ಭಾನುವಾರ, ಜನವರಿ 26, 2020
25 °C

ಹಾಲಂಬಿ ಕ್ರಿಯಾಶೀಲರಾಗಲಿ

–ಹುರುಕಡ್ಲಿ ಶಿವಕುಮಾರ,ಬಾಚಿಗೊಂಡನಹಳ್ಳಿ,ಬಳ್ಳಾರಿ ಜಿ. Updated:

ಅಕ್ಷರ ಗಾತ್ರ : | |

ನ್ನಡ ಸಾಹಿತ್ಯ ಪರಿಷತ್ತನ್ನು  ಸರ್ಕಾರ ಕಡೆಗಣಿಸಿದೆ ಎಂದು ಅಧ್ಯಕ್ಷ­ಪುಂಡಲೀಕ ಹಾಲಂಬಿ ಅವರು ವೃಥಾ ಮೈ ಪರಚಿ­ಕೊಳ್ಳುತ್ತಿದ್ದಾರೆ. ಹಾಗೆ ನೋಡಿ­­ದರೆ ಅವರು ಅಧ್ಯಕ್ಷ­ರಾದ ನಂತರ ‘ಕನ್ನಡ ಸಾಹಿತ್ಯ ಪರಿ­ಷತ್ಪತ್ರಿಕೆ’ ನಿಂತೇ­ಹೋಗಿದೆ! ‘ಕನ್ನಡ ನುಡಿ’ ಕೂಡ ಸರಿ­ಯಾಗಿ ಬರುತ್ತಿಲ್ಲ!

79ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸರ್ಕಾರ ಹಾಗೂ ಸಾರ್ವಜನಿಕರು ಕೋಟ್ಯಂತರ ರೂಪಾಯಿ ದೇಣಿಗೆ ನೀಡಿ­ದರೂ ಪ್ರತಿನಿಧಿ­ಗಳಿಗೆ ಊಟವೇ ಸಿಗಲಿಲ್ಲ! ಇವೆಲ್ಲ ಸ್ವತಃ ಹಾಲಂಬಿ ಅವರ ವೈಫಲ್ಯಗಳಲ್ಲವೇ? ಇನ್ನು ಕನ್ನಡ ಮತ್ತು ಸಂಸ್ಕೃತಿ ಸಚಿವೆ ಉಮಾಶ್ರೀ ಅವರು ಕಸಾಪಕ್ಕೆ ಕೋಟ್ಯಂತರ ಹಣ ಬಿಡುಗಡೆ ಮಾಡಿದ ವರದಿ  ‘ಪ್ರಜಾವಾಣಿ’ಯಲ್ಲಿ (ಡಿ.18) ಪ್ರಕಟವಾಗಿದೆ.

ಬಳ್ಳಾರಿ ಜಿಲ್ಲಾ ಘಟಕ ಈಚೆಗೆ ಆರಂಭಿಸಿದ ಅಂತ­ರ್ಜಾಲವನ್ನು ಸ್ವತಃ ಉಮಾಶ್ರೀ ಉದ್ಘಾಟಿಸಿ  ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ವಸ್ತುಸ್ಥಿತಿ ಹೀಗಿದೆ. ಮೊದಲು ಹಾಲಂಬಿ ಅವರು ಕ್ರಿಯಾಶೀಲರಾಗಲಿ.

–ಹುರುಕಡ್ಲಿ ಶಿವಕುಮಾರ, ಬಾಚಿಗೊಂಡನಹಳ್ಳಿ, ಬಳ್ಳಾರಿ ಜಿ.

ಪ್ರತಿಕ್ರಿಯಿಸಿ (+)