್ಯೋತ್ಸವ ಸಮಾರಂಭದ ಅಧ್ಯಕ್ಷೀಯ ಭಾಷಣದಲ್ಲಿ ಶಾಸಕ ಡಿ. ಸುಧಾಕರ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಹಿಂದಿನ ಮೂರು ವರ್ಷಗಳಿಂದ ತಾಲ್ಲೂಕಿನಲ್ಲಿ ಬರಗಾಲ ಆವರಿಸಿದೆ. ರೈತರು ಸಂಕಷ್ಟದಲ್ಲಿದ್ದಾರೆ. ರೈತರ ಸಾಲ ಮನ್ನಾದ ಪ್ರಮಾಣವನ್ನು ಹೆಚ್ಚಿಸಬೇಕು. ಗೋಶಾಲೆಗಳನ್ನು ಹೆಚ್ಚು ತೆರೆಯಬೇಕು. ಜನ-ಜಾನುವಾರುಗಳ ರಕ್ಷಣೆಗೆ ಸರ್ಕಾರ ಮುಂದಾಗಬೇಕು. ಜನಪ್ರತಿನಿಧಿಗಳು, ಅಧಿಕಾರಿಗಳು ಬರ ಪರಿಸ್ಥಿತಿ ಎದುರಿಸಲು ಸಮರ ಸನ್ನದ್ಧರಾಗಬೇಕು ಎಂದು ಅವರು ಕರೆ ನೀಡಿದರು.

ತಹಶೀಲ್ದಾರ್ ತಿಪ್ಪೇಸ್ವಾಮಿ ಮಾತನಾಡಿದರು. ಪುರಸಭಾಧ್ಯಕ್ಷೆ ಎಸ್. ಮಂಜುಳಾ, ಗಿರಿಜಮ್ಮ ತಿಪ್ಪೀರಯ್ಯ, ಕೆ. ದ್ಯಾಮಣ್ಣ, ಕರಿಯಮ್ಮ ಶಿವಣ್ಣ, ಆರ್. ಹೇಮಂತಕುಮಾರ್, ಜ್ಯೋತಿಲಕ್ಷ್ಮಿ ಗೋಪಿಯಾದವ್, ಡಾ.ಸುಜಾತಾ, ಎ. ಮಂಜುನಾಥ್, ಈ. ಮಂಜುನಾಥ್, ಡಿ. ಗಂಗಾಧರ್, ಎಚ್. ರಾಜಪ್ಪ, ಟಿ. ಚಂದ್ರಶೇಖರ್, ಪಿ.ಆರ್. ವಿಶ್ವನಾಥಯ್ಯ, ಕುಮಾರಸ್ವಾಮಿ, ವಿಜಯಲಕ್ಷ್ಮಿ, ಫೈರೋಜಖಾನುಂ, ಡಾ.ಶೇಖರ್, ಬಿ.ಕೆ. ತಿಪ್ಪೇಸ್ವಾಮಿ, ಟಿ. ರಂಗನಾಥ್, ಜಿ.ಆರ್. ರಮೇಶ್, ರೋಷನ್ ಜಮೀರ್, ಪಿ. ರಾಮಯ್ಯ ಉಪಸ್ಥಿತರಿದ್ದರು.

ಮಸ್ಕಲ್‌ನಲ್ಲಿ ಮಧ್ಯರಾತ್ರಿ ಧ್ವಜಾರೋಹಣ: ತಾಲ್ಲೂಕಿನ ಮಸ್ಕಲ್ ಗ್ರಾಮದಲ್ಲಿ ಮಂಗಳವಾರ ರಾತ್ರಿ 12 ಗಂಟೆಗೆ ಗ್ರಾಮದ ಹಿರಿಯ ಬಿ. ಕುಂಟಯ್ಯ ಧ್ವಜಾರೋಹಣ ನೆರವೇರಿಸಿದರು. ಮಾಜಿ ಶಾಸಕ ಆರ್. ರಾಮಯ್ಯ, ಹಲಗಲದ್ದಿ ತಿಪ್ಪೇಸ್ವಾಮಿ, ಕೆ. ಮುದ್ದಲಿಂಗಪ್ಪ, ಎ. ಕೃಷ್ಣಸ್ವಾಮಿ, ಕೆ. ರಾಜಪ್ಪ, ಎ. ಹೊರಕೇರಪ್ಪ, ಎಚ್. ರಂಗಸ್ವಾಮಿ, ತ್ರಿವೇಣಿ, ಲಂಬೋದರ ಹಾಜರಿದ್ದರು.

