ಸೋಮವಾರ, ಅಕ್ಟೋಬರ್ 14, 2019
22 °C

ಹಾರ್ವರ್ಡ್ ವಿವಿ: ಭಾರತೀಯ ನೇಮಕ

Published:
Updated:

ನ್ಯೂಯಾರ್ಕ್ (ಪಿಟಿಐ): ಪ್ರತಿಷ್ಠಿತ ಹಾರ್ವರ್ಡ್ ವಿಶ್ವವಿದ್ಯಾಲಯದ ಅಧ್ಯಕ್ಷರಿಗೆ ಹಿರಿಯ ಸಲಹೆಗಾರರಾಗಿ ಭಾರತದ ಶಿಕ್ಷಣತಜ್ಞ ಕೃಷ್ಣ ಪಾಲೆಪು ನೇಮಕಗೊಂಡಿದ್ದಾರೆ.

`ಅವರು ತಕ್ಷಣದಿಂದಲೇ ತಮ್ಮ ಹುದ್ದೆಯನ್ನು ಅಲಂಕರಿಸಲಿದ್ದಾರೆ~ ಎಂದು ವಿಶ್ವವಿದ್ಯಾಲಯದ ಅಧ್ಯಕ್ಷ ಡ್ರ್ಯೂ  ಫಾಸ್ಟ್ ಪ್ರಕಟಿಸಿದ್ದಾರೆ.

ಕೃಷ್ಣ ಅವರು ಇದೇ ವಿಶ್ವವಿದ್ಯಾಲಯದಲ್ಲಿ ಮೂರು ದಶಕಗಳಿಂದ ವಾಣಿಜ್ಯ ಆಡಳಿತ ವಿಷಯದ ಬೋಧಕರಾಗಿ ಮತ್ತು ಡೀನ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

Post Comments (+)