ಬುಧವಾರ, ನವೆಂಬರ್ 20, 2019
27 °C

ಹಾಲನಾಯಕನಹಳ್ಳಿ: ಬ್ರಹ್ಮ ರಥೋತ್ಸವ

Published:
Updated:

ವೈಟ್‌ಫೀಲ್ಡ್:  ವರ್ತೂರು ಹೋಬಳಿ ಹಾಲನಾಯಕನಹಳ್ಳಿ ಪ್ರಸನ್ನ ಕೋದಂಡ ರಾಮಸ್ವಾಮಿ ಬ್ರಹ್ಮ ರಥೋತ್ಸವ ಮಂಗಳವಾರ ವೈಭವದಿಂದ ಡೆಯಿತು. 9 ದಿನಗಳ ಕಾಲ ನಡೆಯುವ ಈ ಜಾತ್ರೆಗೆ ಇಲ್ಲಿಯ ಧರ್ಮಕರ್ತ ಜೋಡಿದಾರ್ ಶಂಕರಮ್ಮ ಎಚ್.ವಿ.ಹನುಮಂತರೆಡ್ಡಿ ಪುತ್ರ ರಾಮರೆಡ್ಡಿ ಅವರು ಅಂಕುರಾರ್ಪಣೆ ಮಾಡುವ ಮೂಲಕ ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಿದರು.ಧ್ವಜಾರೋಹಣ, ಸಿಂಹ ವಾಹನೋತ್ಸವ, ಹನುಮಂತೋತ್ಸವ, ಶೇಷವಾಹನೋತ್ಸವ, ಕಾಶಿಯಾತ್ರೆ, ಕಲ್ಯಾಣೋತ್ಸವ, ಗಜೇಂದ್ರ ಮೋಕ್ಷ ಮತ್ತು ವಿವಿಧ ದೇವತೆಗಳ 23 ಪಲ್ಲಕ್ಕಿ ಉತ್ಸವಗಳು ಜರುಗಿದವು ಎಂದು ದೇವಾಲಯದ ಆಗಮಿಕ ಜಗನ್ನಾಥಚಾರ್ಯ ತಿಳಿಸಿದರು. ರಥೋತ್ಸವಕ್ಕೆ ಆಗಮಿಸಿದ್ದ ಭಕ್ತರಿಗೆ ಅನ್ನ ಸಂತರ್ಪಣೆ ಏರ್ಪಡಿಸಿದ್ದರು.ಬೆಂಗಳೂರು ಮೇಯರ್ ಡಿ.ವೆಂಕಟೇಶಮೂರ್ತಿ ಸೇರಿದಂತೆ ವಿವಿಧ ಗಣ್ಯರು ರಥೋತ್ಸವಕ್ಕೆ ಆಗಮಿಸಿದ್ದರು. ಸುತ್ತಮುತ್ತಲ ಗ್ರಾಮಗಳ ನೂರಾರು ಭಕ್ತರು ರಥ ಎಳೆದು ಸಂಭ್ರಮಿಸಿದರು.

ಪ್ರತಿಕ್ರಿಯಿಸಿ (+)