ಪುರಸಭೆ: ಅಧ್ಯಕ್ಷೆ ಮಂಜುಳಾ ವೆಂಕಟೇಶ್ ಧ್ವಜಾರೋಹಣ ನೆರವೇರಿಸಿದರು. ಮುಖ್ಯಾಧಿಕಾರಿ ಚಂದ್ರಶೇಖರಪ್ಪ, ಬಿ.ಕೆ. ಕರಿಯಪ್ಪ, ಮಂಜುನಾಥ್, ಜಿ. ಧನಂಜಯಕುಮಾರ್, ಜಬೀವುಲ್ಲಾ, ದಲೀಚಂದ್, ಎಂ. ಲಾಸರ್, ಕೆ. ಗೋಪಿನಾಥ್, ಲಲಿತಮ್ಮ, ಟಿ. ಚಂದ್ರಶೇಖರ್, ಸಬೀಹಬೇಗಂ, ವಿಶ್ವನಾಥಯ್ಯ, ಕುಮಾರಸ್ವಾಮಿ ಹಾಜರಿದ್ದರು.

ಪಟ್ಟಣದ ಗಿರೀಶ ವಿದ್ಯಾಸಂಸ್ಥೆ: ಅಸಂಶನ್ ಶಾಲೆ, ಸರ್ಕಾರಿ ಪಿಯು ಕಾಲೇಜು, ಎಲ್‌ಐಸಿ, ನೇತಾಜಿ ಸುಭಾಸ್ ಚಂದ್ರಬೋಸ್ ಸಂಘ, ವಾಣಿ ವಿಲಾಸ ವಿದ್ಯಾ ಸಂಸ್ಥೆ, ಅರ್ಬನ್ ಸಹಕಾರಿ ಬ್ಯಾಂಕ್, ರಂಗನಾಥ ಶಿಕ್ಷಕರ ತರಬೇತಿ ಸಂಸ್ಥೆ, ಕಲ್ಲಹಟ್ಟಿ, ಐಮಂಗಲ ಪ್ರಾಥಮಿಕ ಶಾಲೆ, ಪಿ.ಎಲ್.ಡಿ. ಬ್ಯಾಂಕ್, ದಿಂಡಾವರ ಗ್ರಾಮದಶಾಲೆ, ವಂದೇಮಾತರಂ ಜಾಗೃತಿ ವೇದಿಕೆ, ವಾಣಿ ಸಕ್ಕರೆ ಸರ್ಕಾರಿ ಪ್ರಥಮದರ್ಜೆ ಕಾಲೇಜು, ಸಂತ ಅನ್ನಮ್ಮ ಪ್ರೌಢಶಾಲೆ, ಯಾಜ್ಞವಲ್ಕ್ಯ ಶಾಲೆ, ವಿಧ ರಾಜಕೀಯ ಪಕ್ಷಗಳ ಕಚೇರಿಗಳಲ್ಲಿ ಸ್ವಾತಂತ್ರ್ಯೋತ್ಸವ ಆಚರಿಸಲಾಯಿತು.

ಹೋರಾಟದ ಅರಿವು ಅಗತ್ಯ

ಚಳ್ಳಕೆರೆ: ಭ್ರಷ್ಟಾಚಾರ, ಅಪ್ರಾಮಾಣಿಕತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮಕ್ಕಳಿಗೆ ಶಿಕ್ಷಕರು ಸೂಕ್ತ ಮಾರ್ಗದರ್ಶನ ಮಾಡುವ ಅಗತ್ಯ ಇದೆ ಎಂದು ತಹಶೀಲ್ದಾರ್ ಡಿ.ಕೆ. ರಾಮಚಂದ್ರಪ್ಪ ಅಭಿಪ್ರಾಯಪಟ್ಟರು.

ಪಟ್ಟಣದ ಬಿ.ಎಂ. ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.

ಭಾರತೀಯರನ್ನು ವಿಮುಕ್ತಿಗೊಳಿಸಲು ಹಿರಿಯರು ನಡೆಸಿದ ಅಹಿಂಸಾತ್ಮಕ ಸಂಘಟಿತ ಹೋರಾಟ ಅನೇಕರನ್ನು ಬಲಿ ತೆಗೆದುಕೊಂಡಿದೆ.  ಹಿರಿಯರ ತ್ಯಾಗ, ಬಲಿದಾನಗಳನ್ನು ನೆನೆಯುವ ಮೂಲಕ ಸ್ವಾತಂತ್ರ್ಯದ ಹೋರಾಟದ ಐತಿಹಾಸಿಕ ಸಂದರ್ಭಗಳನ್ನು ತಿಳಿದುಕೊಳ್ಳಬೇಕು ಎಂದರು.

