ಶುಕ್ರವಾರ, ನವೆಂಬರ್ 15, 2019
23 °C

ಹಾಲಹರವಿ ಬಳಿ ಐವತ್ತೇ ಗ್ರಾಂ ಬಂಗಾರ!

Published:
Updated:

ಹುಬ್ಬಳ್ಳಿ: ಕೈಯ್ಯಲ್ಲಿರುವ ಹಣ ರೂ 6.25 ಲಕ್ಷ. ಪತ್ನಿಯ ಬಳಿ ರೂ1ಲಕ್ಷ , ಟಾಟಾ ಸುಮೋ ಮತ್ತು ಮಹೀಂದ್ರಾ ಎಕ್ಸ್‌ಯುವಿ ವಾಹನಗಳನ್ನು ಹೊಂದಿರುವ ಹುಬ್ಬಳ್ಳಿ-ಧಾರವಾಡ ಪೂರ್ವ (ಮೀಸಲು) ಹಾಲಿ ಶಾಸಕ ವೀರಭದ್ರಪ್ಪ ಹಾಲಹರವಿ ಬಳಿ ಬಂಗಾರ ಮಾತ್ರ ಬರೇ 50 ಗ್ರಾಂ. ಬೆಳ್ಳಿ 30 ಗ್ರಾಂ ಇದೆಯಂತೆ.ಬುಧವಾರ ನಾಮಪತ್ರದೊಂದಿಗೆ ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ  ತಮ್ಮ ಅಫಿಡವಿಟ್‌ನಲ್ಲಿ ಈ ಮಾಹಿತಿಯನ್ನು ಅವರು ನೀಡಿದ್ದಾರೆ.ಹಾಲಹರವಿಯವರ ಪತ್ನಿ ಲತಾ ಹಾಲಹರವಿ ಬಳಿ ಬಳಿ  270 ಗ್ರಾಂ ಬಂಗಾರವಿದೆ. 100 ಗ್ರಾಂ ಬೆಳ್ಳಿ ಇದೆ.  ಇಬ್ಬರು ಮಕ್ಕಳ  ಬಳಿ ತಲಾ 150 ಗ್ರಾಂ ಮತ್ತು 175 ಗ್ರಾಂ ಬಂಗಾರವಿದೆ. ಇನ್ನು ಅಪ್ಪ ಹಾಗೂ ಅಮ್ಮನ ಬಳಿ ತಲಾ 120 ಮತ್ತು 360 ಗ್ರಾಂ ಬಂಗಾರ ಹಾಗೂ 200 ಗ್ರಾಂ ಬೆಳ್ಳಿಯಿದೆ. ಒಟ್ಟಾರೆ ಚರಾಸ್ತಿ ಮೌಲ್ಯ ರೂ 31.59 ಲಕ್ಷ, ಲತಾ  (ಪತ್ನಿ) ಚರಾಸ್ತಿ  ಮೌಲ್ಯ ರೂ 3.14 ಲಕ್ಷ.    ಸೂರಜ್ (ಮಗ) 1.07 ಲಕ್ಷ, ಸೃಷ್ಟಿ (ಮಗಳು)ರೂ 2.08 ಲಕ್ಷ, ಹುಲಗಪ್ಪ (ತಂದೆ) ರೂ 2.86 ಲಕ್ಷ, ಬಸಮ್ಮ (ತಾಯಿ) ರೂ 6.63 ಲಕ್ಷ.ಸ್ಥಿರಾಸ್ತಿಗಳ ಮೌಲ್ಯ: ಸ್ಥಿರಾಸ್ತಿಗಳ  ಒಟ್ಟು ಮೌಲ್ಯ ರೂ43.63 ಲಕ್ಷ. ಕೃಷಿಭೂಮಿ  ಹೊಂದಿಲ್ಲ ಹಾಲಹರವಿ, ಬೆಂಗಳೂರಿನ ಎಚ್‌ಎಸ್‌ಆರ್ ಬಡಾವಣೆಯಲ್ಲಿ ರೂ10 ಲಕ್ಷ  ಮೌಲ್ಯದ ನಿವೇಶನ  ಹೊಂದಿದ್ದಾರೆ. ಉಳಿದಂತೆ ಧಾರವಾಡದ ರಾಯಾಪುರದಲ್ಲಿ ರೂ 12.13 ಲಕ್ಷ ಮೌಲ್ಯದ ವಾಣಿಜ್ಯ ಕಟ್ಟಡ ಹೊಂದಿದ್ದಾರೆ.ದೇಶಪಾಂಡೆ ನಗರದಲ್ಲಿ ಮತ್ತು ಗಿರಣಿ ಚಾಳದಲ್ಲಿ ಎರಡು ಮನೆ ಹೊಂದಿದ್ದು ಅವುಗಳ ಮಾರುಕಟ್ಟೆ ಮೌಲ್ಯ ರೂ 21.5 ಲಕ್ಷ.

 

ಇನ್ನುಳಿದಂತೆ ವಿವಿಧ ಬ್ಯಾಂಕ್‌ಗಳಲ್ಲಿ  ರೂ 33.97 ಲಕ್ಷ ಸಾಲವನ್ನು ಹೊಂದಿದ್ದಾರೆ.

ಪ್ರತಿಕ್ರಿಯಿಸಿ (+)