ಶಾಸಕ ತಿಪ್ಪೇಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಡಾ.ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮದ ಮೆಟ್ರೋ ಕ್ರೆಡಿಟ್ ಯೋಜನೆ ಅಡಿಯಲ್ಲಿ ತಾಲ್ಲೂಕಿನ ಸಿದ್ಧಾಪುರ ಗ್ರಾಮದ ಶ್ರೀಗುರು ಮಹಿಳಾ ಸ್ವ-ಸಹಾಯ ಸಂಘದ ಸದಸ್ಯರಿಗೆ 1.40ಲಕ್ಷ ಮೌಲ್ಯದ ಚೆಕ್‌ನ್ನು ಶಾಸಕರು  ವಿತರಿಸಿದರು.

ಸ್ವಾತಂತ್ರ್ಯ ಹೋರಾಟಗಾರರಾದ ದೊಡ್ಡೇರಿಯ ಶರಣಬಸಪ್ಪ, ಚಿಕ್ಕಮಧುರೆ ತಿಮ್ಮಾರೆಡ್ಡಿ, ಪರಶುರಾಂಪುರದ ಬಿ.ಎಂ. ಹನುಮಂತಪ್ಪ ಹಾಗೂ ಈಚೆಗೆ ಮುಖ್ಯಮಂತ್ರಿ ಪದಕ ಪಡೆದ ಡಿವೈಎಸ್‌ಪಿ ಹನುಮಂತರಾಯ, ಅಗ್ನಿಶಾಮಕ ದಳದ ಪ್ರಮುಖ ಸುಭಾನ್ ಸಾಬ್ ಅವರನ್ನು ಸನ್ಮಾನಿಸಲಾಯಿತು.

ಪುರಸಭೆ ಅಧ್ಯಕ್ಷೆ ಪಿ. ಶಂಷಾದ್, ಉಪಾಧ್ಯಕ್ಷೆ ಶೋಭಾ, ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಜಯಲಕ್ಷ್ಮೀ, ಉಪಾಧ್ಯಕ್ಷ ಜೆ. ತಿಪ್ಪೇಶ್‌ಕುಮಾರ್, ಸದಸ್ಯ ವೆುಸೂರ್ ಪಾಲಯ್ಯ, ಎಪಿಎಂಸಿ ಅಧ್ಯಕ್ಷ ವರವು ಬೊಮ್ಮಣ್ಣ, ಮಾಜಿ ಅಧ್ಯಕ್ಷ ಜಯಣ್ಣ, ಪುರಸಭೆ ಸದಸ್ಯರಾದ ಚೇತನ್‌ಕುಮಾರ್, ಡಿ.ಎಂ. ತಿಪ್ಪೇಸ್ವಾಮಿ, ಎಪಿಎಂಸಿ ಸದಸ್ಯ ಬಿ.ವಿ. ಸಿರಿಯಣ್ಣ, ತಾಲ್ಲೂಕು ಆರೋಗ್ಯಾಧಿಕಾರಿ  ಡಾ.ಸಿ.ಎಲ್. ಫಾಲಾಕ್ಷ, ಬಿಇಒ ಡಿ.ಎ. ತಿಮ್ಮಣ್ಣ, ಡಿವೈಎಸ್‌ಪಿ ಹನುಮಂತರಾಯ, ಅರಣ್ಯ ಇಲಾಖೆ ವಲಯ ಸಂರಕ್ಷಣಾಧಿಕಾರಿ ಎಸ್. ಸುರೇಶ್, ಲೋಕೋಪಯೋಗಿ ಎಂಜಿನಿಯರ್ ಬಿ.ಬಿ. ರಾಮಚಂದ್ರಪ್ಪ, ಪ್ರೇಮಾ, ಪುರಸಭೆ ಮುಖ್ಯಾಧಿಕಾರಿ ಬಸವರಾಜ್, ಕೃಷಿ ಅಧಿಕಾರಿ ಡಾ. ಶಂಕರನಾಯ್ಕ, ಎಂಜಿನಿಯರ್ ಈಶ್ವರಯ್ಯ, ಪ್ರಭಾರ ಇಒ ಉಮಾಪತಿ ಇದ್ದರು.

ಸಂಭ್ರಮದ ಆಚರಣೆ

ಭರಮಸಾಗರ:  ಇಲ್ಲಿನ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಅಧ್ಯಕ್ಷೆ ಸೌಭಾಗ್ಯಮ್ಮ ಧ್ವಜಾರೋಹಣ ನೆರವೇರಿಸಿದರು. ಕಾರ್ಯದರ್ಶಿ ಸಣ್ಣಕೊಟ್ರಪ್ಪ, ಸದಸ್ಯರು, ಸಿಬ್ಬಂದಿ ಇದ್ದರು.

ಬಾಪೂಜಿ ಪದವಿ ಪೂರ್ವ ಕಾಲೇಜು, ಸರ್ಕಾರಿ ಐಟಿಐ ಕಾಲೇಜ್, ಪ್ರಥಮ ದರ್ಜೆ ಪದವಿ ಕಾಲೇಜ್, ನೇತಾಜಿ ಶಾಲೆ, ಎಸ್‌ಜೆಎಂ ಶಾಲೆ, ಎಸ್‌ಎಂಎಲ್ ಶಾಲೆ, ಡಿವಿಎಸ್ ಶಾಲೆ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ನಾಡಕಚೇರಿ, ಕೆನರಾ ಬ್ಯಾಂಕ್ ಸ್ವಾತಂತ್ರ ದಿನಾಚರಣೆ ನಡೆಯಿತು.  ಸಮೀಪದ ಇಸಾಮುದ್ರ ಹೊಸಹಟ್ಟಿಯಲ್ಲಿ ತಾಲ್ಲೂಕು ಪಂಚಾಯಿತಿ ಸದಸ್ಯ ಎನ್.ಟಿ. ರಾಜಕುಮಾರ್ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. 

ರಾಷ್ಟ್ರೀಯ ಹಬ್ಬಗಳ ಆಸಕ್ತಿ ಕ್ಷೀಣ: ವಿಷಾದ

ಸಿರಿಗೆರೆ:  ರಾಷ್ಟ್ರೀಯ ಹಬ್ಬಗಳ ಆಚರಣೆ ಬಗ್ಗೆ ಆಸಕ್ತಿ ಕ್ರಮೇಣ ಕ್ಷೀಣಿಸುತ್ತಿದ್ದು, ಎಲ್ಲಾ ನಾಗರಿಕರೂ ಪಾಲ್ಗೊಂಡು ಆಚರಿಸದೇ ಇರುವುದು ದುರದೃಷ್ಟಕರ ಎಂದು ತರಳಬಾಳು ಬೃಹನ್ಮಠದ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ವಿಷಾದಿಸಿದರು.

ಇಲ್ಲಿನ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ಅವರ ಬಾಲಕರ ಪ್ರಸಾದ ನಿಲಯದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.

ನಮ್ಮ ದೇಶ ಸ್ವತಂತ್ರಗೊಂಡ ಈ ದಿನದಂದು ರಾಷ್ಟ್ರದ ಉದ್ದಗಲಕ್ಕೂ ಧ್ವಜಾರೋಹಣ ನೆರವೇರಿಸಿ ಗೌರವ ಸಲ್ಲಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಆಗಿದೆ ಎಂದರು.

ಕಾರ್ಯಕ್ರಮದಲ್ಲಿ ವಿದ್ಯಾಸಂಸ್ಥೆ ಸಿಇಓ ಕೆ. ಕೆಂಚಪ್ಪ, ಆಡಳಿತಾಧಿಕಾರಿ ಪ್ರೊ.ಎಸ್.ಬಿ. ರಂಗನಾಥ್, ಪ್ರಾಂಶುಪಾಲರಾದ ಪ್ರೊ.ಟಿ. ನೀಲಾಂಬಿಕೆ, ಪ್ರೊ.ಡಿ.ಎಂ. ನಾಗರಾಜ್, ಆರ್. ಕುಮಾರಸ್ವಾಮಿ, ಸಿ.ಎಲ್. ಬಸವರಾಜ್, ಟಿ. ಗೌರಮ್ಮ, ಎಂ.ಎನ್. ಶಾಂತಾ ಉಪಸ್ಥಿತರಿದ್ದರು.

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry